ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಾಗೆ ಶಿಕ್ಷೆ: ನಟಿ ಆತ್ಮಹತ್ಯೆ ಯತ್ನ

Last Updated 8 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಚೆನ್ನೈ (ಐಎಎನ್‌ಎಸ್‌): ತಮಿಳು­ನಾಡು ಮಾಜಿ ಮುಖ್ಯಮಂತ್ರಿ ಜಯ­ಲಲಿತಾ ಅವರು ಜೈಲಿನಲ್ಲಿ­ರುವು­ದನ್ನು ಪ್ರತಿಭಟಿಸಿ ತಮಿಳು ನಟಿ ಮಾಯಾ ಬುಧವಾರ ಚೆನ್ನೈ ಪೊಲೀಸ್‌ ಆಯುಕ್ತರ ಕಚೇರಿ ಮುಂದೆ ಆತ್ಮಹತ್ಯೆಗೆ ಯತ್ನಿಸಿದರು.

‘ಮಾಯಾ ತಮ್ಮ ಪುತ್ರಿ­ಯೊಂದಿಗೆ ಸೀಮೆ ಎಣ್ಣೆ ಡಬ್ಬ ಹಿಡಿದು ಬಂದಿ­ದ್ದರು. ಇಬ್ಬರೂ ಮೈ­ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದರು. ಅದನ್ನು ಕರ್ತವ್ಯ­ದಲ್ಲಿದ್ದ ಅಧಿ­ಕಾರಿಗಳು ತಡೆ­ದರು’ ಎಂದು ಪೊಲೀಸರು ತಿಳಿಸಿ­ದ್ದಾರೆ.

ಅಕ್ರಮ ಆಸ್ತಿ ಪ್ರಕರಣದಲ್ಲಿ ಜಯಲಲಿತಾ ಅವರು ನಾಲ್ಕು ವರ್ಷ­ಗಳ ಜೈಲು ಮತ್ತು ₨ ನೂರು ಕೋಟಿ ದಂಡದ ಶಿಕ್ಷೆಗೆ ಒಳಗಾಗಿದ್ದಾರೆ.
ಮಾಯಾ ಮತ್ತು ಅವರ ಪುತ್ರಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದರು.

‘ಜಯಲಲಿತಾ ಅವರಿಗಾಗಿ ನಾನು ಮತ್ತು ನನ್ನ ಮಗಳು ಜೀವವನ್ನೇ ತ್ಯಜಿಸಲು ನಿರ್ಧರಿಸಿದ್ದೇವೆ’ ಎಂದು ತನಿಖೆ ವೇಳೆ ಮಾಯಾ ಹೇಳಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಷ್ಟೊಂದು ಜನಪ್ರಿಯ ನಟಿಯಲ್ಲದ ಮಾಯಾ, ‘ಗರ್ಜನೈ’, ‘ಅಮರಕಾವಿಯಂ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT