ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ: ಕಾಯಂ ಪ್ರಮಾಣ ಪತ್ರ ನೀಡಲಿ

ಅಕ್ಷರ ಗಾತ್ರ

ದುರ್ಬಲ ಸಮುದಾಯಗಳನ್ನು ಸಶಕ್ತ­ಗೊಳಿ­ಸಲು ಹಾಗೂ ಸಮಾನತೆ ಸಾಧಿಸುವ ಸಲು­ವಾಗಿ ನಮ್ಮಲ್ಲಿ ಮೀಸಲಾತಿ ಸೌಲಭ್ಯವನ್ನು  ಒದ­ಗಿಸಲಾಗಿದೆ.  ಆದರೆ ಕೆಲವು ಪಟ್ಟಭದ್ರರು,  ಜಾತಿಗೆ ಸಂಬಂಧಿಸಿದಂತೆ ಸುಳ್ಳು ಪ್ರಮಾಣ ಪತ್ರದ ಮೂಲಕ  ಈ ಸವಲತ್ತನ್ನು ಕಬಳಿಸು­ತ್ತಿ­ರುವುದಾಗಿ ಸಮಾಜ ಕಲ್ಯಾಣ ಸಚಿವರು ಅಲವತ್ತುಕೊಂಡಿರುವುದು ನಾಗರಿಕ ಸಮಾಜ­ದಲ್ಲಿರುವ  ಕೊಳಕು ಮನಸ್ಥಿತಿಯನ್ನು ಬಯಲು ಮಾಡಿದೆ.

ಹಿಂದುಳಿದ, ಅತಿಹಿಂದುಳಿದ ಹಾಗೂ ಪರಿ­ಶಿಷ್ಟರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಬದ್ಧತೆ ಸರ್ಕಾರಕ್ಕೆ ಇದ್ದರೆ, ನಕಲಿ ಜಾತಿ ಪತ್ರಗಳ ಹಾವಳಿ ತಡೆಯಲು ಗಂಭೀರವಾಗಿ ಚಿಂತಿಸ­ಬೇಕು. ಆದಾಯ ಪ್ರಮಾಣ ಪತ್ರವನ್ನು ಪ್ರತಿ ಐದು ವರ್ಷಕ್ಕೆ ಒಮ್ಮೆ ನವೀಕರಿಸಬಹುದು. ಜಾತಿಗೆ ಸಂಬಂಧಿಸಿದ  ಪ್ರಮಾಣ ಪತ್ರಕ್ಕೆ ಒಂದು ವಿಶಿಷ್ಟ ಗುರುತು ಕೊಟ್ಟು ಆ ಮೂಲಕ  25 ವರ್ಷಗಳ ಅವಧಿಗೆ ಅನ್ವಯವಾಗುವಂತೆ ಅದನ್ನು ನೀಡಿದರೆ ಮೀಸಲಾತಿ ದುರುಪಯೋಗ­ವನ್ನು ತಡೆಗಟ್ಟಬಹುದು. ಪರಿಷ್ಕರಣೆಗೂ ಅವಕಾಶ ಕಲ್ಪಿಸಬೇಕು.
ವಿಶಿಷ್ಟ ಗುರುತಿನ ಕಾಯಂ ಜಾತಿ ಪ್ರಮಾಣ ಪತ್ರ ಪಡೆಯುವ ಕುಟುಂಬವು ಭಾರತದ ಯಾವುದೇ ನಗರ, ಪಟ್ಟಣ, ಗ್ರಾಮಕ್ಕೆ ವಲಸೆ ಹೋದರೂ ಅವರಿಗೆ  ಸೌಲಭ್ಯ ದೊರೆಯು-­ವಂತಾಗಬೇಕು. ಪ್ರತಿ ಐದು ವರ್ಷಕ್ಕೆ ಅನ್ವಯ-­ವಾಗುವಂತೆ  ಆದಾಯ ಪತ್ರ, 25 ವರ್ಷದ ಅವಧಿಗೆ ಜಾತಿ ಪ್ರಮಾಣ ಪತ್ರ ನೀಡುವುದ­ರಿಂದ, ಸಾರ್ವಜನಿಕರು   ನಾಡಕಚೇರಿ, ತಾಲ್ಲೂಕು ಕಚೇರಿಗೆ ಅಲೆಯುವುದು ಕೂಡ ತಪ್ಪುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT