ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಎಚ್‌. ನಾಯಕರಿಗೆ ಅಕಾಡೆಮಿ ಗೌರವ

Last Updated 19 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಕನ್ನಡದ ಖ್ಯಾತ ಲೇಖಕ, ವಿಮ­ರ್ಶಕ ಡಾ.ಜಿ.ಎಚ್‌. ನಾಯಕ ಅವರು 2014ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾ­ಡೆಮಿ ಪ್ರಶಸ್ತಿ ಗೌರವಕ್ಕೆ ಪಾತ್ರ­ರಾಗಿ­ದ್ದಾರೆ. ಅವರ ‘ಉತ್ತರಾರ್ಧ’ ಪ್ರಬಂಧ ಕೃತಿ ಪ್ರಶಸ್ತಿಗೆ ಆಯ್ಕೆಯಾಗಿದೆ.

ಪ್ರಶಸ್ತಿಯು ರೂ1 ಲಕ್ಷ ನಗದು, ತಾಮ್ರದ ಫಲಕ, ಶಾಲು ಒಳಗೊಂಡಿದೆ. 2015ರ ಮಾರ್ಚ್‌ 9ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ. ಕನ್ನಡ ವಿಭಾಗದ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಡಾ. ಬಿ.ಎ. ವಿವೇಕ ರೈ, ಪ್ರೊ. ಪ್ರಧಾನ ಗುರುದತ್ತ ಹಾಗೂ ವೀರಣ್ಣ ದಂಡೆ ತೀರ್ಪುಗಾರರಾಗಿ­ದ್ದರು.

ಖಗೋಳ ವಿಜ್ಞಾನಿ ಜಯಂತ ನಾರ­ಲೀಕರ್‌ (ಮರಾಠಿ), ರಾಜಪಲೆಂ ಚಂದ್ರ­ಶೇಖರ ರೆಡ್ಡಿ (ತೆಲುಗು), ಮಾಧವಿ ಸರ­ದೇಸಾಯಿ (ಕೊಂಕಣಿ), ಸುಭಾಷ್‌­ಚಂದ್ರನ್‌ (ಮಲಯಾಳಂ), ಪೂಮಣಿ (ತಮಿಳು) ಸೇರಿ 22 ಭಾಷೆಗಳ ಲೇಖಕ­ರನ್ನೂ ಪ್ರಶಸ್ತಿಗೆ ಆಯ್ಕೆ ಮಾಡ­ಲಾ­ಗಿದೆ. ಸಂಸ್ಕೃತ ಮತ್ತು ಮಣಿ­ಪುರಿ ಲೇಖಕರನ್ನು 15 ದಿನ­ದೊ­ಳಗೆ ಆಯ್ಕೆ ಮಾಡುವುದಾಗಿ ಅಕಾಡೆಮಿ ಕಾರ್ಯ­ದರ್ಶಿ ಡಾ. ಕೆ. ಶ್ರೀನಿವಾಸ ರಾವ್‌ ಶುಕ್ರ­ವಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT