ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎಂಕೆ: ರಾಜೀನಾಮೆ ಹಿಂಪಡೆದ ಸ್ಟಾಲಿನ್‌

‘ನಾಟಕ’ವೆಂದ ಅಳಗಿರಿಗೆ ಕರುಣಾನಿಧಿ ತಿರುಗೇಟು
Last Updated 18 ಮೇ 2014, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಲೋಕಸಭಾ ಚುನಾ­ವಣೆ­ಯಲ್ಲಿ ಡಿಎಂಕೆ ಕಳಪೆ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಪಕ್ಷದ ಖಜಾಂಚಿ ಎಂ.ಕೆ. ಸ್ಟಾಲಿನ್‌, ಕೆಲವೇ ಗಂಟೆ­ಗಳಲ್ಲಿ ವರಿಷ್ಠರ ಸಲಹೆ­ಯಂತೆ ನಿರ್ಧಾರ ಬದ­ಲಿ­ಸಿದ ಘಟನೆ ಭಾನುವಾರ ನಡೆದಿದೆ.

ಆದರೆ ಸ್ಟಾಲಿನ್‌ ರಾಜೀನಾಮೆ ಹಿಂಪ­­ಡೆ­­ದಿರುವುದನ್ನು ಅವರ ಹಿರಿ­ಯಣ್ಣ ಮತ್ತು ಪಕ್ಷದ ಉಚ್ಚಾಟಿತ ನಾಯಕ ಎಂ.ಕೆ. ಅಳಗಿರಿ, ಇದೊಂದು ‘ನಾಟಕ’ ಎಂದು ಟೀಕಿಸಿದ್ದಾರೆ. ತಮ್ಮ ಕಿರಿಯ ಪುತ್ರನ ರಾಜೀನಾಮೆ ನಂತರ ಪಕ್ಷದ ಹಿರಿಯರ ಜತೆ ಚರ್ಚಿ­ಸಿದ ಡಿಎಂಕೆ ಮುಖ್ಯಸ್ಥ ಮತ್ತು ತಮಿಳು­ನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾ­ನಿಧಿ, ನಿರ್ಧಾರ ಬದ­ಲಿ­­ಸಲು ಸ್ಟಾಲಿ­ನ್‌ ಅವರಿಗೆ ಸೂಚಿಸಿ­ದರು. ಇದ­ರ ಜತೆ ಪಕ್ಷದ ವಿವಿಧ ಮುಖಂಡರು ಮತ್ತು ಕಾರ್ಯ­ಕರ್ತರು ಸ್ಟಾಲಿನ್‌ ಮನೆಗೆ ಧಾವಿಸಿ ರಾಜೀ­­ನಾಮೆ ಹಿಂಪಡೆ­ಯಲು ಒತ್ತಡ ಹಾಕಿ­ದರು ಎಂದು ಮೂಲ­ಗಳು ತಿಳಿಸಿವೆ.

ಈ ಬೆಳವಣಿಗೆ ಕುರಿತು ಸುದ್ದಿಗಾರರ ಜೊತೆ ಮಾತ­ನಾಡಿದ ಪಕ್ಷದ ಹಿರಿಯ ಮುಖಂಡ ದುರೈ ಮುರುಗನ್‌, ಡಿಎಂಕೆ ಯುವ ಘಟಕದ ಮುಖ್ಯಸ್ಥರೂ ಆದ ಸ್ಟಾಲಿನ್‌, ಹಿರಿಯರ ಸಲಹೆಯಂತೆ ರಾಜೀ­­ನಾಮೆ ವಾಪಸ್‌ ಪಡೆದಿರುವು­ದಾಗಿ ತಿಳಿಸಿದರು.

ಈ ಮಧ್ಯೆ, ‘ಸ್ಟಾಲಿನ್‌ ರಾಜೀನಾಮೆ ತಂದೆಯ ಅಣತಿಯಂತೆ ನಡೆದ ನಾಟಕ’ ಎಂದಿ­ರುವ ಅಳಗಿರಿ ಟೀಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಕರುಣಾನಿಧಿ, ‘ಆತ (ಅಳ­­­ಗಿರಿ) ಪಕ್ಷದಲ್ಲಿ­ದ್ದಾ­ಗಲೂ ಡಿಎಂಕೆ ಎರಡು ಬಾರಿ ಚುನಾ­ವಣೆ­ಯಲ್ಲಿ ಸೋತಿದೆ’ ಎಂದು ಹೇಳಿದ್ದಾರೆ. ‘ಅಳಗಿರಿ ಬಗ್ಗೆ ಹೆಚ್ಚೇನೂ ಹೇಳಲು ಬಯಸು­ವು­ದಿಲ್ಲ. ಆತನನ್ನು ಬಹಳ ಹಿಂದೆಯೇ ನಾನು ಮತ್ತು ಪಕ್ಷದವರು ಮರೆತಿ­ದ್ದೇವೆೆ’ ಎಂದೂ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT