ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಮೀನು ಸಿಕ್ಕರೂ ತಾಯಿ ಮುಖ ನೋಡಲು ಸಿಗಲಿಲ್ಲ

Last Updated 19 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ, ಪಣಜಿ (ಪಿಟಿಐ): ತಾಯಿ­ಯ ಅಂತ್ಯ­ಕ್ರಿಯೆ­ಯಲ್ಲಿ ಭಾಗವಹಿಸುವುದ­ಕ್ಕಾಗಿ ತೆಹೆಲ್ಕಾ ಸಂಪಾದಕ ತರುಣ್‌ ತೇಜ್‌ಪಾಲ್‌ ಅವರಿಗೆ ಸುಪ್ರೀಂ­ಕೋರ್ಟ್‌ ಸೋಮವಾರ ಮೂರು ವಾರ­ಗಳ ಕಾಲ ಮಧ್ಯಾಂತರ ಜಾಮೀನು ನೀಡಿದರೂ, ಅಂತಿಮ ವಿಧಿ ವಿಧಾನ­­­ಗಳಲ್ಲಿ ಪಾಲ್ಗೊಳ್ಳಲು ಅವರಿಗೆ ಸಾಧ್ಯ­ವಾಗಲಿಲ್ಲ.

ಜಾಮೀನು ಲಭಿಸುವ ಪ್ರಕ್ರಿಯೆ­ಯಲ್ಲಿ ವಿಳಂಬ­ವಾಗಿದ್ದರಿಂದ ತೇಜ್‌­ಪಾಲ್‌ ಅವರಿಗೆ ಗೋವಾದಲ್ಲಿ ನಡೆದ ಅಂತ್ಯ­ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಾಧ್ಯ­ವಾಗಲಿಲ್ಲ ಎನ್ನಲಾಗಿದೆ.

ಸಹೋದ್ಯೋಗಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ತೇಜ್‌ಪಾಲ್‌ ಅವರು ಐದು ತಿಂಗಳಿ­ನಿಂದ ಪಣಜಿ­ಯಿಂದ 40 ಕಿ.ಮೀ ದೂರ­ದಲ್ಲಿರುವ ಸಡಾ­ ಸಬ್‌ ಜೈಲ್‌­ನಲ್ಲಿ ಬಂಧನ­ದಲ್ಲಿ­ದ್ದಾರೆ. ತೇಜ್‌­ಪಾಲ್‌ ತಾಯಿ ಶಕುಂತಲಾ ತೇಜ್‌­ಪಾಲ್‌ (87)­ ಅವರು ಶನಿ­ವಾರ ಗೋವಾ­ದಲ್ಲಿ ನಿಧನ ಹೊಂದಿದ್ದರು.
ತೇಜ್‌ಪಾಲ್‌ ತಾಯಿಯ ಅಂತ್ಯ­ಕ್ರಿಯೆ ಸೋಮವಾರ ಸಂಜೆ ನಡೆಯ­ಲಿದ್ದು, ಅದರಲ್ಲಿ ಭಾಗ­ವಹಿಸಲು ತಮ್ಮ ಕಕ್ಷಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಅವರ ಪರ ವಕೀಲ ಸಂದೀಪ್‌ ಕಪೂರ್‌ ಸುಪ್ರೀಂ ಕೋರ್ಟ್‌ಗೆ  ಮನವಿ ಮಾಡಿದ್ದರು.

ಅರ್ಜಿ ವಿಚಾರಣೆಯನ್ನು ನಡೆಸಿದ ನ್ಯಾಯ­ಮೂರ್ತಿ­ಗಳಾದ ಬಿ.ಎಸ್‌. ಚೌಹಾಣ್‌ ಮತ್ತು ಎ.ಕೆ. ಸಿಕ್ರಿ, ತೇಜ್‌ಪಾಲ್‌ ಅವರನ್ನೊಳಗೊಂಡ ನ್ಯಾಯಪೀಠ ಮೂರು ವಾರಗಳ ಕಾಲ ಮಧ್ಯಾಂತರ ಜಾಮೀನು ನೀಡಿ ಆದೇಶ ಹೊರಡಿಸಿತ್ತು.ಈ ವಿಷಯವನ್ನು ಸೋಮವಾರ ಬೆಳಿಗ್ಗೆ ನ್ಯಾಯಾಲಯದ ಗಮನಕ್ಕೆ ತರಲಾಗಿತ್ತಾದರೂ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪರಿ­ಶೀಲಿಸಿದ ಮತ್ತು ವಿಚಾರಣೆಗೆ ನಿಗದಿ ಪಡಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನಂತರ ಅರ್ಜಿಯ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ಹೇಳಿತ್ತು.

ಸೋಮವಾರ ಮಧ್ಯಾಹ್ನ ಕೊಠಡಿ­ಯಲ್ಲಿ ಅರ್ಜಿ­ಯನ್ನು ವಿಚಾರಣೆಗೆ ಕೈಗೆತ್ತಿ­ಕೊಂಡ ನ್ಯಾಯಪೀಠ, ಮಧ್ಯಾಂ­ತರ ಜಾಮೀನು ನೀಡಿ ಆದೇಶ ಹೊರಡಿಸಿತ್ತು.
ಜಾಮೀನು ಪ್ರಕ್ರಿಯೆ ಎಲ್ಲಾ ಮುಗಿದ ನಂತರ ಗೋವಾಕ್ಕೆ ಪ್ರಯಾಣ ಬೆಳೆಸಿದ್ದ ತೇಜ್‌ಪಾಲ್‌ ಸಂಜೆ 7.15ಕ್ಕೆ ರುದ್ರಭೂಮಿಗೆ ತಲುಪಿದ­ರಾ­ದರೂ, ಅವರ ಸಹೋದರ ಮಿಂಟಿ ತೇಜ್‌ಪಾಲ್‌  ತಾಯಿ ಚಿತೆಗೆ ಸಂಜೆ 6 ಗಂಟೆಗೇ ಅಗ್ನಿಸ್ಪರ್ಶ ಮಾಡಿದ್ದರು.

ಅಂತ್ಯಕ್ರಿಯೆ ನಡೆಯುತ್ತಿರುವ ವೇಳೆ ತೇಜ್‌ಪಾಲ್‌, ಜೈಲಿನಲ್ಲಿ ಜಾಮೀನು ಪಡೆಯುವ ಪ್ರಕ್ರಿಯೆಯಲ್ಲಿ ನಿರತರಾ­ಗಿ­ದ್ದರು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT