ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಿ ಡೆಪ್‌ಗೆ ಮಾಜಿ ಪತ್ನಿಯ ಬೆಂಬಲ ಪತ್ರ

ಪಂಚರಂಗಿ
Last Updated 30 ಮೇ 2016, 19:30 IST
ಅಕ್ಷರ ಗಾತ್ರ

ಹಾಲಿವುಡ್‌ನ ಖ್ಯಾತ ನಟ ಜಾನಿ ಡೆಪ್‌ ತನಗೆ ದೈಹಿಕ ಹಿಂಸೆ ನೀಡುತ್ತಿದ್ದ ಎಂದು ಆತನ ಎರಡನೇ ಪತ್ನಿ, ರೂಪದರ್ಶಿ ಅಂಬರ್ ಹರ್ಡಿ ದೂರು ನೀಡಿದ್ದಾರೆ. ಮತ್ತೊಂದೆಡೆ ಜಾನಿಗೆ ಬೆಂಬಲ ವ್ಯಕ್ತಪಡಿಸಿದರು ಆತನ ಮೊದಲ ಪತ್ನಿ ವನೆಸ್ಸಾ ಪ್ಯಾರಡಿಸ್ ಮಾಜಿ ಪತಿಗೆ ಪತ್ರವೊಂದನ್ನು ಬರೆದಿದ್ದಾಳಂತೆ.

‘ಜಾನಿ ಸೂಕ್ಷ್ಮ ಮನಸಿನ ವ್ಯಕ್ತಿಯಷ್ಟೇ ಅಲ್ಲ ಪ್ರೀತಿಗೆ ಅತ್ಯಂತ ಅರ್ಹನಾದ ವ್ಯಕ್ತಿಯೂ ಹೌದು. ಅವನ ವಿರುದ್ಧ ಮಾಡಿರುವ ಆರೋಪಗಳೆಲ್ಲ ಅತಿರೇಕದಿಂದ ಕೂಡಿರುವಂಥವು ಎಂಬುದನ್ನು ನಾನು ಹೃದಯಾಂತರಾಳದಿಂದ ನಂಬುತ್ತೇನೆ. ಅವನ ಜತೆ ಇದ್ದ 14 ವರ್ಷಗಳಲ್ಲಿ ಒಂದು ದಿನವೂ ಆತ ನನಗೆ ದೈಹಿಕವಾಗಿ ಹಿಂಸೆ ಮಾಡಿಲ್ಲ’ ಎಂದು ವನೆಸ್ಸಾ ಬರೆದಿದ್ದಾಳೆ.

52 ವರ್ಷದ ಜಾನಿ ಬಗ್ಗೆ ಆತನ ಮೊದಲ ಪತ್ನಿಯ ಮಗಳು ಲಿಲಿ ರೋಸ್‌ ಡೆಪ್‌ ಕೂಡಾ ಇನ್‌ಸ್ಟಾಗ್ರಾಂನಲ್ಲಿ ಬೆಂಬಲ ನೀಡಿದ್ದಾಳೆ. ‘ನನ್ನ ತಂದೆ ನನಗೆ ಅತ್ಯಂತ ಪ್ರೀತಿ ಪಾತ್ರರಾದ ವ್ಯಕ್ತಿ. ನನ್ನ ಹಾಗೂ ಸಹೋದರನ ಪಾಲಿಗೆ ಅವರು ಇಂದಿಗೂ ಅದ್ಭುತ. ಅವರನ್ನು ಬಲ್ಲವರೆಲ್ಲರೂ ಇದೇ ಮಾತನ್ನು ಹೇಳುತ್ತಾರೆ’ ಎಂದು ರೋಸ್‌ ತಂದೆ ಪರ ಪ್ರಮಾಣ ಪತ್ರ ನೀಡಿದ್ದಾಳೆ.

ಈ ನಡುವೆ ಲಾಸ್‌ ಏಂಜಲೀಸ್‌ನ ನ್ಯಾಯಾಧೀಶರು ಜಾನಿಗೆ ಹರ್ಡಿ ವಾಸಿಸುವ ಸ್ಥಳದಿಂದ 100 ಯಾರ್ಡ್ಸ್‌ ದೂರದಲ್ಲಿ ವಾಸಿಸಬೇಕೆಂದು ಆದೇಶ ನೀಡಿದ್ದಾರಂತೆ. ಒಟ್ಟಿನಲ್ಲಿ ಜಾನಿಗೆ ಎರಡನೇ ಪತ್ನಿ ಕೈಕೊಟ್ಟಿದ್ದರೂ ವಿಚ್ಛೇದಿತ ಮೊದಲ ಪತ್ನಿಯಿಂದ ಬೆಂಬಲ ಸಿಕ್ಕಿರುವುದು ಸಮಾಧಾನ ತಂದಿದೆಯಂತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT