ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಜಾರಿ: ಮೋದಿ ಭರವಸೆ

Last Updated 24 ನವೆಂಬರ್ 2015, 19:34 IST
ಅಕ್ಷರ ಗಾತ್ರ

ಸಿಂಗಪುರ (ಪಿಟಿಐ): ‘ಮಹತ್ವಾಕಾಂಕ್ಷೆಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯು ಶೀಘ್ರವೇ ಅನುಷ್ಠಾನಗೊಳ್ಳಲಿದ್ದು ಕೆಲವೇ ದಿನಗಳಲ್ಲಿ ಭಾರತವು ಹೂಡಿಕೆದಾರರ ಸ್ವರ್ಗವಾಗಿ ಪರಿವರ್ತನೆಯಾಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ  ಆಶಯ ವ್ಯಕ್ತಪಡಿಸಿದ್ದಾರೆ.

ವಿದೇಶಿ ಬಂಡವಾಳ  ಹೂಡಿಕೆಗೆ ಪೂರಕವಾದ ಉದ್ಯಮಸ್ನೇಹಿ ವಾತಾವರಣ   ನಿರ್ಮಿಸಲು  ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಸುಧಾರಣಾ ಕ್ರಮಗಳನ್ನು ಜಾರಿಗೆ ತರುತ್ತಿರುವುದಾಗಿಯೂ  ಅವರು ಭರವಸೆ ನೀಡಿದರು. ಜಿಎಸ್‌ಟಿ ಕಾಯ್ದೆ ಜಾರಿಗೆ ಬಂದ ನಂತರ ದೇಶದಲ್ಲಿ ಹೂಡಿಕೆಗೆ ಅವಕಾಶಗಳು ತೆರೆದುಕೊಳ್ಳಲಿವೆ. ಔದ್ಯೋಗಿಕ ಚಟುವಟಿಕೆಗಳು ಗರಿಗೆದರಲಿವೆ ಎಂದು  ಆಶಿಸಿದರು.  

2016ರಲ್ಲಿ ಜಿಎಸ್‌ಟಿ ಕಾಯ್ದೆ ಜಾರಿಗೆ ಬರಲಿದ್ದು, ಕಂಪೆನಿ ಕಾಯ್ದೆ ನ್ಯಾಯಮಂಡಳಿ ಕೂಡ ಅಸ್ತಿತ್ವಕ್ಕೆ ಬರಲಿದೆ ಎಂದರು.ಮಂಗಳವಾರ ಇಲ್ಲಿ ನಡೆದ ಭಾರತ–ಸಿಂಗಪುರ ಆರ್ಥಿಕ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ,  ವಿದೇಶಿ ಹೂಡಿಕೆದಾರರ ಹಿತ ಕಾಯುವುದಾಗಿ  ಅಭಯ ನೀಡಿದರು. ಸುಸಜ್ಜಿತ ನಗರಗಳನ್ನು (ಸ್ಮಾರ್ಟ್‌ಸಿಟಿ) ಅಭಿವೃದ್ಧಿಪಡಿಸಲು ಭಾರತದ ಜತೆ ಕೈಜೋಡಿಸುವಂತೆ ಸಿಂಗಪುರದ ಕಂಪೆನಿಗಳು ಹಾಗೂ ಉದ್ಯಮಿಗಳಿಗೆ   ಅವರು ಆಹ್ವಾನ ನೀಡಿದರು.

‘ಪ್ರಮುಖ ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ)   ಪೂರಕವಾಗಿ ತಮ್ಮ ಸರ್ಕಾರ ಇತ್ತೀಚಿಗೆ ಕೈಗೊಂಡ ಸುಧಾರಣಾ ಕ್ರಮಗಳು ಭಾರಿ ಬದಲಾವಣೆ ತಂದಿವೆ. ಭಾರತವನ್ನು ವಿಶ್ವದಲ್ಲಿಯೇ ಗರಿಷ್ಠ ಪ್ರಮಾಣದ ಮುಕ್ತ ಆರ್ಥ ವ್ಯವಸ್ಥೆಯನ್ನಾಗಿ ಪರಿವರ್ತಿಸಿವೆ’ ಎಂದು ಮೋದಿ ಬಣ್ಣಿಸಿದರು.

‘ವಿದೇಶಿ ನೇರ ಬಂಡವಾಳ ಹೂಡಿಕೆ ಮಿತಿಯನ್ನು ಶೇ 40ರಷ್ಟು ಹೆಚ್ಚಿಸಿದ ನಂತರ ಭಾರತದ ವಾಣಿಜ್ಯ, ವಹಿವಾಟು ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ.  ನಮ್ಮ ಊಹೆ ಸರಿಯಾದ ದಿಕ್ಕಿನಲ್ಲಿ ಕೆಲಸ ಮಾಡಿದ್ದು ಧನಾತ್ಮಕ ಫಲಿತಾಂಶ ಹೊರಹೊಮ್ಮಿದೆ’  ಎಂದು ಹರ್ಷ ವ್ಯಕ್ತಪಡಿಸಿದರು. 18 ತಿಂಗಳಲ್ಲಿ ಅರ್ಥ ವ್ಯವಸ್ಥೆಯನ್ನು ಸರಿ ದಾರಿಗೆ ತರಲಾಗಿದ್ದು ದೇಶದಲ್ಲಿ ಹಿಂದೆಂದೂ ನಡೆಯದ ರೀತಿಯಲ್ಲಿ ಸುಧಾರಣೆಗಳಾಗುತ್ತಿವೆ.  ಜನರ ದಶಕಗಳ ಕನಸು ನನಸಾಗುವ ಕಾಲ ಕೂಡಿ ಬಂದಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT