ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಖಂಡ್‌, ಕಾಶ್ಮೀರದಲ್ಲಿ ಇಂದು ಮತದಾನ

Last Updated 13 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಶ್ರೀನಗರ/ ರಾಂಚಿ(ಪಿಟಿಐ): ಜಮ್ಮು ಮತ್ತು ಕಾಶ್ಮೀರ  ಹಾಗೂ ಜಾರ್ಖಂಡ್  ನಾಲ್ಕನೇ ಹಂತದ ಮತದಾನ ಭಾನುವಾರ ನಡೆಯಲಿದೆ. ಕಾಶ್ಮೀರದಲ್ಲಿ ಇಬ್ಬರು ಮುಖ್ಯ ಮಂತ್ರಿ ಆಕಾಂಕ್ಷಿಗಳು ಮತ್ತು ವಿಧಾನ ಸಭೆ ಸ್ಪೀಕರ್‌ ಸೇರಿದಂತೆ 182 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

1,890 ಮತಗಟ್ಟೆಗಳಲ್ಲಿ 7.05 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಶ್ರೀನಗರ, ಅನಂತ ನಾಗ್‌, ಶೋಪಿ ಯಾನ್‌(ಕಾಶ್ಮೀರ ಕಣಿವೆ) ಮತ್ತು ಸಾಂಬಾ (ಜಮ್ಮು ವಲಯ) ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ.

ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಶ್ರೀನಗರದ ಸೋನ್ವಾರ್‌ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಬೀರ್ವಾದಲ್ಲೂ ಇವರ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಪಿಡಿಪಿ ನಾಯಕ ಹಾಗೂ ಮುಖ್ಯ­ಮಂತ್ರಿ ಆಕಾಂಕ್ಷಿ ಮುಪ್ತಿ ಮೊಹಮ್ಮದ್‌ ಸಯೀದ್‌ ಅನಂತ್‌ನಾಗ್‌್  ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ.

ಚುನಾವಣೆ ನಡೆಯಲಿರುವ ಎಲ್ಲ ನಾಲ್ಕು ರಾಜ್ಯಗಳಲ್ಲಿ ಭಾರಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಉಗ್ರರ ದಾಳಿ ಯ ಶಂಕೆಯಿಂದ ಕಟ್ಟೆಚ್ಚರ ವಹಿಸ ಲಾಗಿದೆ. 20 ಕ್ಷೇತ್ರಗಳಲ್ಲಿ ಕೊನೆಯ ಹಾಗೂ ಐದನೇ ಹಂತದ ಚುನಾವಣೆ ಇದೇ 20 ರಂದು ನಡೆಯಲಿದೆ.

ಜಾರ್ಖಂಡ್‌ನಲ್ಲಿ 15 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಬಾಬುಲಾಲ್‌ ಮರಾಂಡಿ  ಸೇರಿದಂತೆ ಮೂವರು ಮಾಜಿ ಸಚಿವರು ಕಣದಲ್ಲಿದ್ದಾರೆ. ನಕ್ಸಲರ ದಾಳಿ ಶಂಕೆಯಿಂದ ಎಲ್ಲ 15 ಕ್ಷೇತ್ರಗಳ ಮತಗಟ್ಟೆಗಳಿಗೆ ಭಾರಿ ಬಂದೋಬಸ್ತ್ ಒದಗಿಸಲಾಗಿದೆ.

ಪ್ರಧಾನಿ ವಾಗ್ದಾಳಿ
ಕತುವಾ (ಜಮ್ಮು ಮತ್ತು ಕಾಶ್ಮೀರ):  ಕಾಂಗ್ರೆಸ್ ಹಾಗೂ ನ್ಯಾಷನಲ್‌ ಕಾನ್ಫರೆನ್ಸ್‌ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ರಾಜ್ಯಕ್ಕೆ ಬಿಜೆಪಿಯೇ  ಪರಿಹಾರ ಎಂದು ಹೇಳಿದರು.

ಕತುವಾದಲ್ಲಿ ಶನಿವಾರ ಹಮ್ಮಿ ಕೊಂಡಿದ್ದ ಚುನಾವಣಾ ರ್‍್ಯಾಲಿಯಲ್ಲಿ ಅವರು ಮಾತನಾಡಿದ ಅವರು, ರಾಜ್ಯ ದಲ್ಲಿ ರಚನೆಯಾದ ಎಲ್ಲ ಸರ್ಕಾರ ಗಳಲ್ಲೂ ಕಾಂಗ್ರೆಸ್‌ ಸೇರಿ ಕೊಂಡಿತ್ತು. ಆದರೆ ರಾಜ್ಯದ ಅಭಿವೃದ್ಧಿಗೆ ಏನೇನೂ ಮಾಡಲಿಲ್ಲ. ಆದ್ದರಿಂದ ಕಾಂಗ್ರೆಸ್‌, ಎನ್‌.ಸಿ ಮತ್ತು ಪಿಡಿಪಿಗಳಿಗೆ ಜನರೇ ಶಿಕ್ಷೆ ನೀಡಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ಮತ್ತು ಪಿಡಿಪಿ ರಾಜ್ಯದಲ್ಲಿ ವಂಶಾಡಳಿತ ನಡೆಸಿ ಸ್ವಜನ ಪಕ್ಷಪಾತ ತೋರಿವೆ. ಈ ರೀತಿಯ ಆಡಳಿತದ ಪ್ರಜಾಪ್ರಭುತ್ವದ ಧ್ವನಿಯಾ ಗಲಾರದು’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT