ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಮುಖ್ಯಸ್ಥ ರುಸ್ಸಿ ಮೋದಿ ನಿಧನ

Last Updated 17 ಮೇ 2014, 19:30 IST
ಅಕ್ಷರ ಗಾತ್ರ

ಕೋಲ್ಕತ್ತ(ಪಿಟಿಐ): ಟಾಟಾ ಐರನ್‌ ಆಂಡ್‌ ಸ್ಟೀಲ್‌ ಕಂಪೆನಿ (ಟಿಸ್ಕೊ)ಯ ಮಾಜಿ ಅಧ್ಯಕ್ಷ ರುಸ್ಸಿ ಮೋದಿ ಶುಕ್ರವಾರ ರಾತ್ರಿ ದಕ್ಷಿಣ ಕೋಲ್ಕತ್ತದ ಅಲಿಪೊರ್‌­ದಲ್ಲಿನ ತಮ್ಮ ಮನೆಯಲ್ಲಿ ನಿಧನರಾ­ಗಿ­ದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

1984ರಿಂದ 1993ರವರೆಗೆ ಟಿಸ್ಕೊದ ಅಧ್ಯಕ್ಷರಾಗಿ ಕಾರ್ಯನಿರ್ವಹಿ­ಸಿದ್ದ 96 ವರ್ಷದ ರುಸ್ಸಿ, ಏರ್‌­ಇಂಡಿಯಾ ಮತ್ತು ಹಿಂದಿನ ಇಂಡಿಯನ್‌ ಏರ್‌­ಲೈನ್ಸ್‌ನ ಜಂಟಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಮೋದಿ 1918 ಜನವರಿ 17ರಂದು ಮುಂಬೈಯಲ್ಲಿ ಜನಿಸಿದರು. ಟಾಟಾ ಗ್ರೂಪ್‌ನ ಸದಸ್ಯರಾಗಿ ವಿವಿಧ ಹುದ್ದೆ­ಗಳಲ್ಲಿ ಕಾರ್ಯನಿರ್ವಹಿಸಿದ್ದ ಇವರು ‘ಸ್ಟೀಲ್‌ ಮನ್‌’ ಎಂದೇ ಹೆಸರಾಗಿದ್ದರು. 1993ರಲ್ಲಿ ಏರ್‌ಲೈನ್ಸ್‌ನ ಮುಖ್ಯಸ್ಥ­ರಾಗಿ ನೇಮಕಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT