ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ: ಶೇ 2.7ಕ್ಕೆ ಕುಸಿದ ಪ್ರಗತಿ

ಪ್ರಮುಖ ಕೈಗಾರಿಕಾ ವಲಯ ಕಳಪೆ ಸಾಧನೆ
Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ದೇಶದ ಎಂಟು ಪ್ರಮುಖ ಕೈಗಾರಿಕಾ ವಲಯಗಳು ಜುಲೈನಲ್ಲಿ ಕಳಪೆ ಸಾಧನೆ ತೋರಿ ಕೇವಲ ಶೇ 2.7ರಷ್ಟು ಪ್ರಗತಿ ದಾಖಲಿಸಿವೆ. 2013ರ ಜುಲೈನಲ್ಲಿ ಶೇ 5.3ರಷ್ಟು ಪ್ರಗತಿ ದಾಖಲಾಗಿತ್ತು.

ಮೂಲ ಸೌಕರ್ಯ ವಲಯಕ್ಕೆ ಸೇರಿದ ಈ ಎಂಟು ಪ್ರಮುಖ ಕೈಗಾರಿಕಾ ವಿಭಾಗಗಳಿಂದಲೇ ದೇಶದ ಒಟ್ಟಾರೆ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕಕ್ಕೆ (ಐಐಪಿ) ಶೇ 38ರಷ್ಟು ಕೊಡುಗೆ ಬರುತ್ತದೆ.

ಆದರೆ, ಈ ಬಾರಿ ಕಚ್ಚಾತೈಲ (ಶೇ 1), ನೈಸರ್ಗಿಕ ಅನಿಲ(ಶೇ 9), ಶುದ್ಧೀಕರಿಸಿದ ಉತ್ಪನ್ನಗಳು (ಶೇ 5.5), ರಸಗೊಬ್ಬರ (ಶೇ 4.2) ಮತ್ತು ಉಕ್ಕು (ಶೇ 3.4) ವಿಭಾಗದ ಕೈಗಾರಿಕೆಗಳಲ್ಲಿನ ನಿರಾಶಾದಾಯಕ ಚಟುವಟಿಕೆಯೇ ಪ್ರಮುಖ ಕೈಗಾರಿಕಾ ವಿಭಾಗದಲ್ಲಿನ ಹಿನ್ನಡೆಗೆ ಮೂಲ­ವಾಗಿದೆ. ಇದು ಕಳವಳಕ್ಕೂ ಕಾರಣವಾಗಿದೆ.

ಇರುವುದರಲ್ಲಿಯೇ ಕಲ್ಲಿದ್ದಲು (ಶೇ 6.2), ಸಿಮೆಂಟ್‌ (ಶೇ 16.5) ಮತ್ತು ವಿದ್ಯುತ್‌ ಉತ್ಪಾದನೆ (ಶೇ 11.2) ವಿಭಾಗದಿಂದ ಉತ್ತಮ ಸಾಧನೆ ಕಂಡುಬಂದಿದೆ.

ಜೂನ್‌ನಲ್ಲಿ ಮಾತ್ರ ಸಿಮೆಂಟ್ ಮತ್ತು ವಿದ್ಯುತ್‌ ಕ್ಷೇತ್ರದ ಅತ್ಯುತ್ತಮ ಕೊಡುಗೆಯಿಂದಾಗಿ ಪ್ರಮುಖ ಕೈಗಾರಿ­ಕೆಗಳ ವಲಯದಲ್ಲಿ ಶೇ 7.3ರಷ್ಟು ಸಾಧನೆಯಾಗಿತ್ತು. ಇದು ಹಿಂದಿನ 9 ತಿಂಗಳಲ್ಲೇ ಗರಿಷ್ಠ ಮಟ್ಟದ ಪ್ರಗತಿ­ಯಾಗಿತ್ತು.

4 ತಿಂಗಳದ್ದು ಯಥಾಸ್ಥಿತಿ
2014ರ ಏಪ್ರಿಲ್‌ ಜುಲೈ (ನಾಲ್ಕು ತಿಂಗಳು) ಅವಧಿಯಲ್ಲಿ ಸೂಚ್ಯಂಕದಲ್ಲಿ ಶೇ 4.1ರಷ್ಟು ಏರಿಕೆ ಕಂಡುಬಂದಿದೆ.
ಹಿಂದಿನ ವರ್ಷದ ಇದೇ ಅವಧಿ­ಯಲ್ಲಿಯೂ ಇಷ್ಟೇ ಪ್ರಮಾಣದ ಪ್ರಗತಿ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT