ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಡಿಪಿಗೆ ವೈಎಸ್‌ಆರ್‌ ಕಾಂಗ್ರೆಸ್‌ ಸಂಸದರ ವಲಸೆ

Last Updated 25 ಮೇ 2014, 19:30 IST
ಅಕ್ಷರ ಗಾತ್ರ

ಹೈದರಾಬಾದ್‌: ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ­ಯಾಗಿ ನಂದ್ಯಾಲದಿಂದ ಆಯ್ಕೆ­ಯಾದ ಸಂಸದ ಎಸ್‌.ಪಿ.­ವೈ. ರೆಡ್ಡಿ ಭಾನುವಾರ ಟಿಡಿಪಿ ಸೇರಿದ್ದಾರೆ. ರೆಡ್ಡಿ ಅವರ ಜತೆಯಲ್ಲಿ ಕರ್ನೂಲು ಸಂಸದೆ ಬುಟ್ಟಾ ರೇಣುಕಾ ಅವರ ಪತಿ ನೀಲಕಂಠಮ್‌ ಸಹ ಟಿಡಿಪಿಗೆ ಸೇರ್ಪಡೆ­ಯಾಗಿದ್ದಾರೆ. ಹೀಗಾಗಿ ರೇಣುಕಾ ಅವರು ಟಿಡಿಪಿ ಸೇರುವುದು ಬಹುತೇಕ ಖಚಿತವಾಗಿದೆ.

‘ಆಂಧ್ರಪ್ರದೇಶದಲ್ಲಿ ಟಿಡಿಪಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿವೆ. ನನ್ನ ಕ್ಷೇತ್ರಕ್ಕೆ ಉತ್ತಮ ಸೇವೆ ಮಾಡುವ ಉದ್ದೇಶ­ದಿಂದ ನಾನು ಟಿಡಿಪಿ ಸೇರಿದ್ದೇನೆ’ ಎಂದು ರೆಡ್ಡಿ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಟಿಡಿಪಿ ಮುಖ್ಯಸ್ಥ ಎನ್‌. ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಿ ಟಿಡಿಪಿ ಸೇರುವ ಇಚ್ಛೆ ವ್ಯಕ್ತಪಡಿಸಿದ ರೆಡ್ಡಿ, ‘ನನ್ನ ಈ ನಿರ್ಧಾರ­ವನ್ನು ವೈಎಸ್‌ಆರ್‌ ಕಾಂಗ್ರೆಸ್‌ ನಾಯಕರಿಗೆ ತಿಳಿಸಿಲ್ಲ’ ಎಂದು ಹೇಳಿದ್ದಾರೆ.

ರಾಯಲಸೀಮೆಯ ಕಾಂಗ್ರೆಸ್‌ ನಾಯಕ ಟಿ.ಜಿ. ವೆಂಕಟೇಶ ಕಾಂಗ್ರೆಸ್‌­ನಿಂದ ಟಿಡಿಪಿಗೆ ಹಾರಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ವಿಚಿತ್ರವೆಂದರೆ, ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ರಾಜನಾಥ್‌ ಸಿಂಗ್‌ ಅವ­ರನ್ನು ಭೇಟಿಯಾಗಲು ವೈಎಸ್‌ಆರ್‌ ಕಾಂಗ್ರೆಸ್ ಮುಖ್ಯಸ್ಥ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ನೇತೃತ್ವ­ದಲ್ಲಿ ನವದೆಹಲಿಗೆ ತೆರಳಿದ್ದ ಸಂಸದರ ನಿಯೋಗದಲ್ಲಿ ಎಸ್‌.ಪಿ.ವೈ. ರೆಡ್ಡಿ ಕೂಡ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT