ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಾಫಿಕ್ ಸಮಸ್ಯೆ ನಿವಾರಿಸಿ

ಕುಂದು ಕೊರತೆ
Last Updated 23 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಮಹದೇವಪುರ ವಿಧಾನಸಭಾ ಕ್ಷೇತ್ರದ ಕೆಲವೇ ಕೆಲವು ಪ್ರಭಾವಿ ವಾರ್ಡ್‌ಗಳಲ್ಲಿ ಕಾಡುಗುಡಿಯು ಕೂಡ ಒಂದು. ಎಲ್ಲಾ ವಾರ್ಡ್‌ಗಳ ರೀತಿ ಇಲ್ಲಿಯೂ  ಸಮಸ್ಯೆಗಳಿವೆ. ಅವುಗಳಲ್ಲಿ ಪ್ರಮುಖ ಸಮಸ್ಯೆ ಎಂದರೆ ಚಿಕ್ಕ ರೈಲ್ವೇ ಗೇಟಿನಿಂದಾಗಿ ಸೃಷ್ಟಿಯಾಗುವ ಟ್ರಾಫಿಕ್ ಸಮಸ್ಯೆ.

ಊರಿನ ಮಧ್ಯಭಾಗದಲ್ಲಿರುವ ಈ ಚಿಕ್ಕ ಗೇಟು ಊರಿನ ಎರಡು ಭಾಗಗಳಿಗೆ ಸೇತುವೆಯಂತಿದೆ. ಕಾಡುಗುಡಿಯಲ್ಲಿ ಪ್ರತಿದಿನವೂ ಸುಮಾರು 50ರಿಂದ  100 ರೈಲುಗಳು ಸಂಚರಿಸುತ್ತವೆ. ಆಗ ಗೇಟನ್ನು ಮುಚ್ಚಲಾಗುತ್ತದೆ. ಪ್ರತಿದಿನವೂ ಸುಮಾರು 20ರಿಂದ 30 ಬಾರಿ ಗೇಟನ್ನು ಮುಚ್ಚಲಾಗುತ್ತದೆ. ಅಂದರೆ, ಪ್ರತಿ ಗಂಟೆಗೆ 15–20 ಬಾರಿ ಗೇಟನ್ನು ಮುಚ್ಚಲಾಗುತ್ತದೆ. ಆ ಸಮಯದಲ್ಲಿ ಸಂಚಾರ ದಟ್ಟಣೆ ಹೆಚ್ಚಳಗೊಂಡು ಜನರು ಗೇಟ್‌ ದಾಟಲು ಹರಸಾಹಸ ಪಡಬೇಕಾಗುತ್ತದೆ. ಅದರಲ್ಲೂ ಗುರುವಾರ ಸಂತೆ ಇರುವ ಕಾರಣದಿಂದಾಗಿ  ಸೃಷ್ಟಿಯಾಗುವ ಸಂಚಾರ ದಟ್ಟಣೆಯನ್ನು ದಾಟಲು ಸುಮಾರು 1 ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತದೆ.

ಅಲ್ಲದೇ ಪ್ರತಿದಿನ ಮಧ್ನಾಹ್ನ 3 ಗಂಟೆಯು ಶಾಲಾ–ಕಾಲೇಜುಗಳು ಬಿಡುವ ಸಮಯ ಆಗಿದ್ದು, ಆಗ ಗೇಟನ್ನು ದಾಟಲು ಸುಮಾರು 45 ನಿಮಿಷ ಬೇಕಾಗುತ್ತದೆ. ಅಲ್ಲದೇ ರಸ್ತೆಯು ಚಿಕ್ಕದಾಗಿರುವುದು ಮತ್ತು ಬೈಕ್‌ಗಳ ಸಂಚಾರ ಇರುವುದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಆದಷ್ಟು ಬೇಗ ಶಾಸಕರು, ಅಧಿಕಾರಿಗಳು ಮತ್ತು ಕಾರ್ಪೋರೇಟರ್‌ಗಳು ಈ ಬಗ್ಗೆ ಗಮನಹರಿಸಿ, ಇಲ್ಲಿ ಅಂಡರ್‌ ಪಾಸ್‌ ಅಥವಾ ಫ್ಲೈಓವರ್ ನಿರ್ಮಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT