ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರಕಿಹೊಳಿ ಮನವೊಲಿಕೆ ಯತ್ನ ವಿಫಲ

ಸಚಿವ ಸತೀಶ್ ರಾಜೀನಾಮೆ: ಇಕ್ಕಟ್ಟಿನಲ್ಲಿ ಸಿ.ಎಂ
Last Updated 28 ಜನವರಿ 2015, 19:45 IST
ಅಕ್ಷರ ಗಾತ್ರ

ಬೆಂಗಳೂರು/ಬೆಳಗಾವಿ/ಗೋಕಾಕ: ರಾಜೀನಾಮೆ ಹಿಂದಕ್ಕೆ ಪಡೆಯು­ವಂತೆ ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಮನವೊಲಿ­ಸಲು ಬುಧವಾರ ಇಡೀ ದಿನ ನಡೆಸಿದ ಕಸರತ್ತು ಫಲಿಸಿಲ್ಲ. ಆಪ್ತ ಸಚಿವರ ರಾಜೀನಾಮೆ  ಪಟ್ಟಿನಿಂದಾಗಿ ಮುಖ್ಯ­ಮಂತ್ರಿ ಸಿದ್ದರಾಮಯ್ಯ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಫ್ಯಾಕ್ಸ್‌ ಮೂಲಕ ಮಂಗಳವಾರ ರಾಜೀನಾಮೆ ರವಾನಿಸಿದ್ದ ಸತೀಶ್‌, ಬೆಳಗಾವಿಯಲ್ಲೇ ಉಳಿದುಕೊಂಡಿ­ದ್ದಾರೆ. ಬೆಂಗಳೂರಿನಿಂದ ಸಂಧಾನಕ್ಕೆ ತೆರಳಿದ್ದ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರೊಂದಿಗೆ ಸಚಿವರು ಚರ್ಚೆಗೆ ನಿರಾಕರಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್‌ ಮುಖಂಡರ ಜೊತೆ ದೀರ್ಘಕಾಲ ಚರ್ಚಿಸಿದ್ದರೂ, ಮುಂದಿನ ನಡೆಯ ಕುರಿತು ಗುಟ್ಟು ಬಿಟ್ಟುಕೊಟ್ಟಿಲ್ಲ.

ಕೆಂಪಯ್ಯ ವಿರುದ್ಧ ಗರಂ: ಕೆಂಪಯ್ಯ ಅವರು ಮುಖ್ಯಮಂತ್ರಿ­ಯವರ ಸಂದೇಶ ಹೊತ್ತು ಬೆಳಿಗ್ಗೆಯೇ ಬೆಳಗಾವಿಗೆ ತೆರಳಿದ್ದರು. ಅಲ್ಲಿನ

ಸಿ.ಎಂ. ಭೇಟಿ ಅನುಮಾನ

ಬೆಳಗಾವಿ: ಅಬಕಾರಿ ಸಚಿವ ಸತೀಶ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಬೆಂಗಳೂರಿಗೆ ತೆರಳುವುದು ಇನ್ನೂ ಅಸ್ಪಷ್ಟವಾಗಿದೆ.

ಬುಧವಾರ ಅವರು ಬೆಂಗಳೂರಿಗೆ ತೆರಳಲು ವಿಮಾನದ ಟಿಕೆಟ್‌ ಕಾಯ್ದಿರಿ­ಸಿದ್ದರು. ಆದರೆ, ಪ್ರಯಾಣ ಮೊಟಕು­ಗೊಳಿಸಿ ಮರಳಿ ಗೋಕಾಕದ ನಿವಾಸಕ್ಕೆ ಹೋಗಿದ್ದಾರೆ. ತಮ್ಮ ಮೊಬೈಲ್‌ ಸಂಪರ್ಕ ಸ್ಥಗಿತಗೊಳಿಸಿರುವ ಜಾರಕಿ­ಹೊಳಿ, ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಬೆಂಗಳೂರಿಗೆ ಹೋಗುವುದಿಲ್ಲ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆನ್ನಲಾಗಿದೆ.

‘ಸಚಿವ ಜಾರಕಿಹೊಳಿ ಅವರು ಗುರುವಾರ ಸಂಜೆ 7ಕ್ಕೆ ಮುಖ್ಯಮಂತ್ರಿ­ಗಳನ್ನು ಭೇಟಿ ಮಾಡಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ನಾಳೆ ಬೆಳಿಗ್ಗೆ ಅವರು ಬೆಂಗಳೂರಿಗೆ ತೆರಳ­ಲಿದ್ದಾರೆ’ ಎಂದು ಕಾಂಗ್ರೆಸ್‌ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪೊಲೀಸ್ ಕಮಿಷನರ್‌ ಎಸ್.ರವಿ ಅವರೊಂದಿಗೆ ಗೋಕಾಕಕ್ಕೆ ತೆರಳಿ ಅಬಕಾರಿ ಸಚಿವರ ಜೊತೆ ಮಾತುಕತೆಗೆ ಯತ್ನಿಸಿದರು. ಕೆಂಪಯ್ಯ ಅವರೊಂದಿಗೆ ಚರ್ಚೆಗೆ ನಿರಾಕರಿಸಿದ ಸಚಿವರು, ವಾಪಸು ಹೋಗುವಂತೆ ತಾಕೀತು ಮಾಡಿದರು.

‘ನನ್ನ ಮನವೊಲಿಕೆ ಮಾಡಲು ನೀವು ಯಾರು? ನೀವು ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ ಪ್ರತಿನಿಧಿಯೇ? ನನ್ನ ರಾಜೀನಾಮೆ ಬಗ್ಗೆ ನೀವು ಏನೂ ಹೇಳುವ ಅವ­ಶ್ಯಕತೆ ಇಲ್ಲ. ನಿಮ್ಮಿಂದ ನಾವು ಏನನ್ನೂ ಕೇಳಬೇಕಾಗಿಲ್ಲ’ ಎಂದು ಸತೀಶ್‌ ಗೃಹ ಸಚಿವರ ಸಲಹೆಗಾರರಿಗೆ ರೇಗಿದರು ಎಂದು ಮೂಲಗಳು ತಿಳಿಸಿವೆ.

ನಾಲ್ಕೂವರೆ ಗಂಟೆ ಚರ್ಚೆ: ಬಳಿಕ ಗೋಕಾಕದಿಂದ ಬೆಳ­ಗಾವಿಗೆ ಬಂದ ಅಬಕಾರಿ ಸಚಿವರು ಶಾಸಕ ಫಿರೋಜ್‌ ಸೇಟ್‌ ನಿವಾಸಕ್ಕೆ ತೆರಳಿದರು. ಅಲ್ಲಿ ಹಾಜರಿದ್ದ ಪಕ್ಷದ ಶಾಸಕರು ಮತ್ತು ಜಿಲ್ಲಾ ಕಾಂಗ್ರೆಸ್ ಮುಖಂಡರ ಜೊತೆ ಸತತ ನಾಲ್ಕೂವರೆ ಗಂಟೆಗಳ ಕಾಲ ಚರ್ಚೆ ನಡೆಸಿದರು.

ಸಚಿವರ ಅಣ್ಣ ರಮೇಶ್‌ ಜಾರಕಿ­ಹೊಳಿ, ಸಂಸದ ಪ್ರಕಾಶ್ ಹುಕ್ಕೇರಿ ಸೇರಿದಂತೆ ಸಭೆಯಲ್ಲಿದ್ದ ಎಲ್ಲರೂ ರಾಜೀನಾಮೆ ಹಿಂದಕ್ಕೆ ಪಡೆಯುವಂತೆ ಸತೀಶ್ ಅವರ ಮನವೊಲಿಕೆಗೆ ಪ್ರಯತ್ನಿ­ಸಿದರು. ಸಭೆಯಲ್ಲಿದ್ದವರ ದೂರ­ವಾಣಿಗೆ ಕರೆ ಮಾಡಿದ ಕಾಂಗ್ರೆಸ್‌ನ ಕೆಲ ಪ್ರಮು­ಖರು, ಸಚಿವರ ಜೊತೆಗೆ ಮಾತುಕತೆಗೆ ಯತ್ನಿಸಿದ್ದಾರೆ.

ಸಿಎಂ ಜೊತೆ ಚರ್ಚಿಸಿ ನಿರ್ಧಾರ: ಸಭೆಯ ಬಳಿಕ ಪತ್ರ­ಕರ್ತರ ಜೊತೆ ಮಾತನಾಡಿದ ಸತೀಶ್‌, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆಗೆ ಕರೆದಿದ್ದಾರೆ. ಗುರುವಾರ ಬೆಂಗ­ಳೂರಿಗೆ ತೆರಳಿ ಅವರೊಂದಿಗೆ ಮಾತನಾಡಿದ ನಂತರ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ’ ಎಂದು ಹೇಳಿದರು.

‘ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನಿರ್ಧಾರಕ್ಕೆ ಈಗಲೂ ನಾನು ಬದ್ಧ. ಮುಖ್ಯಮಂತ್ರಿ ಜೊತೆಗೆ ಚರ್ಚಿಸಿದ ನಂತರ ಮುಂದಿನ ನಡೆ ಕುರಿತು ಹೇಳುತ್ತೇನೆ. ರಾಜೀನಾಮೆಯನ್ನು ಹಿಂಪಡೆಯುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಪಕ್ಷಕ್ಕೆ ಮುಜುಗರ ತಪ್ಪಿಸಲು ನಿರ್ಧಾರ ಬದಲಿಸು­ವಂತೆ ಸಿದ್ದ­ರಾಮಯ್ಯ, ಸಚಿವರಾದ ಡಾ. ಎಚ್‌.ಸಿ. ಮಹ­­ದೇವಪ್ಪ, ಡಿ.ಕೆ. ಶಿವಕುಮಾರ್‌ ದೂರವಾಣಿ ಮೂಲಕ ಮನವಿ ಮಾಡಿದ್ದಾರೆ. ಸಂಸದ ಪ್ರಕಾಶ ಹುಕ್ಕೇರಿ, ಶಾಸಕರಾದ ಫಿರೋಜ್‌ ಸೇಠ್‌, ರಮೇಶ ಜಾರಕಿಹೊಳಿ, ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್‌ ಸೇರಿದಂತೆ ಹಲವರು ರಾಜೀ­ನಾಮೆ ಹಿಂದಕ್ಕೆ ಪಡೆಯಲು ಕೋರಿದ್ದಾರೆ’ ಎಂದರು.
 

ಸಭೆಯಲ್ಲಿ ಜಿಲ್ಲಾಧಿಕಾರಿ!

ಬೆಳಗಾವಿ: ಅಬಕಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರ ಮನವೊಲಿಸಲು ನಡೆದ ಜಿಲ್ಲೆಯ ಶಾಸ­ಕರು, ಮುಖಂಡರ ಸಭೆಗೆ ಜಿಲ್ಲಾಧಿಕಾರಿ ಎನ್‌. ಜಯರಾಂ ಬಂದು ಅಚ್ಚರಿ ಉಂಟು ಮಾಡಿದರು.

ಸುಮಾರು 45 ನಿಮಿಷಗಳ ಕಾಲ ಸಚಿವ­ರೊಂದಿಗೆ ಜಿಲ್ಲಾಧಿಕಾರಿಗಳು ಚರ್ಚಿಸಿದರು. ಆದರೆ, ಯಾವ ವಿಷಯ ಕುರಿತು ಮಾತುಕತೆ ನಡೆಸಿದರು ಎಂಬುದು ತಿಳಿದಿಲ್ಲ. ‘ಕೆಡಿಪಿ ಸಭೆಯ ದಿನಾಂಕ ನಿಗದಿ ಕುರಿತು ಸಚಿವರೊಂದಿಗೆ ಚರ್ಚಿಸಲು ಬಂದಿದ್ದೆ’ ಎಂದು ಜಯರಾಂ ನಂತರ ಪತ್ರಕರ್ತರಿಗೆ ತಿಳಿಸಿದರು.

‘ನನ್ನಿಂದ ಯಾರಿಗೂ ತೊಂದರೆ ಆಗಬಾರದು. ರಾಜೀನಾಮೆ ಹಿಂದಕ್ಕೆ ಪಡೆಯಲು ಯಾವುದೇ ಬೇಡಿಕೆ ಇಟ್ಟಿಲ್ಲ. ಖಾತೆ ಬದಲಾವಣೆ ಪ್ರಶ್ನೆ ಇಲ್ಲ. ಸಮಾಜ ಸೇವೆಗೆ ಸಮಯಾವಕಾಶ ಸಿಗುತ್ತಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಿ­ದ್ದೇನೆ. ಪಕ್ಷ ಹಾಗೂ ಮುಖ್ಯಮಂತ್ರಿ­ಗಳ ವಿರುದ್ಧ ಯಾವುದೇ ಅಸಮಾಧಾನ, ಮುನಿಸು ಇಲ್ಲ. ನನ್ನ ಸಮಸ್ಯೆಗಳನ್ನು ಮುಖ್ಯಮಂತ್ರಿಗಳಿಗೆ ವಿವರಿಸುವುದು ನನ್ನ ಕರ್ತವ್ಯವಾಗಿದೆ. ಆದ್ದರಿಂದ ನಾಳೆ ಜಿಲ್ಲೆಯ ಮುಖಂಡರೊಂದಿಗೆ ಬೆಂಗ­ಳೂರಿಗೆ ತೆರಳಿ ಅವರನ್ನು ಭೇಟಿಯಾಗುತ್ತೇನೆ’ ಎಂದರು.

‘ಮನವೊಲಿಸಲು ಪ್ರಯತ್ನ’: ಸತೀಶ್‌ ಅವರು ಆತುರ­ದಿಂದ ರಾಜೀ­ನಾಮೆ ನಿರ್ಧಾರ ಕೈಗೊಂಡಿದ್ದಾರೆ. ರಾಜೀನಾಮೆ ಹಿಂದಕ್ಕೆ ಪಡೆಯುವಂತೆ ಅವರನ್ನು ಮನವೊಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಪತ್ರ­ಕರ್ತರ ಜೊತೆ ಮಾತನಾಡಿದ ಅವರು, ‘ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಫ್ಯಾಕ್ಸ್‌ ಮೂಲಕ ಕಳುಹಿಸಿರುವ ಪತ್ರ ನನಗೆ ತಲುಪಿದೆ. ರಾಜೀನಾಮೆ ಹಿಂದಿನ ಕಾರಣ ತಿಳಿದಿಲ್ಲ. ಅವರು ತುಂಬಾ ಸೂಕ್ಷ್ಮ ಮನಸ್ಸಿನವರು. ಅವರ ಜೊತೆ ಮಾತನಾಡಿದ್ದೇನೆ. ಬೆಂಗಳೂರಿಗೆ ಬರುವಂತೆ ಹೇಳಿದ್ದೇನೆ. ಅವರ ಜೊತೆ ಖುದ್ದಾಗಿ ಮಾತನಾಡಿ ರಾಜೀನಾಮೆ ಹಿಂದಕ್ಕೆ ಪಡೆಯುವಂತೆ ಮನವೊ­ಲಿಸುವೆ’ ಎಂದರು.

‘ಖಾತೆ ಬದಲಾವಣೆ ಮಾಡುವಂತೆ ಅವರು ಇತ್ತೀಚೆಗೆ ಮನವಿ ಮಾಡಿದ್ದು ನಿಜ. ಸಂಪುಟ ಪುನರ್‌­ರಚನೆ ಸಂದರ್ಭ­ದಲ್ಲಿ ಈ ಬೇಡಿಕೆಯನ್ನು ಪರಿಗಣಿ­ಸುವುದಾಗಿ ಭರವಸೆ ನೀಡಿದ್ದೆ’ ಎಂದು ತಿಳಿಸಿದರು.

ಖಾತೆಗೆ ಬೇಡಿಕೆ ಸಲ್ಲದು: ಸಚಿವರ ರಾಜೀನಾಮೆ ಪ್ರಕರಣ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌, ‘ಸತೀಶ್‌ ಅವರು ರಾಜೀನಾಮೆ ಪತ್ರದ ಒಂದು ಪ್ರತಿಯನ್ನು ನನಗೂ ಕಳುಹಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಚರ್ಚೆ ನಡೆಸುತ್ತೇನೆ’ ಎಂದರು.

‘ಸಚಿವರಾದವರು ಯಾವುದೇ ಖಾತೆ ಕೊಟ್ಟರೂ ಸಮರ್ಥವಾಗಿ ಕೆಲಸ ಮಾಡ­ಬೇಕು. ನಿರ್ದಿಷ್ಟ ಖಾತೆಗಾಗಿ ಬೇಡಿಕೆ ಇಡುವುದು ಸರಿಯಲ್ಲ. ಏನಾದರೂ ಸಮಸ್ಯೆಗಳಿದ್ದಲ್ಲಿ ಮುಖ್ಯಮಂತ್ರಿ­ಯವರ ಬಳಿ ಹೋಗಿ ಚರ್ಚಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT