ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್‌ ಜಗತ್ತಿನಲ್ಲಿ ಅಮಿತಾಭ್‌ ದರ್ಬಾರ್‌

ಪಂಚರಂಗಿ
Last Updated 31 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಮನಸೆಳೆಯುವ ನಟನೆಯ ಮೂಲಕ ಬಾಲಿವುಡ್‌ ಗಲ್ಲಿಯಲ್ಲಿ ಜನಪ್ರಿಯತೆಯನ್ನು ಉಳಿಸಿಕೊಂಡಿರುವ ನಟ ಅಮಿತಾಭ್ ಬಚ್ಚನ್‌ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲೂ ಅತ್ಯಂತ ಜನಪ್ರಿಯ ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ.

ತಮ್ಮ ಬದುಕಿನ ಆನಂದದ ಕ್ಷಣ, ಅನುಭವಗಳ ಬುತ್ತಿಯನ್ನು ಟ್ವಿಟರ್‌ ಮೂಲಕ ಆಗಾಗ್ಗೆ ಬಿಚ್ಚಿಡುತ್ತಿರುವ ಅಮಿತಾಭ್‌ ಇದೀಗ 1.4 ಕೋಟಿ ಅಭಿಮಾನಿಗಳನ್ನು ಹೊಂದುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಇದು ಬಾಲಿವುಡ್‌ ಅರಮನೆಯಲ್ಲಿ ಇನ್ನೂ ಬಿಗ್‌ ಬಿ ದರ್ಬಾರ್‌ ನಡೆಯುತ್ತಿದೆ ಎನ್ನುವುದಕ್ಕೆ ಇದೊಂದು ನಿದರ್ಶನ. ಇತ್ತೀಚೆಗಷ್ಟೇ 1.2 ಕೋಟಿ ಅಭಿಮಾನಿಗಳನ್ನು ಹೊಂದಿದ್ದ ಶಾರುಖ್‌ ಖಾನ್‌, ಅಮೀರ್‌ ಖಾನ್‌ (1.19 ಕೋಟಿ), ಸಲ್ಮಾನ್‌ ಖಾನ್‌ (1.12ಕೋಟಿ), ಪ್ರಿಯಾಂಕಾ ಚೋಪ್ರಾ  (93 ಲಕ್ಷ) ಮುಂತಾದವರಿಗಿಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವುದು 72 ವರ್ಷದ ಅಮಿತಾಭ್‌ ಅವರಿಗೆ ಹೆಚ್ಚಿನ ಖುಷಿ ನೀಡಿದೆ.

‘ಟ್ವಿಟರ್‌ನಲ್ಲಿ 1.4 ಕೋಟಿ, ಫೇಸ್‌ಬುಕ್‌ನಲ್ಲಿ 2 ಕೋಟಿ, ಬ್ಲಾಗ್‌ನಲ್ಲಿ 30 ಲಕ್ಷ ಅಭಿಮಾನಿಗಳನ್ನು ಸಂಪಾದಿಸಿದ್ದೇನೆ. ತುಂಬಾ ಖುಷಿಯಾಗಿದ್ದೇನೆ’  ಎಂದು ತಮ್ಮ ಸಂತಸವನ್ನು ಟ್ವೀಟ್‌ ಮಾಡಿದ್ದಾರೆ ಬಚ್ಚನ್‌. ವೈಯಕ್ತಿಕ ಹಾಗೂ ವ್ಯಾವಹಾರಿಕ ಬದುಕಿನ ಆಗುಹೋಗುಗಳ ಬಗ್ಗೆ ಟ್ವೀಟ್‌ ಮಾಡುತ್ತಾ ತಮ್ಮ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ಅಮಿತಾಭ್‌ ಇದುವರೆಗೆ 39 ಸಾವಿರದ ಏಳುನೂರು ಸಂದೇಶಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT