ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್ 3ರಂದು ಪ್ರಧಾನಿ- ಜಯಲಲಿತಾ ಭೇಟಿ

Last Updated 30 ಮೇ 2014, 11:16 IST
ಅಕ್ಷರ ಗಾತ್ರ

ಚೆನ್ನೈ (ಐಎಎನ್ಎಸ್): ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸಮಾರಂಭವನ್ನು ಬಹಿಷ್ಕರಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು  ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸುವ ಸಲುವಾಗಿ ಜೂನ್ 3ರಂದು ಪ್ರಧಾನಿಯವರನ್ನು ಭೇಟಿ ಮಾಡಲಿದ್ದಾರೆ.

ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಭೇಟಿ ಮಾಡಿ ತಮಿಳುನಾಡಿಗೆ ಸಂಬಂಧಿಸಿದ ವಿಷಯಗಳ ಪಟ್ಟಿಯನ್ನು ಸಲ್ಲಿಸಲಿದ್ದಾರೆ ಎಂದು ಶುಕ್ರವಾರ ಅಧಿಕೃತವಾಗಿ ಪ್ರಕಟಿಸಲಾಗಿದೆ.

ಕೇಂದ್ರವು ಕ್ರಮ ಕೈಗೊಳ್ಳಬೇಕಾದ ದೀರ್ಘಕಾಲದಿಂದ ನೆನೆಗುದಿಯಲ್ಲಿರುವ ತಮಿಳುನಾಡಿಗೆ ಸಂಬಂಧಿಸಿದ ಪ್ರಮುಖ ವಿಷಯಗಳು ಬೇಡಿಕೆ ಪಟ್ಟಿಯಲ್ಲಿ ಒಳಗೊಳ್ಳಲಿವೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಮೋದಿ ಅವರು ಮೇ 26ರಂದು ಪ್ರಧಾನಿಯಾದ ಬಳಿಕ ಅವರೊಂದಿಗೆ ಜಯಲಲಿತಾ ನಡೆಸುತ್ತಿರುವ ಪ್ರಥಮ ಭೇಟಿ ಇದಾಗಲಿದೆ.

ಪ್ರಮಾಣವಚನ ಸಮಾರಂಭಕ್ಕೆ ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರನ್ನು ಆಹ್ವಾನಿದ ಕ್ರಮವನ್ನು ಪ್ರತಿಭಟಿಸಿ ಜಯಲಲಿತಾ ಅವರು ಪ್ರಮಾಣವಚನ ಸಮಾರಂಭವನ್ನು ಬಹಿಷ್ಕರಿಸಿದ್ದರು.

2009ರಲ್ಲಿ ರಾಜಪಕ್ಸೆ ಅವರ ಆಡಳಿತಾವಧಿಯಲ್ಲಿ ತಮಿಳು ಟೈಗರ್ ಗಳನ್ನು ದಮನಿಸಿದ ಕಾರ್ಯಾಚರಣೆಯ ಅಂತಿಮ ಹಂತದಲ್ಲಿ ಸಹಸ್ರಾರು ಮುಗ್ಧ ತಮಿಳರನ್ನು ಹತ್ಯೆಗೈಯಲಾಯಿತೆಂಬ ಆರೋಪಗಳ ಹಿನ್ನೆಲೆಯಲ್ಲಿ  ಜಯಲಲಿತಾ ಅವರು ರಾಜಪಕ್ಸೆ ಅವರ ಕಡು ವಿರೋಧಿಯಾಗಿದ್ದಾರೆ.

ತುರ್ತು ಅಭಿವೃದ್ಧಿಗಾಗಿ ರಾಜ್ಯದ ಹಿತಾಸಕ್ತಿಗಳ ರಕ್ಷಣೆ ಕಡೆಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕಾದ ಕೆಲವು ವಿಷಯಗಳತ್ತ ಮನವಿ ಪತ್ರ ಬೆಳಕು ಚೆಲ್ಲಲಿದೆ. ಜೂನ್ 3ರಂದು ಜಯಲಲಿತಾ ಅವರು ಮೋದಿ ಅವರನ್ನು ಅವರ ದಕ್ಷಿಣ ಬ್ಲಾಕ್ ಕಚೇರಿಯಲ್ಲಿ ಭೇಟಿ ಮಾಡುವರು ಎಂದೂ ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT