ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸ್ಕಸ್‌ ಥ್ರೋ: ವಿಕಾಸ್ ಗೌಡ ಬೆಳ್ಳಿ ಸಾಧನೆ

Last Updated 30 ಸೆಪ್ಟೆಂಬರ್ 2014, 11:55 IST
ಅಕ್ಷರ ಗಾತ್ರ

ಇಂಚೆನ್‌ (ಐಎಎನ್ಎಸ್‌): ಕರ್ನಾಟಕದ ಅಥ್ಲೀಟ್‌ ವಿಕಾಸ್‌ ಗೌಡ ಅವರು ದಕ್ಷಿಣ ಕೊರಿಯದ ಇಂಚೆನ್‌ನಲ್ಲಿ ನಡೆಯುತ್ತಿರುವ 17ನೇ ಏಷ್ಯನ್‌ ಕ್ರೀಡಾಕೂಟದ ಪುರುಷರ ಡಿಸ್ಕಸ್‌ ಥ್ರೋ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರು.

ಕ್ರೀಡಾಕೂಟದ ಪ್ರಮುಖ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ
ಡಿಸ್ಕ್‌ ಅನ್ನು ವಿಕಾಸ್‌ 62.58 ಮೀಟರ್‌ ದೂರ ಎಸೆದು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು.

65.11ಮೀಟರ್‌ ದೂರ ಎಸೆದ ಇರಾನಿನ್ ಎಹ್ಸಾನ್‌ ಹದಾದಿ ಅವರು ಚಿನ್ನ ಗೆದ್ದರೆ ಕತಾರ್‌ನ  ಮೊಹಮ್ಮದರ್‌ ಅಹ್ಮದ್‌ ದಹೀಬ್‌ ಅವರು 61.25 ಮೀಟರ್ ಎಸೆದು ಕಂಚಿನ ಪದಕ ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT