ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಮಂಡಳಿ: ₹50 ಕೋಟಿ ಬಾಕಿ ವಸೂಲಿ

Last Updated 6 ಮೇ 2016, 19:47 IST
ಅಕ್ಷರ ಗಾತ್ರ

ಬೆಂಗಳೂರು:  ಪ್ರೋರೇಟಾ ಶುಲ್ಕ (ನೀರಿನ ಸಂಪರ್ಕ ಪಡೆಯಲು ಏಕಕಂತಿನಲ್ಲಿ ಪಾವತಿಸುವ ಶುಲ್ಕ) ಹಾಗೂ ಬಾಕಿ ನೀರಿನ ಬಿಲ್‌ಗೆ ಸಂಬಂಧಿಸಿದಂತೆ ಜಲಮಂಡಳಿ ಅಧಿಕಾರಿಗಳು ಬುಧವಾರ ಕಾರ್ಯಾಚರಣೆ ನಡೆಸಿ ₹1.55 ಕೋಟಿ  ವಸೂಲಿ ಮಾಡಿದರು.

ದಕ್ಷಿಣ ವಿಭಾಗದಲ್ಲಿ  ಅತಿ ಹೆಚ್ಚು ಅಂದರೆ ₹32.57 ಲಕ್ಷ  ಸಂಗ್ರಹವಾಗಿದೆ. ಪೂರ್ವ ವಿಭಾಗದಲ್ಲಿ ₹31.57 ಲಕ್ಷ, ನೈರುತ್ಯ ₹22.01, ವಾಯವ್ಯ ₹15.28 ಲಕ್ಷ, ಪಶ್ಚಿಮ ₹13.80, ಆಗ್ನೇಯ  ₹ 14.78 ಲಕ್ಷ, ಕೇಂದ್ರ ₹10.52 ಲಕ್ಷ,  ಈಶಾನ್ಯ ₹7.60 ಲಕ್ಷ ಹಾಗೂ ಉತ್ತರ ವಿಭಾಗದಲ್ಲಿ ₹7.69 ಲಕ್ಷ ಸಂಗ್ರಹಿಸಲಾಗಿದೆ.

ದೀರ್ಘಕಾಲದಿಂದ ಬಾಕಿ ಉಳಿದ ಶುಲ್ಕ ವಸೂಲಾತಿ ಕಾರ್ಯಾಚರಣೆಯನ್ನು ಮಂಡಳಿ  ನವೆಂಬರ್ 25 ರಿಂದ  ಆರಂಭಿಸಿದ್ದು  ಪ್ರತಿ ಬುಧವಾರದಂದು ನಡೆಸಲಾಗುತ್ತಿತ್ತು.  ಮೇ  4ರವರೆಗೆ ಒಟ್ಟಾರೆ ₹50. 64 ಕೋಟಿ ಸಂಗ್ರಹ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT