ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈನ ಕಾಶಿಯಲ್ಲಿ ಇಂದಿನಿಂದ ನುಡಿಜಾತ್ರೆ

81ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶ್ರವಣಬೆಳಗೊಳ ಸಜ್ಜು
Last Updated 30 ಜನವರಿ 2015, 19:30 IST
ಅಕ್ಷರ ಗಾತ್ರ

ಹಾಸನ: ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ಸಂಜೆ (ಜ.31) ಶ್ರವಣಬೆಳಗೊಳದಲ್ಲಿ ಮುನ್ನುಡಿ ಬರೆಯಲಾಗುತ್ತದೆ. ಸಮ್ಮೇ ಳನಕ್ಕೆ ಪೂರ್ವ­ಭಾವಿಯಾಗಿ, ಶನಿವಾರ ಸಂಜೆ ಸಮ್ಮೇಳನಾಧ್ಯಕ್ಷ ಡಾ.ಸಿದ್ದಲಿಂ ಗಯ್ಯ ಅವರ ಮೆರವಣಿಗೆ ಆಯೋಜಿ ಸಲಾಗಿದೆ.

ಮಠದ ಆವರಣದಲ್ಲಿರುವ ಪ್ರವಾಸಿ ಮಂದಿರದ ಮುಂಭಾಗದಿಂದ ಆರಂ ಭಿಸಿ, ಬೆಟ್ಟದ ಹಿಂಭಾಗದಲ್ಲಿ ನಿರ್ಮಿ ಸಿರುವ ಸಮ್ಮೇಳನದ ಭವ್ಯ ವೇದಿಕೆ ಯವರೆಗೆ ಸುಮಾರು 2.5 ಕಿ.ಮೀ. ದೂರ ಮೆರವಣಿಗೆ ನಡೆಯಲಿದೆ.

ತಳಿರು ತೋರಣಗಳಿಂದ ಅಲಂಕರಿ­ಸಿದ ಎತ್ತಿನ ಗಾಡಿಯಲ್ಲಿ ಸಮ್ಮೇಳ­ನಾಧ್ಯಕ್ಷರ ಮೆರವಣಿಗೆ ನಡೆಸುವುದು ಈ ಬಾರಿಯ ವಿಶೇಷವಾಗಿದೆ. ಅಧ್ಯಕ್ಷರು ಕುಳಿತ ಗಾಡಿಯನ್ನು ಉತ್ತೇ ನಹಳ್ಳಿಯ ಚಂದ್ರಣ್ಣ ಎಂಬುವವರಿಗೆ ಸೇರಿದ ಎತ್ತುಗಳು ಎಳೆಯಲಿವೆ. ಈ ಎತ್ತು­ಗಳನ್ನು ಅವರು ₨ 2.5 ಲಕ್ಷಕ್ಕೆ ಖರೀದಿ­ಸಿದ್ದರು.

81ನೇ ಸಮ್ಮೇಳನವಾಗಿದ್ದರಿಂದ ರಾಜ್ಯದ ವಿವಿಧ ಭಾಗಗಳಿಂದ ಬರುವ 81ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.
ಇತ್ತ ಭಾನುವಾರದಿಂದ (ಫೆ. 1) ಆರಂಭವಾಗಲಿರುವ ಸಾಹಿತ್ಯ ಸಮ್ಮೇಳ­ನಕ್ಕಾಗಿ ನಿರ್ಮಿಸಿರುವ ವೇದಿಕೆಗೆ ಅಂತಿಮ ಸ್ಪರ್ಶ ನೀಡುವ ಕೆಲಸ ನಡೆಯುತ್ತಿದೆ. 40X80 ಅಡಿಯ ಭವ್ಯ ವೇದಿಕೆ, 15 ಸಾವಿರ ಜನ ಕೂರಬಹು ದಾದಂಥ ಸಭಾಂಗಣ ಸಿದ್ಧವಾಗಿದೆ. ದೂಳು ಏಳ­ದಂತೆ ನೆಲಕ್ಕೆ ಹಸಿರು ಹಾಸು ಹಾಕಲಾ­ಗಿದೆ. ಸಭಾಂಗಣದ ಹೊರಭಾಗದಲ್ಲೂ ಟ್ರ್ಯಾಕ್ಟರ್‌ಗಳಲ್ಲಿ ನೀರು ತಂದು ಸುರಿಯ­ಲಾಗುತ್ತಿದೆ.
ಕಲಾವಿದರು, ಕಾರ್ಮಿಕರು ವೇದಿಕೆ ಹಾಗೂ ಸಭಾಂಗಣಕ್ಕೆ ಅಂತಿಮ ಹಂತದ ಸಿಂಗಾರ ಮಾಡುವುದರಲ್ಲಿ ತೊಡಗಿದ್ದಾರೆ.

ಐದೂವರೆ ಅಡಿ ಎತ್ತರದ ಪ್ರಧಾನ ವೇದಿಕೆಗೆ ಬೇಲೂರಿನ ಶಿಲ್ಪ ಕಲೆಯನ್ನು ನೆನಪಿಸುವ ಹಿನ್ನೆಲೆ (ಬ್ಯಾಕ್‌ಡ್ರಾಪ್‌) ಇದೆ. ಎಡಭಾಗದಲ್ಲಿ ಗೊಮ್ಮಟ, ಬಲಭಾಗದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಸಂಸ್ಥಾಪಕ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಆಳೆತ್ತರದ ಕಟೌಟ್‌­ಗಳಿವೆ. ವೇದಿಕೆಯ ಎರಡೂ ಬದಿ ಚಿನ್ನದ ಬಣ್ಣದ ಕಂಬಗಳು, ಅವುಗಳ ಮೇಲೆ ಹೊಯ್ಸಳರ ಲಾಂಛನ ಸ್ಥಾಪಿಸಲಾಗಿದೆ.

ವೇದಿಕೆ ಹಿಂಭಾಗದಲ್ಲಿ ಒಂದು ಕಡೆ ಕನ್ನಡ ಸಾಹಿತ್ಯ ಪರಿಷತ್ತಿನ ಲಾಂಛನ, ಇನ್ನೊಂದು ಭಾಗದಲ್ಲಿ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವದ ಅಂಗ­ವಾಗಿ ರೂಪಿಸಿರುವ ಲಾಂಛನಗಳು ಹಾಗೂ ಮಧ್ಯದಲ್ಲಿ ಸಮ್ಮೇಳನಾಧ್ಯಕ್ಷರ ಭಾವಚಿತ್ರ ಹಾಕುವ ಕೆಲಸ ನಡೆಯು­ತ್ತಿದೆ. ಇಡೀ ವೇದಿಕೆ ಆಕರ್ಷಕವಾಗಿ ಮೂಡಿ ಬಂದಿದೆ. ಮುಂದೆ ‘ಜಯ ಹೇ ಕರ್ನಾಟಕ ಮಾತೆ’ ಎಂಬ ನಾಡ ಗೀತೆಯ ಸಾಲನ್ನು ದೊಡ್ಡ ಅಕ್ಷರಗಳಲ್ಲಿ ಬರೆದಿರು­ವುದು ವೇದಿಕೆಗೆ ಹೊಸ ಸೌಂದರ್ಯ ಹಾಗೂ ಅರ್ಥವನ್ನು ನೀಡಿದೆ.

ಇಡೀ ಶ್ರವಣಬೆಳಗೊಳದಲ್ಲಿ ಎಲ್ಲಿ ನೋಡಿದರೂ ಕನ್ನಡ ಬಾವುಟಗಳು ರಾರಾಜಿಸುತ್ತಿವೆ. ಪ್ರಧಾನ ವೇದಿಕೆಯ ಮುಂಭಾಗದಲ್ಲಿ ಪುಸ್ತಕ ಮಳಿಗೆ, ಅದರ ಪಕ್ಕದಲ್ಲಿ ಐದು ಅಡುಗೆ ಮನೆ ಮತ್ತು ಊಟದ ಸಭಾಂಗ­ಣಗಳೂ ಸಿದ್ಧವಾಗುತ್ತಿವೆ. ಪ್ರಧಾನ ವೇದಿಕೆಯ ಹಿಂಭಾಗದಲ್ಲಿ ಸಕಲ ವ್ಯವಸ್ಥೆಗಳನ್ನು ಹೊಂದಿರುವ ಮಾಧ್ಯಮ ಕೇಂದ್ರವೂ ಸಿದ್ಧವಾಗಿದೆ.

ಸಿದ್ಧತೆ ಪರಿಶೀಲನೆ: ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಶುಕ್ರವಾರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ‘ಕೆಲಸಗಳು ನಾವಂದುಕೊಂಡ ವೇಗದಲ್ಲಿ ನಡೆದಿವೆ. ಇನ್ನೂ ಸಣ್ಣಪುಟ್ಟ ಕೆಲಸಗಳಾಗಬೇಕು. ಶನಿವಾರ ಸಂಜೆ ಯೊಳಗೆ ಎಲ್ಲ ಸಿದ್ಧ ತೆಗಳೂ ಪೂರ್ಣ ಗೊಳ್ಳಲಿವೆ’ ಎಂದು ಅವರು ಸಮಾ ಧಾನ ವ್ಯಕ್ತಪಡಿಸಿದರು.

ಶನಿವಾರ ಸಂಜೆ 4 ಗಂಟೆಗೆ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಜಿಲ್ಲಾಧಿಕಾರಿ ಉಮೇಶ್‌ ಕುಸುಗಲ್‌ ಚಾಲನೆ ನೀಡಲಿದ್ದಾರೆ. ಆ ಮೂಲಕ ದಕ್ಷಿಣದ ಜೈನ ಕಾಶಿಯಲ್ಲಿ ನಡೆಯುವ 81ನೇ ನುಡಿಜಾತ್ರೆಗೆ ಅಧಿಕೃತ ಚಾಲನೆ ಲಭಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT