ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವದಾನ: ಮರುಪರಿಶೀಲನೆ ಇಲ್ಲ

Last Updated 1 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹಂತಕರ ಗಲ್ಲು ಶಿಕ್ಷೆ­ಯನ್ನು ಜೀವಾವಧಿಗೆ ಇಳಿಸಿ ನೀಡಿದ್ದ ತೀರ್ಪನ್ನು ಪುನರ್‌ ಪರಿಶೀಲಿಸಲು ಸುಪ್ರೀಂ­ಕೋರ್ಟ್‌ ಮಂಗಳವಾರ ನಿರಾಕರಿಸಿದೆ.

‘ಕೇಂದ್ರ ಸಲ್ಲಿಸಿದ ಪುನರ್‌­ಪರಿ­ಶೀಲನಾ ಅರ್ಜಿ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ನಾವು ಸೂಕ್ಷ್ಮವಾಗಿ ಅವ­ಲೋಕಿ­ಸಿದ್ದೇವೆ. ತೀರ್ಪನ್ನು ಪುನರ್‌­ಪರಿಶೀಲಿಸುವ ಪ್ರಶ್ನೆಯೇ ಇಲ್ಲ. ಹಾಗಾಗಿ ನಾವು ಈ ಅರ್ಜಿಯನ್ನು ವಜಾ ಮಾಡಿ­ದ್ದೇವೆ’ ಎಂದು ಮುಖ್ಯನ್ಯಾಯಮೂರ್ತಿ ಪಿ.ಸದಾಶಿವಂ ಹಾಗೂ ನ್ಯಾಯಮೂರ್ತಿ­ಗಳಾದ ರಂಜನ್‌ ಗೊಗೊಯ್‌ ಮತ್ತು ಎಸ್‌.ಕೆ.ಸಿಂಗ್‌ ಹೇಳಿದರು.

ಈ ಪ್ರಕರಣದ ವಾಸ್ತವಾಂಶಗಳನ್ನು ತ್ರಿಸದಸ್ಯ ಪೀಠ ಪರಿಶೀಲಿಸಿಲ್ಲ.
ಹಂತಕರ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಸಿ ತೀರ್ಪು ನೀಡುವ ಮೂಲಕ ಸರ್ಕಾರದ ಅಧಿಕಾರ ವ್ಯಾಪ್ತಿಯೊಳಗೆ ಹಸ್ತಕ್ಷೇಪ ಮಾಡಿದೆ’ ಎಂದು ಕೇಂದ್ರ ತನ್ನ ಅರ್ಜಿ­ಯಲ್ಲಿ ವಾದಿಸಿತ್ತು.

‘ಈ ಆಕ್ಷೇಪಾರ್ಹ ತೀರ್ಪು ಕಾನೂನು­ಬದ್ಧ­ವಾಗಿಲ್ಲ ಎನ್ನುವುದು ಸ್ಪಷ್ಟವಾಗಿ ವೇದ್ಯವಾಗುತ್ತದೆ. ಸುಪ್ರೀಂಕೋರ್ಟ್‌ ಹಾಕಿ­­ಕೊಟ್ಟ ತತ್ವಗಳಿಗೂ ಇದು ವಿರುದ್ಧ­ವಾಗಿದೆ’ ಎಂದೂ ಅದು ಹೇಳಿತ್ತು.

ರಾಜೀವ್‌ ಹಂತಕರಾದ ಸಾಂತನ್‌, ಮುರುಗನ್‌ ಮತ್ತು ಪೇರ್‌­ಅರಿ­ವಾ­ಳನ್‌ ಗಲ್ಲು ಶಿಕ್ಷೆಯನ್ನು ಜೀವಾ­ವಧಿಗೆ ಇಳಿಸಿ ಫೆಬ್ರುವರಿ 18ರಂದು ಸುಪ್ರೀಂ­ಕೋರ್ಟ್‌  ತೀರ್ಪು ನೀಡಿತ್ತು.

ಕ್ಷಮಾದಾನ ಮನವಿ ಇತ್ಯರ್ಥಕ್ಕೆ ವಿಳಂಬ­­ವಾಗಿರುವುದರಿಂದ ತಮಗೆ ವಿಧಿ­ಸಿರುವ ಗಲ್ಲು ಶಿಕ್ಷೆಯನ್ನು ರದ್ದು ಮಾಡ­ಬೇಕೆಂದು ಕೋರಿ ಈ ಮೂವರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT