ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾವಡೇಕರ್‌ ರಾಜೀನಾಮೆಗೆ ಪಟ್ಟು

ಆರ್‌ಎಸ್‌ಎಸ್‌ ಕಾರ್ಯಕ್ರಮ ನೇರ ಪ್ರಸಾರ ವಿರೋಧಿಸಿ ಕಾಂಗ್ರೆಸ್‌ ಪ್ರತಿಭಟನೆ
Last Updated 5 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನಾಗಪುರದಲ್ಲಿ ನಡೆದ ಆರ್‌­ಎಸ್‌­ಎಸ್‌ ಕಾರ್ಯಕ್ರಮ ಮತ್ತು ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಭಾಷಣವನ್ನು ದೂರ­ದರ್ಶ­ನ­ದಲ್ಲಿ ನೇರ ಪ್ರಸಾರ ಮಾಡಿರುವುದನ್ನು ವಿರೋಧಿಸಿ  ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ದೂರ­ದರ್ಶನ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಖಾಸಗಿ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡುವ ಮೂಲಕ ಕೇಂದ್ರ ಸರ್ಕಾರ ಆಡಳಿತ ಯಂತ್ರ ದುರು­ಪ­ಯೋಗ ಮಾಡಿಕೊಂಡಿದೆ. ಅಧಿಕಾರ ದುರು­ಪ­­ಯೋ­ಗದ ನೈತಿಕ ಹೊಣೆ ಹೊತ್ತು ಕೇಂದ್ರ ವಾರ್ತಾ, ಪ್ರಸಾರ ಸಚಿವ ಪ್ರಕಾಶ್‌ ಜಾವಡೇಕರ್‌ ರಾಜೀ­­­ನಾಮೆ ನೀಡಬೇಕು ಎಂದು ಕಾಂಗ್ರೆಸ್‌ ಕಾರ್ಯಕರ್ತರು ಪಟ್ಟು ಹಿಡಿದರು.

ಆರ್‌ಎಸ್‌ಎಸ್‌ ಕಾರ್ಯಸೂಚಿಯ ಪ್ರಸಾರಕ್ಕೆ ಬಿಜೆಪಿ ಸರ್ಕಾರ ದೂರ­ದರ್ಶ­ನ­­ವನ್ನು ಬಳಸಿಕೊಂಡಿದೆ ಎಂದು ಪ್ರತಿ­ಭಟ­­ನೆಯ ನೇತೃತ್ವ ವಹಿಸಿದ್ದ ದೆಹಲಿ ಕಾಂಗ್ರೆಸ್‌ ಅಧ್ಯಕ್ಷ ಅರವಿಂದರ್‌ ಸಿಂಗ್‌ ಲವ್ಲಿ ಆರೋಪಿಸಿದರು. ದೇಶದ ಧರ್ಮನಿರಪೇಕ್ಷ ನಿಲುವಿನಲ್ಲಿ ನಂಬಿಕೆ ಇಟ್ಟ ಜನರ ಭಾವನೆಗಳಿಗೆ ಭಾಗ­ವತ್‌ ಅವರ ಭಾಷಣದಿಂದ ಘಾಸಿ ಆಗಿದೆ. ದೂರದರ್ಶನ ದುರುಪಯೋಗ ಪಡಿ­ಸಿ­ಕೊಂಡ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಬಹಿರಂಗವಾಗಿ ದೇಶದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಲವ್ಲಿ ಆಗ್ರಹಿಸಿದರು.

ಪ್ರತಿಭಟನಾನಿರತ ಕಾಂಗ್ರೆಸ್‌ ಕಾರ್ಯ­ಕರ್ತ­ರನ್ನು ಪೊಲೀಸರು ವಶಕ್ಕೆ ಪಡೆದರು. ಆರ್‌ಎಸ್‌ಎಸ್‌ ವಿವಾದಾ­ತ್ಮಕ ಧಾರ್ಮಿಕ ಹಾಗೂ ರಾಜಕೀಯ ಸಂಘಟನೆಯಾಗಿದ್ದು ಅದರ ಕಾರ್ಯ­ಕ್ರ­ಮದ ಪ್ರಸಾರ ಸರಿಯಲ್ಲ. ನಾಗಪುರದ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಯು ದೇಶದ ಸರ್ಕಾರವನ್ನು ನಿಯಂತ್ರಿಸಲು ಅವ­ಕಾಶ ನೀಡುವುದಿಲ್ಲ ಎಂದು ಪಕ್ಷದ ವಕ್ತಾರ ಮುಕೇಶ್‌ ಶರ್ಮಾ ಆಕ್ರೋಶ ವ್ಯಕ್ತಪಡಿಸಿದರು.

‌‘ವೃತ್ತಿಪರತೆ ಮೈಗೂಡಿಸಬೇಕಿದೆ’
ನಾಗಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ವಿಜಯದಶಮಿಯಂದು ಮಾತನಾಡಿದ್ದನ್ನು ದೂರ­­ದರ್ಶನವು ನೇರ ಪ್ರಸಾರ ಮಾಡಿದ ಕ್ರಮವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಸಮರ್ಥಿಸಿಕೊಂಡಿದ್ದಾರೆ.

ಸ್ವಾಯತ್ತ ಸಂಸ್ಥೆಯಾದ ದೂರದರ್ಶನದಲ್ಲಿ ವೃತ್ತಿಪರತೆ ಮೈಗೂಡಿಸುವುದು ಸರ್ಕಾ­ರದ ಉದ್ದೇಶವಾಗಿದೆ. ಆದ್ದರಿಂದ ಅದರ ಕಾರ್ಯದಲ್ಲಿ ಸರ್ಕಾರ ಮಧ್ಯ ಪ್ರವೇಶಿಸುವುದಿಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಬೇರೆ ಖಾಸಗಿ ವಾಹಿನಿಗಳು ಭಾಗವತ್‌ ಅವರ ಈ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಿವೆ. ಹಾಗಿರುವಾಗ ದೂರದರ್ಶನವೂ ಅದೇ ಕೆಲಸ ಮಾಡಿದರೆ ತಪ್ಪೇನು ಎಂದು ಅವರು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT