ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಲಲಿತಾ ಪ್ರಕರಣ: ಸೆ. 27ರಂದು ಅಂತಿಮ ಆದೇಶ

Last Updated 16 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ತಮಿಳುನಾಡು ಮುಖ್ಯ-ಮಂತ್ರಿ ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಅಂತಿಮ ಆದೇಶವನ್ನು ಸೆ.27ರಂದು ಪರಪ್ಪನ ಅಗ್ರಹಾರ ವಿಶೇಷ ನ್ಯಾಯಾಲಯ-ದಲ್ಲೇ ಪ್ರಕಟಿಸುವಂತೆ ನಗರ ಸಿವಿಲ್‌ ನ್ಯಾಯಾಲಯವು ಮಂಗಳವಾರ ಸೂಚಿಸಿದೆ.

ತಮಗೆ ಎಲ್‌ಟಿಟಿಇ ಹಾಗೂ ಕೇರಳದ ಕೆಲ ಸಂಘಟನೆಗಳಿಂದ ಜೀವ ಬೆದರಿಕೆ ಇದೆ. ಹೀಗಾಗಿ ಹೆಚ್ಚಿನ ಜನಸಂದಣಿ ಇರುವ ಬೆಂಗಳೂರು ಸಿವಿಲ್ ನ್ಯಾಯಾಲಯಗಳ ಕಟ್ಟಡಕ್ಕೆ ಭದ್ರತೆಯೊಂದಿಗೆ ಬರುವುದು ಕಷ್ಟ-ವಾಗು-ತ್ತದೆ. ಆದ್ದರಿಂದ ನಗರದ ಹೊರ ವಲಯದಲ್ಲಿರುವ ಪರಪ್ಪನ ಅಗ್ರಹಾರದ ವಿಶೇಷ ನ್ಯಾಯಾಲಯ-ದಲ್ಲೇ ಆದೇಶ ಪ್ರಕಟಿಸಬೇಕೆಂದು ಜಯಲಲಿತಾ ಅವರು ನ್ಯಾಯಾಲಯಕ್ಕೆ ಸೋಮವಾರ  ಅರ್ಜಿ ಸಲ್ಲಿಸಿದ್ದರು.

ಆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ಜಯಲಲಿತಾ ಅವರಿಗೆ ಪೊಲೀಸ್ ಭದ್ರತೆ ಒದಗಿಸುವ ಬಗ್ಗೆ ನಗರ ಪೊಲೀಸ್ ಕಮಿಷನರ್ ಎಂ.ಎನ್‌.ರೆಡ್ಡಿ ಅವರಿಂದ ಮಾಹಿತಿ ಕೇಳಿದ್ದರು.

ಮಂಗಳವಾರ ನ್ಯಾಯಾಲಯಕ್ಕೆ ಹಾಜರಾದ ರೆಡ್ಡಿ ಅವರು, ‘ಭದ್ರತೆ ದೃಷ್ಟಿಯಿಂದ ಆದೇಶವನ್ನು ಪರಪ್ಪನ ಅಗ್ರಹಾರದ ನ್ಯಾಯಾಲಯಕ್ಕೆ ವರ್ಗಾ-ವಣೆ ಮಾಡುವುದು ಸೂಕ್ತ’ ಎಂದು ಮಾಹಿತಿ ನೀಡಿದರು. ಹೀಗಾಗಿ ಆ  ನ್ಯಾಯಾಲಯದಲ್ಲೇ ಆದೇಶ ಪ್ರಕಟಿಸು-ವುದಾಗಿ ನ್ಯಾಯಾಧೀಶರು ಸೂಚಿಸಿದರು.

ಮೊದಲು ಸಿಟಿ ಸಿವಿಲ್‌ ನ್ಯಾಯಾಲಯದಲ್ಲೇ ಅಂತಿಮ ಆದೇಶ ಪ್ರಕಟಿಸಲು ಸೆ.20ರಂದು ದಿನಾಂಕ ನಿಗದಿಗೊಳಿಸಲಾಗಿತ್ತು. ಆದರೆ, ಈಗ ಆದೇಶ ಮತ್ತೊಂದು ನ್ಯಾಯಾಲಯ-ದಲ್ಲಿ ಪ್ರಕಟವಾಗುವುದರಿಂದ ಪ್ರಕರಣಕ್ಕೆ ಸಂಬಂಧಪಟ್ಟ ದಾಖಲೆ-ಗಳನ್ನು ಅಲ್ಲಿಗೆ ಸ್ಥಳಾಂತರಿಸಬೇಕಿದೆ. ಇದಕ್ಕೆ ಕಾಲಾವಕಾಶ ಬೇಕಾಗುವುದ-ರಿಂದ ಆದೇಶದ ದಿನಾಂಕವನ್ನು ಸೆ.27ಕ್ಕೆ ಮುಂದೂಡಲಾಗಿದೆ.
ಆ ದಿನ ಪ್ರಕರಣದ ಎಲ್ಲ ಆರೋಪಿಗಳು ಹಾಜರಿರಬೇಕು ಎಂದು ನ್ಯಾಯಾಲಯವು ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT