ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಕೊಳೆ ಶುದ್ಧಿ ಆಗಲಿ

Last Updated 30 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬಿಹಾರದ ಮುಖ್ಯಮಂತ್ರಿ ಜೀತನ್ ರಾಂ ಮಾಂಝಿ ಅವರು ಮಧುಬನಿ ಜಿಲ್ಲೆಯ ದೇವಾಲಯವೊಂದಕ್ಕೆ ಭೇಟಿ ನೀಡಿ ಪ್ರಾರ್ಥನೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಾಪಸಾದ ನಂತರ, ಸಂಪ್ರದಾಯ­ವಾದಿ­ಗಳು ಕೆಲವರು ದೇವಸ್ಥಾನದ ಆವರಣವನ್ನು ಮತ್ತು ವಿಗ್ರಹಗಳನ್ನು ಸ್ವಚ್ಛ­ಗೊಳಿ­ಸಿ­ರುವುದು ವರದಿಯಾಗಿದೆ (ಪ್ರ.ವಾ., ಸೆ.30)

ಜೀತನ್‌ರಾಂ ಅವರು ದಲಿತರಲ್ಲೇ ಅತ್ಯಂತ ಹಿಂದುಳಿದ ಮಹಾದಲಿತ ವರ್ಗಕ್ಕೆ ಸೇರಿರುವುದೇ ಇದಕ್ಕೆ ಕಾರಣ. ಗಾಂಧಿ ಜಯಂತಿ ಅಂಗವಾಗಿ ಅಕ್ಟೋ­ಬರ್ 2ರಂದು   ಕೇಂದ್ರ ಸರ್ಕಾರ, ರಾಷ್ಟ್ರವ್ಯಾಪಿ ‘ಸ್ವಚ್ಛ ಭಾರತ ಅಭಿ ಯಾನ’­ಕ್ಕೆ ಸಜ್ಜಾಗಿರುವ ಈ ಸಂದರ್ಭದಲ್ಲಿ, ಬಿಹಾರದ ಮುಖ್ಯಮಂತ್ರಿ­ಯವರಿಗೆ ಆಗಿ­ರುವ ಅವಮಾನ ನಾಚಿಕೆಗೇಡು. ದಲಿತರೆಂಬ ಕಾರಣಕ್ಕೆ ಮುಖ್ಯಮಂತ್ರಿ­ಯವ­ರನ್ನೇ ಈ ರೀತಿ ಅಸ್ಪೃಶ್ಯ­ರೆಂಬಂತೆ ಕಂಡಿರುವುದು ಅತ್ಯಂತ ನೋವಿನ ಸಂಗತಿ.

ಅಸ್ಪೃಶ್ಯತೆ, ಸಾಂವಿ­ಧಾನಿಕವಾಗಿ ಶಿಕ್ಷಾರ್ಹ ಅಪರಾಧ. ಆದರೂ ಅದು ಯಾವುದೇ ಎಗ್ಗಿಲ್ಲದೆ ಮುಂದುವರಿದಿದೆ. ಮನಸ್ಸಿನಲ್ಲಿ ತುಂಬಿ­ರುವ ಜಾತೀಯ­ತೆಯ ಮಹಾಕೊಳೆ ಶುದ್ಧೀಕರಣವಾಗದೆ ಸಮಾನತೆಯನ್ನು ಆಧರಿಸಿದ ಸ್ವಸ್ಥ ಭಾರತದ ನಿರ್ಮಾಣ ಸಾಧ್ಯವಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT