ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು–ಕಾಶ್ಮೀರ ಏಕಾಂಗಿ ಸ್ಪರ್ಧೆಗೆ ಬಿಜೆಪಿ ನಿರ್ಧಾರ

Last Updated 27 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಜಮ್ಮು (ಪಿಟಿಐ): ‘ವಿಧಾನಸಭಾ ಚುನಾವಣೆ ಎದುರಿ­ಸಲು ನಾವು ಯಾವುದೇ ಚುನಾವಣಾ ಪೂರ್ವ ಒಕ್ಕೂಟಕ್ಕೆ ಸೇರು­ವುದಿಲ್ಲ, ಎಲ್ಲಾ 87 ಕ್ಷೇತ್ರಗಳಿಂದಲೂ ಪಕ್ಷದ ಅಭ್ಯರ್ಥಿ­ಗಳು ಸ್ಪರ್ಧಿಸಲಿದ್ದಾರೆ’ ಎಂದು ಸಂಸದ ಮತ್ತು ಬಿಜೆಪಿಯ ಜಮ್ಮು ಮತ್ತು ಕಾಶ್ಮೀರ ಘಟಕದ ಮುಖ್ಯಸ್ಥ ಅವಿನಾಶ್ ರೈ ಖನ್ನಾ ಹೇಳಿದ್ದಾರೆ.

‘ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪಕ್ಷವು ಶೀಘ್ರವೇ ಪ್ರಕಟಿಸಲಿದೆ. ಕಳಂಕಿತ­ರಲ್ಲದ, ಉತ್ತಮ ಆಡಳಿತ ನೀಡಬಲ್ಲ ಅಭ್ಯರ್ಥಿಗಳನ್ನು ಪಕ್ಷ ಆಯ್ಕೆ ಮಾಡ­ಲಿದೆ. ಈ ಕುರಿತು ಪಕ್ಷದ ಚುನಾವಣಾ ಸಮಿತಿ  ಸೋಮವಾರ ಸಭೆ ನಡೆಸಲಿದೆ. ನಾವು 44ಕ್ಕೂ ಹೆಚ್ಚು   ಸ್ಥಾನಗಳನ್ನು ಗೆಲ್ಲುತ್ತೇವೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ರಾಜ್ಯದಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿ­ಸುವುದು ನಮ್ಮ ಮುಖ್ಯ ಗುರಿ,  ಕಾಶ್ಮೀರದ ಜನತೆಗೆ ನಾವು ಭ್ರಷ್ಟಾಚಾರ, ಭಯದ ವಾತಾವರಣ ಮತ್ತು  ರಾಜಕಾರಣದ ಏಕಸ್ವಾಮ್ಯದಿಂದ ಮುಕ್ತ­ವಾದ ಆಡಳಿತ ನೀಡುತ್ತೇವೆ. ಜನರು ನಮಗೂ ಒಂದು ಅವಕಾಶ ನೀಡಬೇಕು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT