ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೀಸೆಲ್‌ ಎಂಜಿನ್‌ ಸ್ಫೋಟ: ಇಬ್ಬರಿಗೆ ಗಾಯ

Last Updated 24 ಏಪ್ರಿಲ್ 2014, 20:24 IST
ಅಕ್ಷರ ಗಾತ್ರ

ಹೊಸಕೋಟೆ: ಅಕ್ರಮ ಮರಳುಗಾರಿಕೆ ಅಡ್ಡೆಯ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದ ವಸ್ತುಗಳನ್ನು ನಾಶಪಡಿಸುತ್ತಿದ್ದ ವೇಳೆ ಡೀಸೆಲ್‌ ಎಂಜಿನ್‌ ಸ್ಫೋಟಿಸಿ ಉಪ ತಹಶೀಲ್ದಾರ್‌ ಸೇರಿದಂತೆ ಇಬ್ಬರಿಗೆ ಸುಟ್ಟಗಾಯಗಳಾದ ಘಟನೆ ಇಲ್ಲಿಗೆ ಸಮೀಪದ ಕೊರಟಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ಜಡಿಗೇನಹಳ್ಳಿಯ ಉಪ ತಹಶೀಲ್ದಾರ್ ಕೃಷ್ಣಪ್ಪ ಹಾಗೂ ಗಂಗಾಧರ್ ಗಾಯಗೊಂಡವರು. ಗಂಗಾಧರ್ ಅವರ ಕೈ ಹಾಗೂ ಎದೆಯ ಭಾಗಕ್ಕೆ ಗಾಯವಾಗಿದ್ದು, ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಲಿಗೆ ಗಾಯವಾಗಿರುವ ಕೃಷ್ಣಪ್ಪ ಅವರು ಸಮೀಪದ ಎಂವಿಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಂದಾಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಗುರುವಾರ ಜಂಟಿಯಾಗಿ ತಾಲ್ಲೂಕಿನ ಅಗಸರಹಳ್ಳಿ, ಕೊರಟಿ ಗ್ರಾಮದ ಕೆರೆ ಅಂಗಳದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿದರು. ಆಗ ಮರಳು ತುಂಬುತ್ತಿದ್ದವರು ವಾಹನಗಳನ್ನು ಅಲ್ಲೇ ಬಿಟ್ಟು ಪರಾರಿಯಾದರು. ಮರಳು ದಂದೆಗೆ ಉಪಯೋಗಿಸುತ್ತಿದ್ದ ಪರಿಕರಗಳನ್ನು ಸಿಬ್ಬಂದಿ ನಾಶ ಮಾಡುತ್ತಿದ್ದಾಗ ಡೀಸೆಲ್ ಎಂಜಿನ್ ಒಂದು ಆಕಸ್ಮಿಕವಾಗಿ ಸ್ಫೋಟಿಸಿದೆ. ಈ ವೇಳೆ ಪಕ್ಕದಲ್ಲೇ ಇದ್ದ ಕೃಷ್ಣಪ್ಪ ಹಾಗು ಸಹಾಯಕ್ಕೆ ಬಂದಿದ್ದ ಗಂಗಾಧರ್ ಅವರಿಗೆ ಸುಟ್ಟಗಾಯಗಳಾಗಿವೆ.

ಮರಳು ತುಂಬಿದ್ದ ಐದು ಲಾರಿ, ಒಂದು ಜೆಸಿಬಿ ಯಂತ್ರ ಮತ್ತು ಟ್ರ್ಯಾಕ್ಟರ್ ವಶಪಡಿಸಿಕೊಳ್ಳಲಾಗಿದೆ. ನಂದಗುಡಿ ಹೋಬಳಿ ಉಪ ತಹಶೀಲ್ದಾರ್ ಗೌತಮ್, ಜಡಿಗೇನಹಳ್ಳಿ ಹೋಬಳಿ ಉಪ ತಹಶೀಲ್ದಾರ್ ಕೃಷ್ಣಪ್ಪ, ಪಿಎಸ್ಐ ಪ್ರಕಾಶ್ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ನಂದಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT