ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು-–ಕಾಶ್ಮೀರಕ್ಕೆ ತೆರಳಿದ ವೈದ್ಯರ ತಂಡ

Last Updated 18 ಸೆಪ್ಟೆಂಬರ್ 2014, 19:49 IST
ಅಕ್ಷರ ಗಾತ್ರ

ಬೆಂಗಳೂರು: ಅತಿವೃಷ್ಟಿ ಮತ್ತು ಭೀಕರ ಪ್ರವಾಹದಿಂದ ತತ್ತರಿಸಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸರ್ಕಾರವು ಐವರ ವೈದ್ಯರ ತಂಡವನ್ನು ಗುರುವಾರ ಕಳುಹಿಸಿದೆ.

ವಿಕಾಸಸೌಧದಲ್ಲಿ ನಡೆದ ಸುದ್ದಿ­ಗೋಷ್ಠಿ­ಯಲ್ಲಿ ಈ ವಿಷಯ ತಿಳಿಸಿದ  ಆರೋಗ್ಯ ಸಚಿವ ಯು.ಟಿ. ಖಾದರ್‌, ‘ಪ್ರವಾಹದ ನಂತರ ಸಾಂಕ್ರಾ­ಮಿಕ ರೋಗ ಹರಡುವ ಭೀತಿ ಎದುರಿ­ಸು­ತ್ತಿ­ರುವ ಜಮ್ಮು ಮತ್ತು ಕಾಶ್ಮೀರಕ್ಕೆ 17 ವೈದ್ಯರನ್ನು ಕಳುಹಿಸಲು ನಿರ್ಧರಿಸ­ಲಾಗಿದೆ. ಐವರ ವೈದ್ಯರ ತಂಡ, ಅಗತ್ಯ ಔಷಧ­ಗಳೊಂದಿಗೆ ಅಲ್ಲಿಗೆ ಪ್ರಯಾಣ ಬೆಳೆಸಿದೆ. ಅಲ್ಲಿರುವ ಪರಿಸ್ಥಿತಿಯನ್ನು ವೈದ್ಯರ ತಂಡ ಅವಲೋಕಿಸಲಿದ್ದು, ನಂತರ ಉಳಿದ ವೈದ್ಯ­ರನ್ನು ಕಳುಹಿಸ­ಲಾಗುವುದು. ಎಲ್ಲ ರೀತುಯ ಜವಾಬ್ದಾರಿ ಹೊರಲು ಸಿದ್ಧ ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT