ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರಿಗೊಳಿಸ­ದ ಯೋಜನೆ ಬೇಡ

ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಖಡಕ್‌ ಆದೇಶ
Last Updated 30 ಜನವರಿ 2015, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಅನುಷ್ಠಾನ­ಗೊ­ಳಿ­ಸ­­ಲಾಗದ ಯೋಜನೆಗಳನ್ನು ರೂಪಿ­ಸ­ಬೇಡಿ’  ಎಂದು ಸುಪ್ರೀಂಕೋರ್ಟ್‌ ಶುಕ್ರ­ವಾರ ಕೇಂದ್ರ ಸರ್ಕಾರಕ್ಕೆ ಖಡಕ್‌ ನಿರ್ದೇ­­ಶನ ನೀಡಿತು. ಪರಿಶಿಷ್ಟ ಜಾತಿ/ಪಂಗಡಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳನ್ನು ಒದ­ಗಿ­­ಸುವ ‘ಬಾಬು ಜಗಜೀವನ ರಾಮ್‌ ಛತ್ರವಾಸ್‌ ಯೋಜನೆ’ ಜಾರಿಗೆ ಕೇಂದ್ರ ನಿಧಾನಗತಿ ನೀತಿ ಅನುಸರಿಸಿರುವು­ದಕ್ಕೆ ಕೋರ್ಟ್‌ ತರಾಟೆಗೆ ತೆಗೆದು­ಕೊಂಡಿದೆ.

ಮಾಧ್ಯಮಿಕ ಶಾಲೆಗಳು,  ಪ್ರೌಢಶಾಲೆ­ಗಳು, ಕಾಲೇಜುಗಳು ಹಾಗೂ ವಿಶ್ವ­ವಿದ್ಯಾ­­ಲಯಗಳಲ್ಲಿ ಅಭ್ಯಸಿಸುತ್ತಿರುವ ಪರಿ­ಶಿಷ್ಟ ಜಾತಿ/ಪಂಗಡಗಳ ಬಾಲಕ ಮತ್ತು ಬಾಲಕಿಯರಿಗೆ ವಸತಿ ಸೌಲಭ್ಯ ಕಲ್ಪಿಸು­ವುದು ಯೋಜ­ನೆಯ ಧ್ಯೇಯೋ­ದ್ದೇಶ­.

ಆದರೆ ದೇಶದಾದ್ಯಂತ ಶಿಕ್ಷಣ ಸಂಸ್ಥೆ­ಗಳಲ್ಲಿ­ನ ಹಾಸ್ಟೆಲ್‌ಗಳಲ್ಲಿ ಭಾರಿ ಅವ್ಯ­ವಸ್ಥೆಗಳಿರುವ ಬಗ್ಗೆ ನ್ಯಾಯ­ಮೂರ್ತಿ­ಗಳಾದ ಮದನ್‌ ಬಿ ಲೋಕುರ್‌ ಮತ್ತು ಯು.­ಯು. ಲಲಿತ್‌ ಅವರನ್ನೊಳ­ಗೊಂಡ ಸಾಮಾ­­ಜಿಕ ನ್ಯಾಯಪೀಠ ತೀವ್ರ ಅಸಮಾ­ಧಾನ ವ್ಯಕ್ತಪಡಿಸಿದೆ. ಬಹು­ತೇಕ ಹಾಸ್ಟೆಲ್‌ಗಳಿಗೆ ಕನಿಷ್ಠ ಸೌಲಭ್ಯ­ಗಳನ್ನು ಒದಗಿಸುವುದಕ್ಕೂ ಸರ್ಕಾರಕ್ಕೆ ಸಾಧ್ಯ­ವಾಗಿಲ್ಲ ಎಂದೂ ಪೀಠ ಟೀಕಿಸಿತು.

ಈ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರವನ್ನೇ ಹೊಣೆಯನ್ನಾಗಿಸಿದ ಪೀಠ, ತಕ್ಷಣ ಈ ಯೋಜನೆಯಡಿ ನಿರ್ಮಿಸಿದ ಹಾಸ್ಟೆಲ್‌­ಗಳ ಪರಿಸ್ಥಿತಿ ಕುರಿತು ಸಮೀಕ್ಷೆ ನಡೆಸಿ, ನಾಲ್ಕು ತಿಂಗಳೊಳಗೆ ವರದಿ ಸಲ್ಲಿ­ಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ­ಗಳಿಗೆ ಆದೇಶಿಸಿತು. ಅಲ್ಲದೆ, ಈ ಯೋಜ­ನೆಯಡಿ ಹೊಸ ಹಾಸ್ಟೆಲ್‌­ಗಳ ನಿರ್ಮಾ­ಣಕ್ಕೆ ಕೂಡಲೇ ಕ್ರಮ ಕೈಗೊ­ಳ್ಳುವಂತೆ ಸೂಚಿಸಿದ ಪೀಠ, ಮುಂದಿನ ವಿಚಾರಣೆ­ಯನ್ನು ಜುಲೈ 20ಕ್ಕೆ ಮುಂದೂಡಿತು.

ಸರ್ಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪಿ.­ಎಸ್‌. ನರಸಿಂಹ ಅವರು, ಈ ವಿಷಯ­ದಲ್ಲಿ ಕೇಂದ್ರದ ಪಾತ್ರ ತುಂಬಾ ಸೀಮಿ­ತ­ವಿದ್ದು, ನಿರ್ವಹ­ಣೆಯ ಹೊಣೆ ಮಾತ್ರ ಹೊಂದಿದೆ ಹಾಗೂ ಸಂಪೂರ್ಣ ಸಹಕರಿ­ಸು­ವಂತೆ ರಾಜ್ಯಗಳಿಗೆ ಸೂಚಿಸ­ಬೇಕೆಂದು ಕೋರಿ­ದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಇದು ಸರ್ಕಾರಕ್ಕೆ ಬಿಟ್ಟ ವಿಷಯ­ವಾ­ಗಿದ್ದು ಕೇಂದ್ರವೇ ರಾಜ್ಯ­ಗಳಿಗೆ ನಿರ್ದೇ­ಶನ ನೀಡಬೇಕೆಂದು ಹೇಳಿತು.

ಅರ್ಜಿದಾರರಾಗಿದ್ದ ಎಬಿವಿಪಿಯು ಯೋಜ­ನೆಯ ನಿರ್ವಹಣೆಗೆ ರಚಿಸಲಾದ ಕ್ರಿಯಾ ಸಮಿತಿಯ ಅಧ್ಯಕ್ಷರು ಸಲ್ಲಿಸಿದ ಈ ವರದಿ ಅತೃಪ್ತಿಕರ. ಏಕೆಂದರೆ ಇದು ಹೊಸ ಹಾಸ್ಟೆಲ್‌ಗಳ ನಿರ್ಮಾ­ಣಕ್ಕೆ ಮಾತ್ರ ಸಂಬಂಧಿಸಿದ್ದಾಗಿದ್ದು, ಆದರೆ ಅರ್ಜಿ ಹಳೆಯ ಹಾಸ್ಟೆಲ್‌ಗಳ ನಿರ್ವ­­ಹಣೆ ಮತ್ತು ದುರಸ್ತಿಯನ್ನು ಕೇಂದ್ರೀ­ಕರಿ­ಸಿ­ದ್ದಾಗಿದೆ ಎಂದು ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT