ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಂಪಾಗೆ ಅಮೆರಿಕದ ಮಾನವಿಕ ಪದಕ

Last Updated 4 ಸೆಪ್ಟೆಂಬರ್ 2015, 19:41 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಭಾರತ ಮೂಲದ ಲೇಖಕಿ, ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತೆ ಜುಂಪಾ ಲಾಹಿರಿ ಅಮೆರಿಕದ ಪ್ರತಿಷ್ಠಿತ ರಾಷ್ಟ್ರೀಯ ಮಾನವಿಕ ಪದಕಕ್ಕೆ (ನ್ಯಾಷನಲ್ ಹ್ಯುಮ್ಯಾನಿಟೀಸ್‌ ಮೆಡಲ್‌) ಆಯ್ಕೆಯಾಗಿದ್ದಾರೆ.

ಸೆಪ್ಟೆಂಬರ್ 10ರಂದು ಶ್ವೇತಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಪದಕ ಪ್ರದಾನ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಬರಾಕ್‌ ಅವರ ಪತ್ನಿ ಮಿಷೆಲ್‌ ಕೂಡಾ ಭಾಗವಹಿಸಲಿದ್ದಾರೆ.
ಜುಂಪಾ ತಮ್ಮ ಕೃತಿಗಳಲ್ಲಿ ಭಾರತದ ಮೂಲದ ಅಮೆರಿಕನ್ನರ ಅನುಭವಗಳನ್ನು ಸುಂದರವಾಗಿ ನಿರೂಪಣೆ ಮಾಡಿದ್ದಾರೆ.

ಅವರ ಬರವಣಿಗೆಯಲ್ಲಿ ಮಾನವೀಯ ಅಂಶಗಳ ನಿರೂಪಣೆ ಕಂಡು ಬರುತ್ತದೆ’ ಎಂದು ಶ್ವೇತ ಭವನದ ಪ್ರಕಟಣೆ ತಿಳಿಸಿದೆ. ಭಾರತೀಯ ಮೂಲದ ಅಮೆರಿಕನ್ ಲೇಖಕಿಯಾಗಿರುವ ಜುಂಪಾ ಅವರ ‘ಇಂಟರ್‌ಪ್ರಿಟರ್ ಆಫ್‌ ಮ್ಯಾಲಡೀಸ್‌’  ಕೃತಿ 2000ರ ಪುಲಿಟ್ಜರ್ ಪ್ರಶಸ್ತಿಗೆ ಆಯ್ಕೆಯಾಗಿತ್ತು. 

ಜುಂಪಾ ಲಾಹಿರಿ ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧರಾಗಿರುವ ನೀಲಾಂಜನ ಸುದೇಷ್ಣ ಪ್ರಿನ್ಸ್‌ಟನ್‌ ವಿ.ವಿ.ಯಲ್ಲಿ  ಪ್ರಾಧ್ಯಾಪಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT