ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಎಲ್‌ವಿ ಯಶಸ್ವಿ ಉಡಾವಣೆ

ಮಾನವಸಹಿತ ಬಾಹ್ಯಾಕಾಶ ಯೋಜನೆಗೆ ‘ಇಸ್ರೊ’ ಮೊದಲ ಹೆಜ್ಜೆ
Last Updated 18 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಶ್ರೀಹರಿಕೋಟಾ (ಎಪಿ): ಇಲ್ಲಿನ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಗುರು­ವಾರ ಉಡಾವಣೆ ಮಾಡಲಾದ ‘ಜಿಎಸ್‌ಎಲ್‌ವಿ–ಮಾರ್ಕ್‌ 3’ ಪ್ರಾಯೋಗಿಕ ಪರೀಕ್ಷೆ ಯಶಸ್ಸು ಕಂಡಿದ್ದು, ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ಮತ್ತಷ್ಟು ಬಲ ಬಂದಂತಾಗಿದೆ.
‘ಜಿಎಸ್‌ಎಲ್‌ವಿ–ಮಾರ್ಕ್‌ 3’ ಜಿಎಸ್‌ಎಲ್‌ವಿ ಸರಣಿಯ ರಾಕೆಟ್‌­ಗಳಲ್ಲಿ ಅತ್ಯಾಧುನಿ­ಕವಾಗಿದ್ದು, ಮುಂದಿನ ತಲೆಮಾರಿಗೆ ಸೇರಿದೆ.  ಈ ಉಡಾವಣೆಯಲ್ಲಿ ‘ಇಸ್ರೊ’ ಎರಡು ಉದ್ದೇಶಗಳನ್ನು ಹೊಂದಿತ್ತು.

ಭಾರಿ ತೂಕದ ಉಪಗ್ರಹಗಳ ಉಡಾವಣೆಯಲ್ಲಿ ಸ್ವಾವಲಂಬನೆ ಸಾಧಿ­ಸು­ವುದು ಹಾಗೂ ಬಾಹ್ಯಾಕಾಶಕ್ಕೆ ಮಾನವರನ್ನು ಕಳುಹಿಸಲು ಸಾಧ್ಯವಾ­ಗುವಂತಹ ಅಂತರಿಕ್ಷ ನೌಕೆಯನ್ನು  ಉಡಾವಣೆ ಮಾಡಿ ಅದನ್ನು ಸುರಕ್ಷಿತ­ವಾಗಿ ಭೂಮಿಗೆ ಮರಳಿ ತರುವುದು.
ಈ ಪ್ರಾಯೋಗಿಕ ಉಡಾವಣೆಯ ಯಶಸ್ಸು ‘ಇಸ್ರೊ’ದ ಭವಿಷ್ಯದ ಯೋಜನೆ­ಗಳಿಗೆ ಭದ್ರ ಬುನಾದಿ ಹಾಕಿದೆ.

‘ಜಿಎಸ್ಎಲ್‌ವಿ –ಮಾರ್ಕ್‌ 3’ ನಾಲ್ಕು ಸಾವಿರ ಕೆ.ಜಿಗೂ ಹೆಚ್ಚು ತೂಕದ ಉಪಗ್ರಹಗಳನ್ನು ಭೂಸ್ಥಿರ ಕಕ್ಷೆಗೆ ಕೊಂಡೊಯ್ಯುವ ಸಾಮರ್ಥ್ಯ

ಸಮಯ 
ಬೆಳಿಗ್ಗೆ 9.30

ರಾಕೆಟ್‌ ತೂಕ
630 ಟನ್‌

ಅಂತರಿಕ್ಷ ನೌಕೆ ತೂಕ 
3650ಕೆ.ಜಿ. ಎತ್ತರ: 2.7 ಮೀ., ವ್ಯಾಸ: 3.1 ಮೀ.

ರಾಕೆಟ್‌ ವೆಚ್ಚ 
₨140 ಕೋಟಿ

 ಅಂತರಿಕ್ಷ ನೌಕೆ ವೆಚ್ಚ
₨ 15 ಕೋಟಿ

ಹೊಂದಿದೆ. ಮಾನವರನ್ನು ಬಾಹ್ಯಾಕಾಶಕ್ಕೆ ಕಳು­ಹಿಸಲು ಇಸ್ರೊಗೆ ಕನಿಷ್ಠ ಹತ್ತು ವರ್ಷ­ಗಳು ಹಿಡಿಯಲಿವೆ. ಆದರೆ, ಅಂತರಿಕ್ಷ ನೌಕೆಯನ್ನು 126 ಕಿ.ಮೀ. ಎತ್ತರಕ್ಕೆ ಚಿಮ್ಮಿಸಿ ಅದಕ್ಕೆ ಯಾವುದೇ ಹಾನಿ­ಯಾ­ಗದಂತೆ ಕೆಳಕ್ಕೆ ಇಳಿಸಿರುವುದು ಮಹತ್ವದ ಘಟ್ಟ. ಅಂತರಿಕ್ಷ ನೌಕೆಯಿಂದ ಸಂದೇಶ­ವನ್ನು ಸಹ ಪಡೆಯಲಾಗಿದೆ ಎಂದು ಇಸ್ರೊದ ಮಾನವಸಹಿತ ಬಾಹ್ಯಾ­ಕಾಶ ಯೋಜನೆ ನಿರ್ದೇಶಕ ಎಸ್‌.ಉನ್ನಿ­ಕೃಷ್ಣನ್‌ ನಾಯರ್‌ ತಿಳಿಸಿದ್ದಾರೆ.

ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಸಮೂಹದ ತುದಿಯಲ್ಲಿರುವ ಇಂದಿರಾ ಪಾಯಿಂಟ್‌ನಿಂದ 180 ಕಿ. ಮೀ. ದೂರದಲ್ಲಿ ಬಂಗಾಳ ಕೊಲ್ಲಿ­ಯಲ್ಲಿ 12 ನಿಮಿಷಗಳ ನಂತರ ಈ ನೌಕೆ ಇಳಿದಿದೆ.

2 ಅಥವಾ 3 ಗಗನಯಾತ್ರಿಗಳನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿ­ರುವ  ನೌಕೆ ಭೂವಾತಾವರಣ ಪ್ರವೇಶಿ­ಸುವಾಗ 1600 ಡಿಗ್ರಿ ಸೆಲ್ಸಿಯ­ಸ್‌ಗಳಷ್ಟು ಉಷ್ಣಾಂಶವನ್ನು ತಡೆದು­ಕೊಂಡಿತ್ತು.

ಕಪ್‌ ಕೇಕ್‌ ಮಾದರಿಯ ಅಂತರಿಕ್ಷ ನೌಕೆ 3650 ಕೆ.ಜಿ. ತೂಕದ್ದಾಗಿ­ರು­ವುದು ವಿಶೇಷ. 2007ರಲ್ಲಿ ಪಿಎಸ್‌­ಎಲ್‌ವಿ ರಾಕೆಟ್‌ ಮೂಲಕ 555 ಕೆ.ಜಿ. ತೂಕದ ಘಟಕವೊಂದನ್ನು ಉಡಾವಣೆ ಮಾಡಿ ವಾಪಸು ಪಡೆಯ­ಲಾಗಿತ್ತು. ಆದರೆ ಅದು ಮಾನವರನ್ನು ಕೊಂಡೊ­ಯ್ಯುವಂತಹ ನೌಕೆಯಾಗಿ­ರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT