ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಟ್ರಾ ಟ್ರಕ್ ಖರೀದಿ ಹಗರಣ ತೇಜಿಂದರ್ ಸಿಂಗ್ ಬಂಧನ

Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಟಟ್ರಾ ಟ್ರಕ್‌ಗಳ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಭೂ ಸೇನೆಯ ಆಗಿನ ಮುಖ್ಯಸ್ಥ ಜನ­ರಲ್ ವಿ. ಕೆ. ಸಿಂಗ್ ಅವರಿಗೆ ಲಂಚ ನೀಡಲು ಪ್ರಯತ್ನಿಸಿದ ಆರೋಪ ಎದು­ರಿ­­­ಸುತ್ತಿರುವ  ನಿವೃತ್ತ ಲೆ. ಜ. ತೇಜಿಂ­ದರ್ ಸಿಂಗ್ ಅವರನ್ನು ಪೊಲೀ­ಸರು ಸೋಮವಾರ ಬಂಧಿಸಿದ್ದಾರೆ.

ಜಾಮೀನು ಅರ್ಜಿಯನ್ನು ತಿರಸ್ಕ­ರಿ­ಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾ­­ಧೀಶ ಮಧು ಜೈನ್ ಅವರು, ತೇಜಿಂದರ್ ಅವರನ್ನು ಬಂಧಿಸಿ ಅ.20­ರವ­­ರೆಗೆ ನ್ಯಾಯಾಂಗ ಬಂಧನ­ದಲ್ಲಿಡಲು ಆದೇಶಿಸಿ­ದರು.

ಸಮನ್ಸ್ ಜಾರಿ ಮಾಡಿದ ಹಿನ್ನೆಲೆ­ಯಲ್ಲಿ ತೇಜಿಂದರ್ ಸಿಂಗ್ ನ್ಯಾಯಾ­ಲ­ಯಕ್ಕೆ ಹಾಜರಾಗಿದ್ದರು. ನ್ಯಾಯಾಧೀ­ಶರು ಆದೇಶ ಹೊರಡಿಸಿದ ಕೂಡಲೇ ಅಲ್ಲಿಯೇ ಇದ್ದ ಸಿಬಿಐ ಅಧಿಕಾರಿ ತೇಜಿಂದರ್ ಅವರನ್ನು ವಶಕ್ಕೆ ತೆಗೆದು­ಕೊಂಡು ಅವರನ್ನು ತಿಹಾರ್‌ ಜೈಲಿಗೆ ಕರೆದೊಯ್ದರು.

  2010ರ ಸೆಪ್ಟೆಂಬರ್‌ನಲ್ಲಿ ತೇಜಿಂ­ದರ್ ಸಿಂಗ್ ಅವರು 1,676 ಟಟ್ರಾ ಟ್ರಕ್ ಖರೀದಿಯ ಕಡತವನ್ನು ವಿಲೇ­ವಾರಿ ಮಾಡಲು ಆಗಿನ ಜನರಲ್ ವಿ. ಕೆ. ಸಿಂಗ್ ಅವರಿಗೆ 14 ಕೋಟಿ ರೂಪಾ­ಯಿಗಳ ಲಂಚ ನೀಡಲು ಪ್ರಯ­ತ್ನಿ­ಸಿದ್ದರು ಎಂದು ಸಿಬಿಐ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ.

ತೇಜಿಂದರ್ ಸಿಂಗ್ ಲಂಚ ನೀಡುವ ಪ್ರಸ್ತಾವನೆ ಮಾಡಿದ ಕೂಡಲೇ ಕೆರಳಿದ್ದ ವಿ. ಕೆ. ಸಿಂಗ್ ಅವರು ತೇಜಿಂದರ್ ಅವರನ್ನು ತಮ್ಮ ಕೊಠಡಿಯಿಂದ ಹೊರಗೆ ಕಳು­ಹಿಸಿ ಈ ವಿಚಾರವನ್ನು ಆಗಿನ ರಕ್ಷಣಾ ಸಚಿವ ಆಂಟನಿ ಅವರ ಗಮನಕ್ಕೆ ತಂದಿ­ದ್ದರು ಎಂದು  ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT