ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಗಳಿಗೆ ಭೂಸರ್ವೆ ಯೋಜನೆ ವಿಸ್ತರಣೆ

Last Updated 30 ಜುಲೈ 2014, 20:28 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಭೂ­ದಾಖಲೆಗಳ ಆಧುನೀಕರಣ ಯೋಜನೆ ಅಡಿಯಲ್ಲಿ ರಾಜ್ಯದ 14 ಜಿಲ್ಲೆಗಳ ತಲಾ ಎರಡು ಗ್ರಾಮಗಳಲ್ಲಿ ನಡೆಯು­ತ್ತಿ­ರುವ ಪ್ರಾಯೋಗಿಕ  ಮರು­ಭೂಮಾ­ಪನ ಕಾರ್ಯ­­ವನ್ನು ಎರಡು ವರ್ಷ­ಗ­ಳಲ್ಲಿ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲಾಗು­ವುದು ಎಂದು ಕಂದಾಯ ಸಚಿವ ವಿ. ಶ್ರೀನಿ­ವಾಸ ಪ್ರಸಾದ್‌ ವಿಧಾನ­ಪರಿ­ಷತ್ತಿ­ನಲ್ಲಿ ಬುಧವಾರ ಹೇಳಿದರು.

ರಾಜ್ಯದಲ್ಲಿ ನಡೆಸಲಾಗಿರುವ ಭೂಸರ್ವೆ ಕುರಿತಂತೆ ಪ್ರಶ್ನೋತ್ತರ ಅವ­ಧಿ­ಯಲ್ಲಿ ಕಾಂಗ್ರೆಸ್‌ನ ಜಯ­ಮಾಲಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಬ್ರಿಟಿಷರು ತಮ್ಮ ಆಡಳಿತಾತ್ಮಕ ವ್ಯಾಪ್ತಿ­ಯಲ್ಲಿ 1818­ರಿಂದ 1919ರ ನಡುವೆ ವಿವಿಧ ಪ್ರಾದೇಶಿಕ ಪ್ರಾಂತ್ಯಗಳಲ್ಲಿ ಭೂಸರ್ವೆ ನಡೆಸಿದ್ದರು. ಅದರ ನಂತರ ಸರ್ವೆ­ಕಾರ್ಯ ನಡೆದಿಲ್ಲ’ ಎಂದರು.

ಕರ್ನಾಟಕ ಭೂ ಕಂದಾಯ ಕಾಯ್ದೆ–1964ರ ಪ್ರಕಾರ 30 ವರ್ಷಗಳಿ­ಗೊಮ್ಮೆ ಭೂಮಿಯ ಸರ್ವೆ ನಡೆಸ­ಬಹುದು. 1965ರಲ್ಲಿ ರಾಜ್ಯದಾ­ದ್ಯಂತ 2ನೇ ಪುನರ್‌ವಿಂಗಡಣೆ ಸರ್ವೆ ಮಾಡ­ಲಾಗಿದೆ ಎಂದು ಅವರು ಮಾಹಿತಿ ನೀಡಿದರು. 2013–14ರ ಸಾಲಿನಲ್ಲಿ ರಾಷ್ಟ್ರೀಯ ಭೂದಾಖಲೆಗಳ ಯೋಜನೆ ಅಡಿ­ಯಲ್ಲಿ ರಾಜ್ಯದ 14 ಜಿಲ್ಲೆಗಳ 27 ಗ್ರಾಮ­ಗಳಲ್ಲಿ ಭೂಸರ್ವೆ ನಡೆಸ­ಲಾ­ಗು­ತ್ತಿದೆ. ಯೋಜನಾ ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ, 50–50ರ ಅನುಪಾತ­ದಲ್ಲಿ ಭರಿಸುತ್ತಿದ್ದು ಎರಡು ಖಾಸಗಿ ಸಂಸ್ಥೆಗಳು ಸರ್ವೆ ಕಾರ್ಯದಲ್ಲಿ ನಿರತವಾಗಿವೆ ಎಂದು ಹೇಳಿದರು.

ಜಂಟಿ ಸರ್ವೆ: ರಾಜ್ಯದಲ್ಲಿ ಅರಣ್ಯ ಭೂಮಿ ಮತ್ತು ಕಂದಾಯ ಭೂಮಿಯನ್ನು ಇನ್ನೂ ಪ್ರತ್ಯೇಕಿಸ­ಲಾ­ಗಿಲ್ಲ ಎಂದ ಸಚಿವರು, ಪ್ರಾಯೋ­ಗಿಕ­ವಾಗಿ ಜಂಟಿ ಸರ್ವೆ ನಡೆಸಲು ಮೇ 15­ರಂದು ಅರಣ್ಯ ಇಲಾಖೆ ಆದೇಶ ಹೊರ­ಡಿದ್ದು, ಚಾಮ­ರಾಜ­ನಗರದಲ್ಲಿ ಈ ಕಾರ್ಯ ಆರಂಭವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT