ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠಾಣಾಧಿಕಾರಿ ಸೇರಿ ಆರು ಪೊಲೀಸರ ಅಮಾನತು

ಉತ್ತರಪ್ರದೇಶದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
Last Updated 7 ಜೂನ್ 2014, 19:30 IST
ಅಕ್ಷರ ಗಾತ್ರ

ಮುಜಫ್ಫರ್‌ನಗರ (ಪಿಟಿಐ): ಮಹಿಳೆ ಮೇಲೆ ಐವರು ಸಾಮೂಹಿಕ ಅತ್ಯಾ­ಚಾರ ನಡೆಸಿರುವ ಘಟನೆ ಉತ್ತರ ಪ್ರದೇ­ಶದ ಮುಜಫ್ಫರ್‌ನಗರ ಜಿಲ್ಲೆಯ ದುಲ್ಹೆರಾ ಗ್ರಾಮದಲ್ಲಿ ನಡೆದಿದೆ.

ಬುಧವಾರ (ಜೂನ್‌ 4ರಂದು) ನಡೆದ ಈ ಘಟನೆಯಿಂದ ಆಕ್ರೋಶ­ಗೊಂಡ ಗ್ರಾಮಸ್ಥರು ಸ್ಥಳೀಯ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ಪ್ರತಿ­ಭಟನೆ ನಡೆಸಿದರು. ನಿರ್ಲಕ್ಷ್ಯ ತೋರಿದ ಆರೋ­ಪದ ಮೇಲೆ ಸರ್ಕಲ್‌ ಪೊಲೀಸ್‌ ಇನ್‌­ಸ್ಪೆಕ್ಟರ್‌ರನ್ನು ಬೇರೆಡೆ ವರ್ಗ ಮಾಡ­ಲಾಗಿದೆ.

ಠಾಣಾಧಿಕಾರಿ ಸೇರಿ­ದಂತೆ ಆರು ಸಿಬ್ಬಂದಿಯನ್ನು ಅಮಾ­ನತು ಮಾಡಲಾಗಿದೆ.

ಮಹಿಳೆಯು ದುಲ್ಹೆರಾದಿಂದ ಶಹ­ಪುರ ಗ್ರಾಮಕ್ಕೆ ತೆರಳುತ್ತಿದ್ದಾಗ ಈ ಘಟನೆ ಜರುಗಿದೆ.

ಮಹಿಳೆಯನ್ನು ಐವರು ಅಪಹರಿಸಿ, ಸ್ಮಶಾನಭೂಮಿ­ಯಲ್ಲಿ ಸಾಮೂ­ಹಿಕ ಅತ್ಯಾಚಾರ ಎಸಗಿ­ದ್ದಾರೆ. ಆಕೆಯನ್ನು ಗಮನಿಸಿದ ಸ್ಥಳೀ­­ಯರು ಸಮೀಪದ ಆಸ್ಪತ್ರೆಗೆ ಸೇರಿಸಿ­ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬುಧಾನಾ ಸರ್ಕಲ್‌ ಇನ್‌ಸ್ಪೆಕ್ಟರ್‌ ಶೈಲೇಂದರ್‌ ಲಾಲ್‌ ಅವರನ್ನು ವರ್ಗ ಮಾಡಲಾಗಿದೆ. ಠಾಣಾಧಿ­ಕಾರಿ ಹಿಂದ್‌ವೀರ್‌ ದಿಂಗಾ, ಪೊಲೀಸ್‌ ಚೌಕಿಯ ಟಿ.ಆರ್‌. ರಿವಾಲಾ, ಹೆಡ್‌ ಕಾನ್‌ಸ್ಟೆಬಲ್‌ ಅಜಬ್‌ ಸಿಂಗ್‌ ಮತ್ತು ಪೇದೆಗಳಾದ ಸರ್ವೇಶ್‌ ಕುಮಾರ್‌, ಜಿತೇಂದರ್‌ ಕುಮಾರ್‌ ಮತ್ತು ರಾಜೇಂದರ್‌ ಅವ­ರನ್ನು ಅಮಾನತು ಮಾಡಲಾಗಿದೆ ಎಂದು ಹಿರಿಯ ಪೊಲೀಸ್‌ ಅಧೀಕ್ಷಕ ಎಚ್‌.ಎನ್‌. ಸಿಂಗ್‌  ಶನಿವಾರ ಇಲ್ಲಿ ತಿಳಿಸಿದರು. ಐದು ಜನ ಅಪರಿಚಿತ ಅತ್ಯಾ­ಚಾರಿ­­ಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಬಾವಿಯಲ್ಲಿ ಶವ: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ 15 ವರ್ಷದ ಬಾಲಕಿ ಶವ ಕುರ್ಥಾಲ್‌ ಗ್ರಾಮದ ಬಾವಿಯಲ್ಲಿ ಶುಕ್ರವಾರ ಪತ್ತೆ­ಯಾಗಿದೆ.

ಹೊಲದಲ್ಲಿ ಕೆಲಸ ಮಾಡುತ್ತಿದ್ದ ತಂದೆಗೆ ಮಧ್ಯಾಹ್ನ ಬುತ್ತಿ ತೆಗೆದು­ಕೊಂಡು ಹೋಗಿದ್ದ ಬಾಲಕಿ ಮತ್ತೆ ಮರಳಿ ಮನೆಗೆ ಬಂದಿರಲಿಲ್ಲ. ಬಾಲ­ಕಿಯ ಮೇಲೆ ಅತ್ಯಾಚಾರ ನಡೆಸಿ ಬಳಿಕ ಆಕೆಯ ಕೊಲೆ ಮಾಡಿರ­ಬ­ಹುದು ಎಂದು ಶಂಕಿಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT