ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ 7ರಿಂದ ಸಂಸತ್‌ ಬಜೆಟ್‌ ಅಧಿವೇಶನ

Last Updated 23 ಜೂನ್ 2014, 20:31 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್ತಿನ ಬಜೆಟ್‌ ಅಧಿ­ವೇ­ಶನವು ಜುಲೈ 7ರಿಂದ ಆರಂಭ­ವಾಗ­ಲಿದ್ದು, ನರೇಂದ್ರ ಮೋದಿ ಸರ್ಕಾರದ ಚೊಚ್ಚಲ ಬಜೆಟ್ ಜುಲೈ 10 ರಂದು ಮಂಡನೆ ಆಗಲಿದೆ.

ಜುಲೈ 8 ರಂದು ರೈಲ್ವೆ ಸಚಿವರು ರೈಲ್ವೆ ಬಜೆಟ್‌ ಮಂಡಿಸು­ವರು. 9ರಂದು ಆರ್ಥಿಕ ಸಮೀಕ್ಷೆ ಬಿಡುಗಡೆ­ಗೊಳ್ಳಲಿದೆ. ಸಂಸ­ದೀಯ ವ್ಯವಹಾರಗಳ ಸಚಿವ ಎಂ. ವೆಂಕಯ್ಯ ನಾಯ್ಡು ಅವರ ಕಚೇರಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದ ಸಂಸದೀಯ ವ್ಯವ­ಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳ­ಲಾಯಿತು. ಜುಲೈ 7ರಿಂದ ಆಗಸ್ಟ್‌ 14ರವರೆಗೆ ಅಧಿವೇಶನ ನಡೆಸಲು ನಿರ್ಧರಿಸಲಾಯಿತು.

ಯುಪಿಎ ಸರ್ಕಾರವು ಸಂಸತ್ತಿನ ಕೊನೆಯ ಅಧಿವೇಶನದಲ್ಲಿ ಮಂಡಿಸಿದ ಲೇಖಾ­­ನು­ದಾನದ ಅವಧಿ ಜುಲೈ 31­ರಂದು ಮುಗಿಯಲಿದ್ದು, ಅಷ್ಟ­ರೊಳಗೆ ಹೊಸ ಬಜೆಟ್‌ ಮಂಡಿಸಿ, ಒಪ್ಪಿಗೆ ಪಡೆ­ಯ­ಬೇಕಾಗಿದೆ.

ಪರಿಶಿಷ್ಟ ಜಾತಿ– ಪಂಗಡಗಳ ಮೇಲಿನ ದೌರ್ಜನ್ಯ ತಡೆ, ಸೆಬಿ ಹಾಗೂ ಟ್ರಾಯ್‌ ಸಂಬಂಧದ ಸುಗ್ರೀವಾಜ್ಞೆಗಳನ್ನು ಮಸೂದೆ ಮೂಲಕ ಬದಲಾಯಿಸಲು ಗೃಹ ಸಚಿವ ರಾಜನಾಥ್‌ಸಿಂಗ್‌ ನೇತೃತ್ವದ ‘ಸಿಸಿಪಿಎ’ ತೀರ್ಮಾನಿಸಿತು.

ಪ್ರತಿಪಕ್ಷದ ಸ್ಥಾನಮಾನ: ಬಜೆಟ್ ಅಧಿವೇಶನ­ದಲ್ಲಿ, ರೈಲು ಪ್ರಯಾಣ ಹಾಗೂ ಸರಕು ಸಾಗಣೆ ದರಗಳನ್ನು ಏರಿಸಿರುವ ಸರ್ಕಾ­ರದ ಕ್ರಮವನ್ನು ವಿರೋಧ ಪಕ್ಷಗಳು ತರಾಟೆಗೆ ತೆಗೆದು­ಕೊ­ಳ್ಳುವ ಸಾಧ್ಯತೆಯಿದೆ. ಈ ಅಧಿ­ವೇಶನದ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ವಿರೋಧ ಪಕ್ಷದ ಸ್ಥಾನಮಾನ ಕೊಡುವ ಕುರಿತು ನಿರ್ಣಯ ಕೈಗೊಳ್ಳುವುದಾಗಿ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಹೇಳಿದ್ದಾರೆ.

ಲೋಕಸಭೆಯಲ್ಲಿ ಬಿಜೆಪಿ ಬಳಿಕ ಕಾಂಗ್ರೆಸ್‌ ಅತಿ ಹೆಚ್ಚು ಸ್ಥಾನ ಪಡೆದ ದೊಡ್ಡ ಪಕ್ಷವಾಗಿದೆ. ಅಲ್ಲದೆ, ಚುನಾವಣೆಗೆ ಮುನ್ನ ಮಾಡಿಕೊಂಡಿ­ರುವ ಮೈತ್ರಿಕೂಟದ ಸದಸ್ಯರ ಸಂಖ್ಯೆ ಅಗತ್ಯ­ಕ್ಕಿಂತಲೂ ಹೆಚ್ಚಾಗಿದೆ ಎಂದು ಪ್ರತಿಪಾದಿಸಿದೆ. ಆದರೆ, ಯಾವುದೇ ಕಾರಣಕ್ಕೂ ವಿರೋಧ ಪಕ್ಷದ ಸ್ಥಾನಮಾನವನ್ನು ಬೇಡುವ ಪ್ರಶ್ನೆಯೇ ಇಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ.

ಬಜೆಟ್‌ ಅಧಿವೇಶನದಲ್ಲೇ ಲೋಕ­ಸಭೆ ಉಪ ಸ್ಪೀಕರ್‌ ಚುನಾವಣೆಯೂ ನಡೆಯಲಿದೆ ಎಂದು ಈಗಾಗಲೇ ವೆಂಕಯ್ಯ ನಾಯ್ಡು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT