ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಯರ್‌ಗೆ ಬೆಂಕಿ, ವ್ಯವಹಾರ ಸಂಪೂರ್ಣ ಸ್ಥಗಿತ

Last Updated 4 ಮಾರ್ಚ್ 2014, 7:00 IST
ಅಕ್ಷರ ಗಾತ್ರ

ಸುರತ್ಕಲ್: ಜಿಲ್ಲಾ ಬಂದ್‌ ಕರೆಗೆ ಸುರತ್ಕಲ್‌­ನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟು ಮುಚ್ಚಲಾಗಿತ್ತು. ವಿರಳ ವಾಹನ ಸಂಚಾರ­ವಿದ್ದು ಬಂದ್  ಯಶಸ್ವಿಯಾಗಿ ನಡೆಯಿತು.

ಮುಂಜಾನೆ ಸುರತ್ಕಲ್ ಮುಖ್ಯ ಪ್ರದೇಶ­ದಲ್ಲಿ ಸೇರಿದ ಪ್ರತಿಭಟನಾಕಾರರು ಫ್ಲೈ ಓವರ್ ಬಳಿ ಟಯರ್ ಹಾಕಿ ಬೆಂಕಿ ಹಚ್ಚಿ ಸಂಚಾರಕ್ಕೆ ತಡೆಯೊ­ಡ್ಡಿ­ದರು. ಲಾರಿ ಮತ್ತಿತರ ವಾಹನ ಸಂಚಾರಕ್ಕೂ ಪ್ರತಿಭಟನಾಕಾರರು ತಡೆಯೊ­ಡ್ಡಿದರು. ಜಂಕ್ಷನ್ ಸಹಿತ ಇನ್ನೂ ಕೆಲವೆಡೆ ಟಯರ್‌ಗೆ ಬೆಂಕಿ ಹಚ್ಚುವ ಯತ್ನ ಮತ್ತು ರಸ್ತೆಗೆ ಕಲ್ಲು ಇಡುವ ಪ್ರಯತ್ನ ನಡೆಯಿತಾದರೂ ಪೊಲೀಸರು ಇದಕ್ಕೆ ಅವಕಾಶ ಮಾಡಿ­ಕೊಡಲಿಲ್ಲ. 

ಮುಂಬೈ ಮತ್ತು ಬೆಂಗಳೂರಿ­ನಿಂದ ರೈಲಿನಲ್ಲಿ ಬಂದು ಸುರತ್ಕಲ್ ರೈಲು ನಿಲ್ದಾಣದಲ್ಲಿ ಇಳಿದ ಪ್ರಯಾಣಿಕರು ಮನೆ ಸೇರಲು ರಿಕ್ಷಾ ಮತ್ತು ಇತರ ವಾಹನ ಸಿಗದೆ ತುಂಬಾ ಪರದಾಟ ನಡೆಸಿದ್ದರು. ಕೆಲವರಂತೂ ಸಾಕಷ್ಟು ಹೊತ್ತು ಬಸ್ ನಿಲ್ದಾಣ­ದಲ್ಲೇ ಲಗೇಜ್ ಹೊತ್ತು ಕಾಯುತ್ತಾ ನಿಂತಿರುವ ದೃಶ್ಯ ಕಾಣಿಸಿತು. ಒಂದೆರಡು ಔಷಧಿ ಅಂಗಡಿ ತೆರೆದಿದ್ದವು. ಸುರತ್ಕಲ್ ಪ್ರದೇಶ ಬಹುತೇಕ ನಿರ್ಜನ­­ವಾಗಿತ್ತು. ಪೊಲೀಸರು ನಿರಂತರ ಗಸ್ತು ತಿರುಗು­ತ್ತಿದ್ದ ಕಾರಣ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.

ಮಾತಿನ ಚಕಮಕಿ: ಬಂದ್‌ಗೆ ಬೆಂಬಲ ನೀಡಿಲ್ಲ ಎನ್ನುವ ಕಾರಣಕ್ಕೆ ಕಾರ್ಪೊರೇಟರ್ ಹಾಗೂ ಹೋಟೆಲ್ ಮಾಲೀಕರೊಬ್ಬರ ನಡುವೆ ಸುರತ್ಕಲ್‌­ನಲ್ಲಿ ಮಾತಿನ ಚಕಮಕಿ ನಡೆಯಿತು.ಮುಂಜಾನೆ ಹೋರಾಟಗಾರರು ಸುರತ್ಕಲ್ ಮುಖ್ಯ ಪೇಟೆಯಲ್ಲಿ ಜಮಾಯಿಸಿ ಟೈರ್ ಸುಟ್ಟು ವಾಹನಗಳಿಗೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದ್ದರು. ಇಲ್ಲಿನ ಅಂಗಡಿ ಮುಂಗಟ್ಟುಗಳು ಸ್ವಯಂ­ಪ್ರೇರಿತವಾಗಿ ಮುಚ್ಚಿದ್ದವು.

ಆದರೆ ಸುರ­ತ್ಕಲ್ ಮುಖ್ಯ ಪೇಟೆ ಬಳಿ ಇರುವ ಸಿಟಿ ಲಂಚ್ ಹೋಮ್ ವ್ಯವಹಾರ ನಡೆಸುತ್ತಿತ್ತು. ಬೆಳಗ್ಗೆ ರೈಲಿನಲ್ಲಿ ಬರುವವರಿಗೆ ಹಾಗೂ ಮುಂಜಾ­ನೆ­ಗೆ ಬೇರೆ ಕಡೆಯಿಂದ ಬರುವವರಿಗೆ ತೊಂದರೆ­ಯಾಗದಿ­ರಲೆಂದು ಹೊಟೇಲ್ ತೆರೆದಿಟ್ಟಿರು­ವುದಾಗಿ ಹೊಟೇಲ್ ಮಾಲೀಕರು ತಿಳಿಸಿದ್ದು ಇದಕ್ಕೆ ಸ್ಥಳೀಯ ಕಾರ್ಪೊರೇಟರ್ ಮತ್ತು ಪ್ರತಿಭಟನಾ­ಕಾರರು ಆಕ್ರೋಶ ಸೂಚಿಸಿದರು.

ಕೂಡಲೇ ಬಂದ್ ನಡೆಸುವಂತೆ ತಿಳಿಸಿದರೂ, ತಿಂಡಿ ಮಾಡಿ­ಟ್ಟಿದ್ದು ಉಳಿದಿದೆ; ಸ್ವಲ್ಪ ಹೊತ್ತಲ್ಲೇ ಬಂದ್ ಮಾಡುವುದಾಗಿ ತಿಳಿಸಿ­ದರೂ, ಪ್ರತಿಭಟನಾ­ಕಾರರು ವಿರೋಧ ವ್ಯಕ್ತ­ಪಡಿಸಿದ ಕಾರಣ ಮಾತಿನ ಚಕಮಕಿ ನಡೆ­ಯಿತು. ಹೋಟೆಲ್‌ ಮಾಲೀಕ, ಪ್ರತಿಭಟನಾ­ನಿರತರು ಕಾಂಗ್ರೆಸ್‌ನವರೇ ಆದುದ­ರಿಂದ ಮುಖಂ­ಡರು ಪರಿಸ್ಥಿತಿಯನ್ನು ಶಾಂತಗೊಳಿ­ಸಿ­ದರು. ಕೊನೆಗೆ ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದು ಹೋಟೆಲ್‌ ಬಂದ್ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT