ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆ–ಕೆ, ಜಾರ್ಖಂಡ್‌: ಮತದಾನಕ್ಕೆ ಕ್ಷಣಗಣನೆ

Last Updated 13 ಡಿಸೆಂಬರ್ 2014, 12:10 IST
ಅಕ್ಷರ ಗಾತ್ರ

ಶ್ರೀನಗರ/ರಾಂಚಿ (ಪಿಟಿಐ): ಜಮ್ಮು ಮತ್ತು ಕಾಶ್ಮೀರ  ಹಾಗೂ ಜಾರ್ಖಂಡ್‌ ವಿಧಾನಸಭೆಗಳ ಚುನಾವಣೆಯ ನಾಲ್ಕನೇ ಹಂತದಲ್ಲಿ ಭಾನುವಾರ ಮತದಾನ ನಡೆಯಲಿದ್ದು, ಕೊನೆಯ ಹಂತದ ಸಿದ್ಧತೆಗಳು ನಡೆಯುತ್ತಿವೆ.

ಕಣಿವೆ ರಾಜ್ಯದಲ್ಲಿ ಶ್ರೀನಗರ, ಅನಂತ್‌ನಾಗ್‌, ಸೋಪಿಯಾನ್‌ ಹಾಗೂ ಸಾಂಬಾ–ನಾಲ್ಕು ಜಿಲ್ಲೆಗಳ 18 ಕ್ಷೇತ್ರಗಳಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಒಟ್ಟು 182 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 1,890 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ರಾಂಚಿ ವರದಿ: ಜಾರ್ಖಂಡ್‌ನಲ್ಲಿ  ನಾಲ್ಕನೇ ಹಂತದಲ್ಲಿ ನಾಲ್ಕು ಜಿಲ್ಲೆಗಳ 15 ಕ್ಷೇತ್ರಗಳಲ್ಲಿ ಶನಿವಾರ ಮತದಾನ ನಡೆಯಲಿದ್ದು 16 ಮಹಿಳೆಯರು ಸೇರಿದಂತೆ 217 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದ್ದಾರೆ.

ಮತದಾನ ನಡೆಯಲಿರುವ ಪ್ರದೇಶಗಳು ನಕ್ಸಲ್‌ ಪೀಡಿತವಾದ್ದರಿಂದ  ಧನ್ಬಾದ ಹಾಗೂ ಬೊಕಾರೊ ಕ್ಷೇತ್ರಗಳನ್ನುಹೊರತು ಪಡಿಸಿ ಉಳಿದೆಡೆ ಮಧ್ಯಾಹ್ನ ಮೂರು ಗಂಟೆಗೆ ಮತದಾನ ಕೊನೆಗೊಳ್ಳಲಿದೆ.  ಧನ್ಬಾದ್‌ ಹಾಗೂ ಬೊಕಾರೊ ಕ್ಷೇತ್ರಗಳಲ್ಲಿ ಎಂದಿನಂತೆ ಸಂಜೆಯ 5 ಗಂಟೆಯ ವರೆಗೂ ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT