ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್‌ 10,11ರಂದು ರಿಲೇ ರನ್ ಕಾರ್ಯಕ್ರಮ

Last Updated 28 ಏಪ್ರಿಲ್ 2016, 19:46 IST
ಅಕ್ಷರ ಗಾತ್ರ

ಬೆಂಗಳೂರು: ಇನ್ವೆಂಟರ್ಸ್ ಇಂಡಿಯಾ ರಿಸರ್ಚ್‌ ಫೌಂಡೇಷನ್ ವತಿಯಿಂದ ‘ಬೆಂಗಳೂರು– ಮೈಸೂರು ಮಧ್ಯೆ ಟ್ವಿನ್ ಸಿಟಿ ರಿಲೇ ರನ್’ ಕಾರ್ಯಕ್ರಮವನ್ನು ಜೂನ್ 10 ಮತ್ತು 11 ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಾಜಿ ಶರ್ಮಾ ಹೇಳಿದರು.

‘ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆವಿಷ್ಕಾರಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಯುವಕರಿಗೆ ಧನ ಸಹಾಯ ಮಾಡುವುದು ಮತ್ತು ಯುವ ಸಮುದಾಯಕ್ಕೆ ಉತ್ತೇಜನ ನೀಡುವ  ಉದ್ದೇಶದಿಂದ ಹಣ ಸಂಗ್ರಹಕ್ಕಾಗಿ ಈ ರಿಲೇಯನ್ನು ಆಯೋಜಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಈ ರಿಲೇಯು ಬೆಂಗಳೂರು ಮತ್ತು ಮೈಸೂರು ಹೆದ್ದಾರಿಗಳ ನಡುವೆ ನಡೆಯಲಿದೆ. ನಗರದ ಹೊರವಲಯದ ಮೈಸೂರು ರಸ್ತೆಯ ಕೆಂಗೇರಿ ಬಳಿಯ ಡೆಕಥ್ಲಾನ್‌ ನಿಂದ  ಜೂನ್ 10 ರಂದು ಸಂಜೆ 7  ಗಂಟೆಗೆ ಆರಂಭವಾಗಿ  ಜೂನ್ 11ರ ಬೆಳಿಗ್ಗೆ 9 ಗಂಟೆಗೆ ಮೈಸೂರಿನ ಚಾಮುಂಡಿ ಮೈದಾನದಲ್ಲಿ ಅಂತ್ಯವಾಗಲಿದೆ’ ಎಂದು ಹೇಳಿದರು.

‘ಟ್ವಿನ್ ಸಿಟಿ ರಿಲೇ ರನ್ ನಲ್ಲಿ ಪ್ರೋಲೀಗ್ ಮತ್ತು ಓಪನ್ ಲೀಗ್ ಎಂಬ ಎರಡು ವಿಭಾಗಗಳಿವೆ. ಪ್ರೋಲೀಗ್ ನಲ್ಲಿ ವೃತ್ತಿಪರ 8 ಓಟಗಾರರ ತಂಡಗಳಿ ರುತ್ತವೆ. ಓಪನ್ ಲೀಗ್ ನಲ್ಲಿ ವೃತ್ತಿಪರ ಓಟಗಾರರಲ್ಲದ  12 ಜನರ ತಂಡಗಳಿ ರುತ್ತವೆ. ಈ ರಿಲೇಯಲ್ಲಿ ವೈಯಕ್ತಿಕ ಪ್ರಶಸ್ತಿ ಇರುತ್ತವೆ’ ಎಂದು  ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT