ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಪಾತದ ಹೆಸರಲ್ಲಿ ಕದಡಿದ ನೀರು

ದೂಧ್‌ ಸಾಗರ್‌
Last Updated 26 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನಿರ್ಮಾಣ: ಚಾಮುಂಡೇಶ್ವರಿ ಸ್ಟುಡಿಯೊ, ನಿರ್ದೇಶಕ: ಸ್ಯಾಮ್ಯುಯೆಲ್‌ ಟೋನಿ
ತಾರಾಗಣ: ಅಕ್ಷಯ್‌, ದೀಪಿಕಾ ದಾಸ್‌, ನೀನಾಸಂ ಅಶ್ವತ್ಥ್‌, ಸುಚಿತ್ರಾ, ಸುಮಿತ್ರಾ, ಮಿತ್ರ, ರಮ್ಯಾ ಬಾರ್ನ, ತಬಲಾ ನಾಣಿ ಮತ್ತಿತರರು


ನಾಯಕ ಆಗಾಗ ಆಕಾಶ–ಭೂಮಿಯತ್ತ ಮುಖ ಮಾಡುತ್ತಾನೆ. ಆತನ ಮುಖದಲ್ಲಿ ಭಾವನೆ-ಗಳೇನೂ ಕಾಣದಿದ್ದರೂ ಮತ್ತೆ ಮತ್ತೆ ಪ್ರತ್ಯಕ್ಷವಾಗುವ ಕಪ್ಪು ಬಿಳುಪಿನ ದೃಶ್ಯ ತುಣುಕುಗಳು ಆತನ ಬದುಕಿನಲ್ಲಿ ಘೋರ ದುರಂತ ನಡೆದಿದೆ ಎಂಬುದನ್ನು  ಪ್ರೇಕ್ಷಕನಿಗೆ ನೆನಪಿ-ಸುತ್ತಿರುತ್ತವೆ. ಕೊನೆಯವರೆಗೂ ನಾಯಕ ಭಾವ ರಹಿತ ನಿರ್ಲಿಪ್ತ ಮುಖದೊಂದಿಗೇ ಮಾತನಾಡುತ್ತಾನೆ, ಹೊಡೆ-ದಾಡುತ್ತಾನೆ, ನರ್ತಿಸುತ್ತಾನೆ. ಅಬ್ಬರವೂ ಇಲ್ಲ, ರಭಸವೂ ಇಲ್ಲ, ನೀರು ಧುಮ್ಮಿಕ್ಕುವಾಗ ಕಾಣುವ ರುದ್ರರಮಣೀ-ಯತೆಯೂ ಇಲ್ಲ.

‘ದೂಧ್ ಸಾಗರ್’ ಜಲಪಾತದ ಸೌಂದರ್ಯ ತೋರಿಸುವ ಆಸೆ ಹುಟ್ಟಿಸಿ ನಿರ್ದೇಶಕ ಸ್ಯಾಮ್ಯುಯೆಲ್‌ ಟೋನಿ ನಿಂತ ಹಳೆಯ ನೀರನ್ನೇ ಒಂದಷ್ಟು ಕದಡಿ ಮುಂದಿಟ್ಟಿದ್ದಾರೆ. ಪ್ರೇಕ್ಷಕನ ಸಂಯಮದ ಪರೀಕ್ಷೆಯನ್ನೂ ಮಾಡಿದ್ದಾರೆ. ‘ದೂಧ್‌ ಸಾಗರ್‌’ಗೆ ತಲುಪುವ ಹಾದಿ ಉಂಟುಮಾಡುವ ಆಯಾಸಕ್ಕಿಂತ ಅಧಿಕ ಆಯಾಸ ಮೂಡಿಸುತ್ತದೆ ‘ದೂಧ್‌ ಸಾಗರ್‌’ ಸಿನಿ ಕಥನದ ಪಯಣ.

ನಿರ್ದೇಶಕರ ಕಲ್ಪನೆಯಲ್ಲಿ ‘ದೂಧ್‌ ಸಾಗರ್’ ಪ್ರೀತಿಯ ರೂಪಕ. ‘ಮೈನಾ’ ಚಿತ್ರದಲ್ಲಿ ದೂಧ್‌ ಸಾಗರ್‌ ಜಲಪಾತ-ವನ್ನು ಪ್ರೀತಿಯ ಸಂವಾದಿಯಂತೆ ಚಿತ್ರಿಸಲಾಗಿತ್ತು. ಆದರೆ ಪ್ರೀತಿಯನ್ನು ನವಿರಾಗಿ ಕಟ್ಟಿಕೊಡುವ, ಗಟ್ಟಿಯಾದ ಚಿತ್ರ-ಕಥೆಗೆ ಹದವಾಗಿ ಮನರಂಜನೆ ಬೆರೆಸುವ ಸೂಕ್ಷ್ಮ ಕಲೆಗಾರಿ
ಕೆ-ಯೇ ಇಲ್ಲಿ ಕಾಣುವುದಿಲ್ಲ. ಸಕಲೇಶಪುರದಲ್ಲಿಯೇ ಸುತ್ತಾ-ಡಿಸುವ ನಿರ್ದೇಶಕರು ದೂಧ್‌ ಸಾಗರ್‌ವರೆಗೆ ಪ್ರೇಕ್ಷಕನನ್ನು ಕರೆದೊಯ್ಯಲು ಮನಸ್ಸು ಮಾಡಿಲ್ಲ.

ನಾಯಕ ಹಳ್ಳಿ ಹುಡುಗ. ತನ್ನ ಪ್ರೀತಿಯನ್ನು ಕಳೆದುಕೊಂಡ ಆತ ಮಾಡದ ತಪ್ಪಿಗೆ ಊರ ಜನರ ಕೈಯಲ್ಲಿ ಸಾಯುವುದ-ರಿಂದ ತಪ್ಪಿಸಿಕೊಂಡು ಹೊರಟಿದ್ದಾನೆ. ಆತನದು ಗಮ್ಯ-ವಿಲ್ಲದ ಪಯಣ. ದಾರಿಯಲ್ಲಿ ಆತನಿಗೆ ಎದುರಾಗುವ ಯುವತಿ, ತನ್ನಿಂದ ದೂರಾದ ಪ್ರೇಯಸಿ ಇಬ್ಬರದೂ ಒಂದೇ ಚಹರೆ. ಆಕೆಯ ಪಯಣಕ್ಕೂ ಗೊತ್ತು ಗುರಿಯಿಲ್ಲ. ‘ದೂಧ್‌ ಸಾಗರ್‌’ಗೆ ಹೊರಟಿದ್ದೇನೆ ಎನ್ನುವ ಆಕೆಯ ಬದುಕಿ-ನಲ್ಲಿಯೂ ದುರಂತ ಪ್ರೇಮಕಥೆಯಿದೆ.

ಇಬ್ಬರನ್ನೂ ಕಾರಿ-ನಲ್ಲಿ ಕರೆದುಕೊಂಡು ಹೋಗಿ ಸಹಾಯ ಮಾಡು-ವಾತನದೂ ದುರಂತಮಯ ಬದುಕು. ಕಳೆದುಕೊಂಡ ಪ್ರೇಮಿಯ ನೆನಪಿನಲ್ಲಿ ಸಾಗುವ ಆಕೆಯಲ್ಲಿ ನಾಯಕನೆಡೆಗೆ ಪ್ರೀತಿ ಚಿಗುರುತ್ತದೆ. ಅಪರಾಧಿ ಸ್ಥಾನದಲ್ಲಿ ನಿಂತ ನಾಯಕನ ಕಥೆ ಕೇಳಿ ಮರುಗುವ ಆಕೆ, ಆತನ ನೋವಿಗೆ ಮುಲಾಮು ಹಚ್ಚಲು ಮುಂದಾಗುತ್ತಾಳೆ. ಪ್ರೇಕ್ಷಕ ನಿರಾಳತೆಯಿಂದ ನಿಟ್ಟುಸಿರುಬಿಡುತ್ತಾನೆ.

ಚೊಚ್ಚಲ ಚಿತ್ರದಲ್ಲಿ ನಾಯಕ ಅಕ್ಷಯ್‌ ತೀವ್ರ ನಿರಾಸೆ ಮೂಡಿಸುತ್ತಾರೆ. ಅಭಿನಯ ಅವರಿಂದ ಬಲು ದೂರ. ದೀಪಿಕಾ ದಾಸ್‌ ಅಭಿನಯವೇ ತುಸು ನೆಮ್ಮದಿ ನೀಡುತ್ತದೆ. ಚಿತ್ರದಲ್ಲಿ ಸಕಾರಾತ್ಮಕ ಎನಿಸುವುದು ಎರಡೇ ಅಂಶಗಳು. ನಾಗೇಶ್‌ ಆಚಾರ್ಯರ ಕ್ಯಾಮೆರಾ ಕಣ್ಣು ಮುದ ನೀಡುವಂತೆ ಹಸಿರನ್ನು ಸೆರೆ ಹಿಡಿದಿದೆ. ಗೌತಮ್‌ ಶ್ರೀವತ್ಸ ಅವರ ಸಂಗೀತ ನೆನಪಿನಲ್ಲಿ ಉಳಿಯಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT