ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೇಟಾ ಟಾರಿಫ್‌ ತರತಮಕ್ಕೆ ಟ್ರಾಯ್‌ ಕಡಿವಾಣ

ಇಂಟರ್‌ನೆಟ್‌ ಬಳಕೆಗೆ ಭಿನ್ನಬೆಲೆ ಬೇಡವೆಂದು ಟ್ರಾಯ್‌ ಆದೇಶ
Last Updated 8 ಫೆಬ್ರುವರಿ 2016, 11:28 IST
ಅಕ್ಷರ ಗಾತ್ರ

ನವದೆಹಲಿ (ಏಜೆನ್ಸೀಸ್‌): ವಿಷಯಾಧಾರಿತ ಇಂಟರ್‌ನೆಟ್‌ ಬಳಕೆಗೆ ಅನುಗುಣವಾಗಿ ಡೇಟಾ ಟಾರಿಫ್‌ ಬದಲಿಸುವುದನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಸೋಮವಾರ ನಿಷೇಧಿಸಿದೆ.

‘ವಿಷಯಾಧಾರಿತ ಸೇವೆಗೆ ಅನುಗುಣವಾಗಿ ಡೇಟಾ ಸೇವೆಯ ಬೆಲೆಯಲ್ಲಿ ತಾರತಮ್ಯ ಮಾಡುವಂತಿಲ್ಲ’ ಎಂದು ಟ್ರಾಯ್‌ ಆದೇಶಿಸಿದೆ.

‘ಡೇಟಾ ಟಾರಿಫ್‌ನಲ್ಲಿ ತಾರತಮ್ಯ ಸೃಷ್ಟಿಸುವಂಥ ಯಾವುದೇ ಬದಲಾವಣೆಗಳನ್ನು ಸೇವಾ ಕಂಪೆನಿಗಳು ಮಾಡುವಂತಿಲ್ಲ’ ಎಂದು ಟ್ರಾಯ್‌ ತನ್ನ ಆದೇಶದಲ್ಲಿ ತಿಳಿಸಿದೆ.

‘ಟಾರಿಫ್‌ ತಾರತಮ್ಯ ಉಂಟುಮಾಡುವಂಥ ಯಾವುದೇ ರೀತಿಯ ಒಪ್ಪಂದಗಳನ್ನು ಸೇವಾ ಕಂಪೆನಿಗಳು ಯಾರೊಂದಿಗೂ ಮಾಡಿಕೊಳ್ಳುವಂತಿಲ್ಲ’ ಎಂದು ಟ್ರಾಯ್‌ ಹೇಳಿದೆ.

ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಯಾವುದೇ ಕಾರಣಕ್ಕೂ ಡೇಟಾ ಟಾರಿಫ್‌ನಲ್ಲಿ ಬದಲಾವಣೆ ಮಾಡುವಂತಿಲ್ಲ ಎಂದು ಟ್ರಾಯ್‌ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT