ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎಂಎಂ ಜತೆ ಮೈತ್ರಿ ಮುರಿದ ಕಾಂಗ್ರೆಸ್‌

Last Updated 31 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬುಡಕಟ್ಟು ಪ್ರಾಬಲ್ಯ­ರುವ ಜಾರ್ಖಂಡ್‌ನಲ್ಲಿ ಆಡಳಿ ತಾರೂಢ ಜೆಎಂಎಂ (ಜಾರ್ಖಂಡ್‌ ಮುಕ್ತಿ ಮೋರ್ಚಾ) ಜತೆಗಿನ 16 ತಿಂಗಳ ಮೈತ್ರಿಯನ್ನು ಕಾಂಗ್ರೆಸ್‌ ಶುಕ್ರವಾರ ಮುರಿದಿದೆ.

ಜಾರ್ಖಂಡ್‌ನಲ್ಲಿ ತಮ್ಮ ಪಕ್ಷವು ಮುಂಬರುವ ವಿಧಾನಸಭಾ ಚುನಾವಣೆ ಯನ್ನು ಬಿಹಾರದ  ಉಪಚುನಾವಣೆಯ ಮಾದರಿಯಲ್ಲಿ ಆರ್‌ಜೆಡಿ ಮತ್ತು ಜೆಡಿಯು ಜತೆಗೆ ಎದುರಿಸಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ತಿಳಿಸಿದರು. ಜಾರ್ಖಂಡ್‌ ವಿಧಾನಸಭೆಗೆ ನವೆಂಬರ್‌ 25ರಿಂದ ಐದು ಹಂತದ ಮತದಾನ ನಿಗದಿಯಾಗಿದೆ.

ಹೇಮಂತ್‌ ಸೊರೇನ್‌ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನೂ ಹಿಂತೆಗೆದುಕೊಳ್ಳಬೇಕೇ ಎಂಬ ಬಗ್ಗೆ ಪಕ್ಷ  ಮುಂದಿನ ದಿನಗಳಲ್ಲಿ ನಿರ್ಧರಿ ಸಲಿದೆ ಎಂದ ಹರಿಪ್ರಸಾದ್‌, ಚುನಾವಣೆಯಲ್ಲಿ ಸಮಾನ ಮನಸ್ಕ ಸಣ್ಣ ಪಕ್ಷಗಳ ನೆರವು ಪಡೆಯುವುದಾಗಿ ತಿಳಿಸಿದರು. ಚುನಾವಣೆಯಲ್ಲಿ 45 ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎಂದು ಜೆಎಂಎಂಗೆ ಕಾಂಗ್ರೆಸ್‌ ಬೇಡಿಕೆ ಇರಿಸಿತ್ತು.

ಉಳಿದ 36 ಕ್ಷೇತ್ರಗಳಲ್ಲಿ ಮಿತ್ರಪಕ್ಷಗಳಾದ ಜೆಡಿಯು ಮತ್ತು ಆರ್‌ಜೆಡಿಗೆ ಜೆಎಂಎಂ ಪಾಲು ನೀಡಬೇಕು ಎಂದೂ ಆಗ್ರಹಿಸಿತ್ತು ಎಂದು ವರದಿಗಳು ಹೇಳಿವೆ.  ಐದು ತಿಂಗಳ ಹಿಂದೆ ನಡೆದ ಲೋಕಸಭಾ ಚುನಾವಣೆ ಯಲ್ಲಿ ಬಿಜೆಪಿ 14ರಲ್ಲಿ 12 ಸ್ಥಾನಗಳಲ್ಲಿ ಜಯ ಗಳಿಸಿ ಶೇ 40.1ರಷ್ಟು ಮತ ಗಳನ್ನು ಬಾಚಿಕೊಂಡಿದ್ದರೆ ಕಾಂಗ್ರೆಸ್‌ ಶೇ 13.3 ಹಾಗೂ ಆಡಳಿತಾರೂಢ ಜೆಎಂಎಂ ಶೇ 12.1 ಮತ ಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT