ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗೃತಿಗಾಗಿ ಜಾಗತಿಕ ಕವಿಗಳ ಜಾಥಾ

Last Updated 17 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕವಿಗಳಿಂದ ಸಾಮಾಜಿಕ ಬದಲಾವಣೆ ಸಾಧ್ಯವೆ? ಹೌದು ಎನ್ನು­ತ್ತಾರೆ ಅದಕ್ಕಾಗಿ ಪಣತೊಟ್ಟಿ­ರುವ ವಿಶ್ವ ದಾ­ದ್ಯಂತ ಇರುವ ಒಂದು ಲಕ್ಷ ಕವಿಗಳು.  ಅವರ ಪೈಕಿ 16 ಕವಿಗಳು ಇದೇ ಶನಿವಾರ (ಸೆ.20) ಕೋರ ಮಂಗಲದ ‘ಆಟಾ ಗಲಾಟಾ’  ಪುಸ್ತಕ ಮಳಿಗೆಗೆ ಬರುತ್ತಿದ್ದಾರೆ.

ಜಗತ್ತಿನಾದ್ಯಂತ ಇರುವ ಕವಿಗಳ ಪೈಕಿ ಸಾಮಾಜಿಕ ಬದಲಾವಣೆ  ತುಡಿತ­ವುಳ್ಳ ಸಮಾನಮನಸ್ಕರು ಸೇರಿ 2010 ರಲ್ಲಿ ‘ಬದಲಾವಣೆಗಾಗಿ ಕವಿ­ಗಳು’ ಅಭಿಯಾನ ಹುಟ್ಟುಹಾಕಿ­ದ್ದರು. ಅದರ ಭಾಗವಾಗಿ ಮೂರನೇ ಬಾರಿಗೆ ಕವಿಗಳ ದಂಡು ನಗರಕ್ಕೆ ಬರುತ್ತಿದೆ.
ಕಾರ್ಯಕ್ರಮದ ಸಹ ಆಯೋಜಕಿ ಮತ್ತು ಲೇಖಕಿ ಮಾತಂಗಿ ಸುಬ್ರಮಣಿ­ಯನ್, ‘ಸಾಮಾಜಿಕ ಸಮಸ್ಯೆ­ಗಳ ಕುರಿ ತಂತೆ ಅರಿವು ಮೂಡಿಸು­ವಲ್ಲಿ ಈ ಅಭಿ ಯಾನ ತುಂಬಾ ಪರಿಣಾ­ಮಕಾರಿ ಯಾಗಿದೆ. ‘ಸಮಸ್ಯೆ­ಯನ್ನು ಭಿನ್ನನೆಲೆ­ಯಲ್ಲಿ ಕವಿ ನೋಡಿ, ಗ್ರಹಿಸುವುದರಿಂದ ಕವಿತೆ ಎನ್ನುವುದು ಬದಲಾವಣೆಗೆ ಅಗತ್ಯ­­ವಾದ ಪ್ರಬಲ ಸಾಧನ. ಪ್ರಸ್ತುತ­ದಲ್ಲಿ ಹೆಚ್ಚು­ತ್ತಿರುವ ಅತ್ಯಾ­ಚಾರ ಮತ್ತು ಲೈಂಗಿಕ ಕಿರುಕುಳ­ದಂತಹ ಅನಾ­ಚಾರ­ಗಳ ಕುರಿತಂತೆ ಸಮಾ­ಜದ ಕಣ್ಣು ತೆರೆ­ಸಲು ಕವಿತೆ­ಯೊಂದು ಪ್ರಭಾವ­ಶಾಲಿ ಮಾಧ್ಯಮ’ ಎನ್ನುತ್ತಾರೆ.

‘ಈ ಕಾರ್ಯಕ್ರಮ ನಿರ್ದಿಷ್ಟ ವಿಚಾ ರದ ಮೇಲೆ ನಡೆಯುವುದಿಲ್ಲ. ಸಮಾಜ ವನ್ನು ಕಾಡುವ ಎಲ್ಲ ಬಗೆಯ ಸಮಸ್ಯೆ ಗಳನ್ನು ಇದು ಒಳ­ಗೊಂಡಿ­ರುತ್ತದೆ. ಇಲ್ಲಿ ಚಿಂತನೆ ಹಚ್ಚುವ ಕವಿತೆಗಳಿಂದ ಹಿಡಿದು ಸಮಸ್ಯೆ­ಗಳನ್ನು ವ್ಯಂಗ್ಯವಾಗಿ ವಿಡಂಬಿ­ಸುತ್ತ ಹಾಸ್ಯದ ಹೊನಲು ಹರಿಸುವ ಕಾವ್ಯಗಳ ವಾಚನ ನಡೆಯ ಲಿದೆ’ ಎನ್ನುತ್ತಾರೆ ಮಾತಂಗಿ.

ಅಭಿಯಾನದ ಹೆಸರು ಮಹತ್ವಾ­ಕಾಂಕ್ಷೆಯಿಂದ ಕೂಡಿದೆ ಎನ್ನುವ ಕಾರ್ಯ­ಕ್ರಮದ ರೂವಾರಿ ಶಿಖಾ ಮಾಳವಿಯಾ ‘ಸಾಮಾಜಿಕ ಬದಲಾ­ವಣೆ ಮಾಡಬೇಕೆಂಬ ಪ್ರಬಲ ಚಿಂತನೆ ವಲಯಕ್ಕೆ ಸಿಲುಕಿ ಪ್ರಪಂಚದ ವಿವಿಧ ಮೂಲೆಯಿಂದ ಒಂದೆಡೆ ಕಲೆಯುವ ಖ್ಯಾತ ಕವಿಗಳು, ಕಲಾವಿದರನ್ನು ನೋಡು­­ವುದೇ ಸೌಭಾಗ್ಯ’ ಎನ್ನುತ್ತಾರೆ.

ಪುಸ್ತಕ ಮಳಿಗೆಯಲ್ಲಿ ಸೆ.20ರಂದು ಕಾರ್ಯಕ್ರಮವು ಸಂಜೆ ಆರು ಗಂಟೆಗೆ  ಪ್ರಾರಂಭವಾಗಲಿದೆ. ಕವಿಗಳಾದ  ಸೌರವ್ ರಾಯ್, ಪ್ರಮೋದ್ ಶೆಣೈ, ಸೌರವ್ ಸಿನ್ಹಾ, ಮಿನಾಲ್ ಹರ್ಜಾ­ವಾಲಾ, ಅಮೃತ್ ಮತ್ತು ಭರತ್, ಮಣಿ ರಾವ್, ನೀರಜ್ ಪಾಂಡೆ, ಮೋನಿಕಾ, ಭೂಮಿಕಾ ಆನಂದ್, ಬೀಜೊಯ್ ಬಾಲಗೋಪಾಲ್, ರಾಯ್ಲಾ ನೋಯಿಲ್, ಶ್ರೀದಿವ್ಯಾ ಶ್ರೀನಿ­ವಾಸನ್, ತೃಪ್ತಿ, ಅತುಲ್ ಜೈನ್, ಆಕಾಂಕ್ಷಾ, ತೇಜಸ್ವಿನಿ ಗೋಪಾಲ­ಸ್ವಾಮಿ ಅವರು ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT