ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೈಪಿಂಗ್‌ ಕಲಿಕೆ ಹೇಗೆ?

ತಂತ್ರೋಪನಿಷತ್ತು
Last Updated 20 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಕಂಪ್ಯೂಟರ್‌ನಲ್ಲಿ ಕೆಲಸದ ವೇಗ ಹೆಚ್ಚಿಸಿಕೊಳ್ಳಲು ಸಹಾಯ ಮಾಡುವುದು ಟೈಪಿಂಗ್. ಕೀಬೋರ್ಡ್್ ಅನ್ನು ಸೂಕ್ತವಾಗಿ ಬಳಸಿದರೆ ಕೆಲಸದ ವೇಗ ಹೆಚ್ಚುತ್ತದೆ. ನಮ್ಮಲ್ಲಿ ಇಂದಿಗೂ ಬಹಳಷ್ಟು ಜನರು ಟೈಪ್ ಮಾಡುವಾಗ ಅಕ್ಷರಗಳನ್ನು ಹುಡುಕಾಡುತ್ತೇವೆ. ಇದು ಕೆಲಸದ ವೇಗ ತಗ್ಗಲು ಕಾರಣವಾಗಬಹುದು.

ಟೈಪಿಂಗ್ ಎಂದಾಕ್ಷಣ ಕಂಪ್ಯೂಟರ್ ಟುಟೋರಿಯಲ್‌ಗಳಿಗೆ ಹೋಗುತ್ತೇವೆ. ಆದರೆ ಕೋರ್ಸ್ ಮುಗಿಸಿದಾಕ್ಷಣ ವೇಗವಾಗಿ ಟೈಪ್ ಮಾಡಲಾಗದು. ಇದಕ್ಕೆ ನಿರಂತರ ಪ್ರಯತ್ನ ಬೇಕು. ಕಂಪ್ಯೂಟರ್ ಟೈಪಿಂಗ್್ ಕೂಡ ಒಂದು ಕಲೆ. ಆದರೆ ಕಲಿಯಲಾಗದು ಎಂದೇನಿಲ್ಲ. ಟೈಪಿಂಗ್ ಕಲಿಸಲೆಂದೇ ಸಾಕಷ್ಟು ಉಚಿತ ಮತ್ತು ಪಾವತಿ ತಂತ್ರಾಂಶಗಳಿವೆ. ಅವುಗಳ ಮೂಲಕ ಟೈಪಿಂಗ್್ ವೇಗ ಹೆಚ್ಚಿಸಿಕೊಂಡು ಕೆಲಸವನ್ನು ಮತ್ತಷ್ಟು ಸುಲಭ ಮಾಡಿಕೊಳ್ಳಬಹುದು.

ಬೇಸಿಕ್ ಕಂಪ್ಯೂಟರ್ ಕಲಿಕೆ ವೇಳೆ ಟುಟೋರಿಯಲ್‌ಗಳಲ್ಲಿ ಹೇಳಿಕೊಡುವ ಎ,ಎಸ್,ಡಿ,ಎಫ್‌ ಮತ್ತು ;, ಎಲ್, ಕೆ, ಜೆ  ವಿಧಾನದಲ್ಲೇ ಈ ತಂತ್ರಾಂಶಗಳನ್ನು ಬಳಸಿ ಟೈಪಿಂಗ್ ಕಲಿಯಬಹುದು.

ಕೀಬೋರ್ಡ್ ಸೂಕ್ತ ಬಳಕೆ, ಟೈಪಿಸುವ ಕ್ರಮ ಮತ್ತು ತಪ್ಪಿಲ್ಲದೆ ವೇಗವಾಗಿ ಟೈಪಿಸುವುದು ಹೇಗೆ ಎಂಬುದನ್ನು ಕಲಿಯಲು ಸಾಕಷ್ಟು ಉಚಿತ ತಂತ್ರಾಂಶಗಳಿವೆ. ಕೆಲವು ಉಚಿತ ಮತ್ತು ಟ್ರಯಲ್‌ ತಂತ್ರಾಂಶಗಳು ಮತ್ತು ಅವುಗಳ ಡೌನ್‌ಲೋಡ್‌ ಲಿಂಕ್‌ ಇಲ್ಲಿದೆ.

ಟೈಪಿಂಗ್ ಮಾಸ್ಟರ್ ಪ್ರೊ : http://download.cnet.com/TypingMaster-Pro-Typing-Tutor/3000-2051_4-10004060.html

ಕೀಬೋರ್ಡ್‌ ಮಾಸ್ಟರ್‌ ಟೈಪಿಂಗ್‌ : https://2ac7-downloads.phpnuke.org/en/download-version/-b-m-y-z-b
ಟೈಪ್‌ ಫಾಸ್ಟರ್‌: http://sourceforge.net/projects/typefaster/

ಮಕ್ಕಳು ಮತ್ತು ದೊಡ್ಡವರಿಗೆ ಅನುಕೂಲವಾಗುವಂತೆ ತಂತ್ರಾಂಶಗಳನ್ನು ರೂಪಿಸಲಾಗಿದೆ. ಮನೆ, ಶಾಲೆಗಳಲ್ಲೂ ಇವುಗಳನ್ನು ಕಲಿಕೆಗೆ ಬಳಸಬಹುದು. ಟೈಪಿಂಗ್ ಆರಂಭಿಸುವುದಕ್ಕೂ ಮುನ್ನ, ಯಾವ ಅಕ್ಷರಗಳಿಗೆ ಯಾವ ಬೆರಳು ಬಳಸಬೇಕು, ಕೀಬೋರ್ಡ್್ ಮೇಲೆ ಹೇಗೆ ಬೆರಳಾಡಿಸಬೇಕು ಎನ್ನುವುದನ್ನು ಚಿತ್ರದ ಮೂಲಕ ತಿಳಿದುಕೊಳ್ಳಬಹುದು.

ತಂತ್ರಾಂಶದಲ್ಲಿ ಇರುವ ಪಾಠಗಳನ್ನು ಅನುಸರಿಸಿ ಟೈಪಿಂಗ್ ಕಲಿಯಬಹುದು. ಇಲ್ಲವೇ, ನಮ್ಮಿಷ್ಟದ ಪಾಠ, ಸಮಯ ನಿಗದಿ ಮತ್ತು ವೇಗ ಹೊಂದಿಸಿಕೊಳ್ಳಲು ಅವಕಾಶವಿದೆ. ನಿಮಿಷಕ್ಕೆ ಎಷ್ಟು ಪದ ಅಥವಾ ಅಕ್ಷರ ಟೈಪಿಸಿದ್ದೇವೆ? ಸರಿ-ತಪ್ಪು ಎಷ್ಟು ಎಂದು ನಿಖರವಾಗಿ ತಿಳಿಸುತ್ತದೆ. ಹೀಗೆ ಪ್ರತಿ ಪಾಠ/ಪ್ಯಾರಾ ಟೈಪ್ ಮಾಡಿದಾಗಲೂ ಟೈಪಿಂಗ್ ಮತ್ತಷ್ಟು ಸುಧಾರಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಬಹುದು.

ಅಕ್ಷರಗಳನ್ನು ಟೈಪ್ ಮಾಡುವುದರಿಂದ ಆರಂಭವಾಗಿ, ಪದ, ಪ್ಯಾರಾ, ಪುಟ ಹೀಗೆ ತಪ್ಪಿಲ್ಲದೆ, ಯಾವ ವೇಗದಲ್ಲಿ ಟೈಪಿಸುತ್ತೇವೆ ಎನ್ನುವುದರ ಮೇಲೆ ನಮ್ಮ ಕಲಿಕೆ ಮುಂದುವರಿಸಬಹುದು. ಪ್ರತಿ ಬಾರಿ ಒಂದು ಪಾಠ ಪೂರೈಸಿದಾಗ ಅದರ ಅಂಕಗಳನ್ನೂ ಪಡೆಯುವ ಮೂಲಕ ಕಲಿಕೆಗೆ ಉತ್ತೇಜನ ದೊರೆಯುತ್ತದೆ. ಬೇಗನೆ ಕಲಿಯಬೇಕು ಎಂದಾದರೆ, ಇಬ್ಬರ ನಡುವೆ ಸ್ಪರ್ಧೆಯ ರೂಪದಲ್ಲೂ ತಂತ್ರಾಂಶ ಬಳಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT