ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನ ಪರ್ಯಂತ ಭಾರತೀಯಳು: ಸಾನಿಯಾ

Last Updated 24 ಜುಲೈ 2014, 12:12 IST
ಅಕ್ಷರ ಗಾತ್ರ

ಹೈದರಾಬಾದ್(ಐಎಎನ್ಎಸ್): ‘ನಾನು ಜೀವನ ಪರ್ಯಂತ ಭಾರತೀಯಳಾಗಿರುತ್ತೇನೆ’ ಎಂದು ತೆಲಂಗಾಣದ ನೂತನ ಪ್ರಚಾರ ರಾಯಬಾರಿಯಾಗಿ ನೇಮಕಗೊಂಡಿರುವ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಗುರುವಾರ ಹೇಳಿದ್ದಾರೆ.

ನಾನು ಪಾಕಿಸ್ತಾನದ ಶೋಯಬ್ ಮಲಿಕ್ ಅವರನ್ನು ಮದುವೆಯಾಗಿದ್ದೇನೆ. ಆದರೆ, ನಾನು ಭಾರತೀಯಳು, ನನ್ನ ಜೀವಮಾನದ ಕೊನೆಯವರೆಗೆ ಭಾರತೀಯಳಾಗಿಯೇ ಇರುತ್ತೇನೆ ಎಂದು ಹೇಳಿದರು.

ನನ್ನ ಪಾಲಿಗೆ ಇದು ಅತ್ಯಂತ ಅಮೂಲ್ಯ ಸಮಯ. ಇದನ್ನು ರಾಷ್ಟ್ರ ಮತ್ತು ರಾಜ್ಯದ ತುರ್ತು ಸಮಸ್ಯೆಗಳ ನಿವಾರಣೆಗೆ ವಿನಿಯೋಗಿಸುತ್ತೇನೆ ಎಂದಿದ್ದಾರೆ.

ಸಾನಿಯಾ ಅವರನ್ನು ತೆಲಂಗಾಣದ ಪ್ರಚಾರ ರಾಯಬಾರಿಯನ್ನಾಗಿ ನೇಮಕ ಮಾಡಿದ್ದಕ್ಕೆ ತೆಲಂಗಾಣ ಬಿಜೆಪಿ ಮುಖಂಡರು ಬುಧವಾರ ವಿರೋಧ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT