ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು- ಕಾಶ್ಮೀರ ಅತಂತ್ರ

ಜಾರ್ಖಂಡ್‌ ಬಿಜೆಪಿಗೆ: ಮತಗಟ್ಟೆ ಸಮೀಕ್ಷೆ
Last Updated 21 ಡಿಸೆಂಬರ್ 2014, 11:35 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಜಾರ್ಖಂಡ್‌ ಮತ್ತು ಜಮ್ಮು ಕಾಶ್ಮೀರದ ಬಹು ಹಂತ­ಗಳ ಚುನಾವಣೆ ಶನಿವಾರ ಮುಕ್ತಾ­ಯ­ಗೊಂಡಿತು. 81 ಸದಸ್ಯ ಬಲದ ಜಾರ್ಖಂಡ್‌ನಲ್ಲಿ ಬಿಜೆಪಿಗೆ ಬಹುಮತ ದೊರೆಯ­ಲಿದೆ; ಆದರೆ ಜಮ್ಮು ಕಾಶ್ಮೀರ­­ದಲ್ಲಿ ಅತಂತ್ರ ಸ್ಥಿತಿ ನಿರ್ಮಾಣ­ವಾಗುವ ಸಾಧ್ಯತೆಗಳು ಇವೆ ಎಂದು ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿವೆ. 

ಜಮ್ಮು ಕಾಶ್ಮೀರದಲ್ಲಿ ಮುಫ್ತಿ ಮಹಮ್ಮದ್‌ ಸಯೀದ್‌ ಅವರ ಪಿಡಿಪಿ ಅತಿ ದೊಡ್ಡ ಪಕ್ಷವಾಗಿ ಹೊರ­ಹೊಮ್ಮಿ­ದರೂ ಯಾರಿಗೂ ನಿಚ್ಚಳ ಬಹುಮತ ದೊರೆಯುವುದಿಲ್ಲ ಎಂಬುದು ಎರಡು ಪ್ರತ್ಯೇಕ ಸಮೀಕ್ಷೆಗಳ ಲೆಕ್ಕಾಚಾರ.
ಕಳೆದ ಚುನಾವಣೆಯಲ್ಲಿ ಜಾರ್ಖಂಡ್‌­­ನಲ್ಲಿ ಬಿಜೆಪಿ ಮತ್ತು ಜೆಎಂಎಂ ತಲಾ 18ಮತ್ತು ಕಾಂಗ್ರೆಸ್‌ 14 ಕಡೆ ಗೆದ್ದಿದ್ದವು. ಹೀಗಾಗಿ ಪದೇ ಪದೇ ಸರ್ಕಾರ ಬದಲಾಗಿತ್ತು.

ಹೋದ ಸಲ11 ಕ್ಷೇತ್ರಗಳನ್ನು ಗೆದ್ದಿದ್ದ ಜೆವಿಎಂ ಈ ಬಾರಿ ಕಳಪೆ ಸಾಧನೆ ಮಾಡ­ಬಹುದು ಎಂದೂ ಅಂದಾಜಿಸಲಾಗಿದೆ.

ಕಣಿವೆ ರಾಜ್ಯದಲ್ಲಿ: 87 ಸದಸ್ಯ ಬಲದ ಜಮ್ಮ ಕಾಶ್ಮೀರದಲ್ಲಿ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ಬಿಜೆಪಿಯು ‘ಮಿಷನ್‌– 44’ ಗುರಿ ಈಡೇರುವ ಸೂಚನೆಗಳು ಇಲ್ಲ.

ಇಲ್ಲಿ ಬಿಜೆಪಿ 27–33 ಸ್ಥಾನ­ಗಳ­ನ್ನಷ್ಟೇ ಪಡೆಯಬಹುದು. ಈ ಪೈಕಿ ಜಮ್ಮು ವಲಯದಲ್ಲೇ 25 ರಿಂದ 31 ಕಡೆ ಗೆಲ್ಲಬಹುದು ಎಂಬುದು ಇಂಡಿಯಾ ಟಿ.ವಿ ಅಂದಾಜು.

ರಾಜ್ಯದಲ್ಲಿ ಈಗ ಅಧಿಕಾರ ನಡೆಸು­ತ್ತಿ­ರುವ ಒಮರ್‌ ಅಬ್ದುಲ್ಲಾ ಅವರ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷವು ಶೋಚ­ನೀಯ ಸ್ಥಿತಿ ಕಂಡು ಮೂರನೇ ಸ್ಥಾನಕ್ಕೆ ಕುಸಿಯಬಹುದು ಎಂದೂ ಅದು ಹೇಳಿದೆ. ಕಾಶ್ಮೀರ ಕಣಿವೆಯಲ್ಲಿ ಭಾರಿ ಸಾಧನೆ ಮಾಡಲಿರುವ ಪಿಡಿಯು ಈ ವಲಯ­ದಲ್ಲಿ 29 ರಿಂದ 35 ಸ್ಥಾನ­ಗಳಲ್ಲಿ ವಿಜಯಿಯಾಗಬಹುದು. ಇಲ್ಲಿರುವ ಒಟ್ಟು ಸ್ಥಾನಗಳ ಬಲ 46. ನ್ಯಾಷನಲ್‌ ಕಾನ್ಫರೆನ್‌್ಸ 7–13 ಸ್ಥಾನ­ಗಳಲ್ಲಿ ಗೆದ್ದರೆ ಕಾಂಗ್ರೆಸ್‌ ಹೆಚ್ಚೆಂದರೆ 2 ಸ್ಥಾನಗಳನ್ನಷ್ಟೇ ಗೆಲ್ಲಬಹುದು.

ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರ ಕಣಿವೆಯಲ್ಲಿ ಭಾರಿ ಪ್ರಚಾರ ನಡೆಸಿ­ದ್ದರೂ ಅಲ್ಲಿ ಪಕ್ಷವು ಶೂನ್ಯ ಸಂಪಾದನೆಯನ್ನಷ್ಟೇ ಮಾಡಬಹುದು; ಹೆಚ್ಚೆಂದರೆ, ಅದು ಒಂದು ಕ್ಷೇತ್ರ­ದಲ್ಲಷ್ಟೇ ಗೆಲುವಿನ ರುಚಿ ಸವಿಯ­ಬಹುದು ಎಂದು ಸಮೀಕ್ಷೆ ತಿಳಿಸಿದೆ.

2008ರಚುನಾವಣೆ­ಯಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ 28, ಪಿಡಿಪಿ 21, ಕಾಂಗ್ರೆಸ್‌ 17 ಮತ್ತು ಬಿಜೆಪಿ 11 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದವು. ಇತರೆ ಅಭ್ಯರ್ಥಿ­ಗಳು 10 ಕಡೆ ವಿಜಯದ ನಗೆ ಬೀರಿದ್ದರು.

ದಾಖಲೆ
ಜಮ್ಮು ಕಾಶ್ಮೀರದಲ್ಲಿ 25 ವರ್ಷ­ಗಳಲ್ಲಿ ಇದೇ ಮೊದಲ ಬಾರಿಗೆ ಸರಾಸರಿ ಮತದಾನ ಶೇ 65­ರಷ್ಟಾಗಿದೆ.  ಜಾರ್ಖಂಡ್‌ ನಲ್ಲಿಯೂ ಐದು ಹಂತಗಳ ಸರಾಸರಿ ಮತದಾನ ಶೇ 66ರಷ್ಟಾಗಿದೆ. ಇದು ‘ಐತಿಹಾಸಿಕ ಹಾಗೂ ಅನಿರೀಕ್ಷಿತ’ ಎಂದು ಚುನಾವಣಾ ಆಯೋಗ ಬಣ್ಣಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT