ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಾನ್ಸ್‌ಫಾರ್ಮರ್‌ ತೆರವಿಗೆ ಸೂಚನೆ

ಬಿಬಿಎಂಪಿಗೆ ಗಡುವು ನೀಡಿದ ಹೈಕೋರ್ಟ್‌
Last Updated 24 ಜುಲೈ 2014, 20:09 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ-­ಯಲ್ಲಿನ ಪಾದಚಾರಿ ಮಾರ್ಗಗಳಲ್ಲಿರುವ ಎಲ್ಲ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಘಟಕಗಳನ್ನು ಒಂದು ವಾರದ ಅವಧಿ­ಯಲ್ಲಿ ತೆರವುಗೊಳಿಸುವಂತೆ ಹೈಕೋರ್ಟ್‌ ಬಿಬಿಎಂಪಿಗೆ ಸೂಚಿಸಿದೆ.

ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರಿದ್ದ ಪೀಠವು ಗುರುವಾರ ಈ ಸಂಬಂಧ ಸಲ್ಲಿಸಲಾಗಿದ್ದ ರಿಟ್‌ ಅರ್ಜಿಯ ವಿಚಾರಣೆ ನಡೆಸಿತು.

ಪಾದಚಾರಿ ಮಾರ್ಗಗಳಲ್ಲಿ ಹಾಕಲಾಗಿರುವ ಟ್ರಾನ್ಸ್‌ಫಾರ್ಮರ್‌ಗಳ ಸಂಪೂರ್ಣ ವಿವರವನ್ನು ಸೋಮ­ವಾರ (ಜುಲೈ 28) ಒದಗಿಸುವಂತೆಯೂ ಪೀಠವು ಸೂಚಿಸಿತು.

2013ರ ಮೇ ತಿಂಗಳ 18ರಂದು ಚರ್ಚ್ ಸ್ಟ್ರೀಟ್‌ನಲ್ಲಿ ಮನೋಜ್‌ ಪಾಟೀಲ್‌ ಎಂಬುವವರು ವಿದ್ಯುತ್‌ ಸಂಪರ್ಕದಿಂದ ಮೃತಪಟ್ಟಿದ್ದರು. ಈ ಕಾರಣದಿಂದ ಇವರ ಪತ್ನಿ ಅಶ್ವಿನಿ ಮನೋಜ್‌ ಪಾಟೀಲ್‌ ₨ 29 ಕೋಟಿ ಪರಿಹಾರ ಕೇಳಿ ಬೆಸ್ಕಾಂ ವಿರುದ್ಧ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT