ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್‌ನಲ್ಲೂ ಇನ್ನು ಶಾಪಿಂಗ್ ಅವಕಾಶ

Last Updated 16 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಪ್ರಸಿದ್ಧ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಟ್ವಿಟ್ಟರ್‌ ಮೊಬೈಲ್‌ ಮೂಲಕ ಅನುಕೂಲಕರವಾಗಿ ಮತ್ತು ಬಹಳ ಸುಲಭವಾಗಿ ಶಾಪಿಂಗ್‌ ಮಾಡಲು ಅನುವಾಗುವಂತೆ ಬೈ (buy) ಬಟನ್ ಸೇವೆ ನೀಡುವ ಪ್ರಯತ್ನದಲ್ಲಿದೆ. ಟ್ವಿಟ್ಟರ್‌ನಲ್ಲಿ ಕಾಣಿಸಿಕೊಳ್ಳುವ ವಿವಿಧ ಕಂಪೆನಿಗಳ ಮಾರ್ಕೆಟಿಂಗ್‌ ಪೋಸ್ಟ್‌ಗಳಲ್ಲಿರುವ ಬೈ ಬಟನ್‌ ಬಳಸಿಕೊಂಡು ಮೊಬೈಲ್‌ ಫೋನ್ ಬಳಕೆದಾರರು ಸುಲಭವಾಗಿ ಆನ್‌ಲೈನ್‌ ಶಾಪಿಂಗ್‌ ಮಾಡಬಹುದಾಗಿದೆ.

ಮೊಬೈಲ್‌ನಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ದಿನೇ ದಿನೇ  ಹೆಚ್ಚುತ್ತಲೇ ಇದೆ. ಅಂತೆಯೇ  ಆನ್‌ಲೈನ್‌ ಶಾಪಿಂಗ್‌ ಮಾಡುವವರ ಸಂಖ್ಯೆ ಕೂಡ ಏರಿಕೆ ಆಗುತ್ತಿದೆ.

ಆನ್‌ಲೈನ್‌ ಖರೀದಿಗೆ ಶಾಪಿಂಗ್‌ ವೆಬ್‌ಸೈಟ್‌ಗಳಿಗೆ ಹಲವು ಮಾಹಿತಿಗಳನ್ನು ನೀಡಬೇಕಾಗಿರುವುದು ಸಹಜ. ಮೊಬೈಲ್‌ ಫೋನ್ ಮೂಲಕ ಆನ್‌ಲೈನ್‌ ಶಾಪಿಂಗ್‌ ಮಾಡಬೇಕೆಂದರೆ ಮೊಬೈಲ್‌ನಲ್ಲಿ ಹೆಸರು, ವಿಳಾಸ, ಹಣ ಪಾವತಿ ಮುಂತಾದ ವಿವಿಧ ಮಾಹಿತಿಗಳನ್ನು  ನೀಡಬೇಕು. ಇದು ಸ್ವಲ್ಪ ಕಷ್ಟವೆ. ಕಂಪ್ಯೂಟರ್‌ನಲ್ಲಿ ಸುಲಭವಾಗಿ ಆನ್‌ಲೈನ್‌ ಶಾಪಿಂಗ್‌ ಮಾಡುವಂತೆ ಮೊಬೈಲ್‌್ ಮೂಲಕ ಮಾಡಲು ಸಾಧ್ಯವಿಲ್ಲ.

ಇದೀಗ ಟ್ವಿಟ್ಟರ್‌, ಕಂಪ್ಯೂಟರ್‌ನಲ್ಲಿ ಆನ್‌ಲೈನ್‌ ಶಾಪಿಂಗ್‌ ಮಾಡುವಷ್ಟೇ ಸುಲಭದಲ್ಲಿ ಮೊಬೈಲ್‌ ಫೋನ್‌ ಮೂಲಕವೂ ಆನ್‌ಲೈನ್‌ ಶಾಪಿಂಗ್‌ ನಡೆಸಲು ಅನುಕೂಲವಾಗುವಂತೆ  ‘ಬೈ ಬಟನ್’ ಒದಗಿಸುತ್ತಿದೆ. ಇದು ಆನ್‌ಲೈನ್‌ ಇಚ್ಛಿಸುವ ಮೊಬೈಲ್‌ ಬಳಕೆದಾರರಿಗೆ ಸಹಕಾರಿಯಾಗಲಿದೆ.

ಈ ಟ್ವಿಟರ್‌ನ ‘ಬೈ’ ವಿಧಾನದಲ್ಲಿ ಕೆಲವೇ ಬಟನ್‌ಗಳನ್ನು ಬೆರಳ ತುದಿಯಿಂದ ಸ್ಪರ್ಷಿಸುವ ಮೂಲಕ ಶಾಪಿಂಗ್‌ ಮಾಡಬಹುದು. ಟ್ವಿಟ್ಟರ್‌ನಲ್ಲಿನ ಮಾರ್ಕೆಟಿಂಗ್‌ ಪೋಸ್ಟ್‌ನಲ್ಲಿರುವ ‘ಬೈ’  ಬಟನ್‌ ಒತ್ತಿದರೆ ವಸ್ತುವಿನ ಮಾಹಿತಿ, ನಂತರ ವಸ್ತುವನ್ನು ಎಲ್ಲಿಗೆ ಕಳುಹಿಸಿ­ಕೊಡಬೇಕಿದೆಯೇ ಅಲ್ಲಿನ ವಿಳಾಸ ಮತ್ತು ಹಣ ಪಾವತಿ ಬಗ್ಗೆ ಮಾಹಿತಿ ನೀಡಿದರೆ ನಂತರ ಖರೀದಿ ಪ್ರಕ್ರಿಯೆ ದೃಢೀಕರಣಗೊಳ್ಳುತ್ತದೆ. ನಂತರ ಮಾರಾಟಗಾರನಿಗೆ ನಿಮ್ಮ ಖರೀದಿಯ ಮಾಹಿತಿ ತಲುಪಿ ಅವರು ವಸ್ತುವನ್ನು ನಿಮ್ಮಲ್ಲಿಗೆ ಮುಟ್ಟಿಸುತ್ತಾರೆ’ ಎನ್ನುತ್ತದೆ ಟ್ವಿಟ್ಟರ್‌ ಪ್ರೊಡಕ್ಟ್ ಗ್ರೂಪ್‌.

ಗ್ರಾಹಕರು ಮೊದಲು ಅಗತ್ಯ ಮಾಹಿತಿಗಳ ಜತೆಗೆ ರಿಜಿಸ್ಟರ್‌ ಮಾಡಿಸಿಕೊಂಡರೆ ಮತ್ತೆ ಮತ್ತೆ ವೈಯಕ್ತಿಕ ಮಾಹಿತಿ ನೀಡಬೇಕಾದ, ಪುನಃ ನೋಂದಾಯಿಸಿಕೊಳ್ಳಬೇಕಾದ ಅವಶ್ಯಕತೆ ಇರುವುದಿಲ್ಲ. ಗ್ರಾಹಕರಿಗೆ ಈ ಸೌಲಭ್ಯ ಬೇಡವೆಂದರೆ ತಮ್ಮ ಅಕೌಂಟ್‌ ಕ್ಲೋಸ್ ಮಾಡುವ ಅವಕಾಶವೂ ಮುಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT