ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೋಂಗರಗಾಂವ: 37 ಜನರಿಗೆ ಕಾಲರಾ

ಗ್ರಾಮದಲ್ಲಿ ಶುದ್ಧ ನೀರು ಸಿಗದೇ ತತ್ತರಿಸಿದ ಗ್ರಾಮಸ್ಥರು: ವೈದ್ಯಾಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ
Last Updated 27 ಜುಲೈ 2016, 9:15 IST
ಅಕ್ಷರ ಗಾತ್ರ

ಕಮಲಾಪುರ: ಸಮೀಪದ ಡೋಂಗರ ಗಾಂವನಲ್ಲಿ ಹರಡಿರುವ ಕಾಲರಾದಿಂದ ಸಾರ್ವಜನಿಕರು ತತ್ತರಿಸಿದ್ದಾರೆ. ಮಕ್ಕಳು ಸೇರಿದಂತೆ ಬಹುತೇಕ ಗ್ರಾಮಸ್ಥರು ಅಸ್ವಸ್ಥಗೊಂಡಿದ್ದಾರೆ.

ಈಗಾಗಲೇ 37 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಿನದಿಂದ ದಿನಕ್ಕೆ ರೋಗ ಉಲ್ಬಣಗೊಳ್ಳುತ್ತಿದೆ. ಪ್ರತಿದಿನ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ.

ಜುಲೈ 22 ರಿಂದ ಕಾಯಿಲೆ ಕಾಣಿಸಿ­ಕೊಂಡಿದೆ. ಈವರೆಗೆ 13 ಮಂದಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು,  ಉಳಿದ 24 ಪೈಕಿ  18 ಮಂದಿ ಕೊಂಚ  ಗುಣ ಮುಖ­ರಾದ್ದಾರೆ. 6 ಜನರಿಗೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಚಿಕಿತ್ಸೆ ನೀಡ­ಲಾಗುತ್ತಿದೆ. ಮಂಗಳವಾರ 10 ಜನ ವಾಂತಿ ಬೇಧಿ ಸಮಸ್ಯೆಯಿಂದ ಆಸ್ಪತ್ರೆಗೆ ಬಂದಿದ್ದು, ಚಿಕಿತ್ಸೆ ಕೊಡಲಾಗಿದೆ ಎಂದು  ವೈದ್ಯಾಧಿಕಾರಿ ರೇಖಾ ‘ಪ್ರಜಾವಾಣಿ’ಗೆ ತಿಳಿಸಿದರು.


ಸಂಜೆವರೆಗೆ ಹೊಲದಲ್ಲಿ ದುಡಿದು ಬರುತ್ತೇವೆ. ಬೆಳಗಾಗುವುದರಲ್ಲೇ ವಾಂತಿ ಬೇಧಿ ಕಾಣಿಸಿಕೊಂಡು ಕೈಕಾಲು ನೋ­ವು, ಜ್ವರ ಇಡೀ ಕುಟುಂಬಕ್ಕೆ ಬರುತ್ತದೆ ಎಂದು ಗ್ರಾಮಸ್ಥರು ತಿಳಿಸಿದರು.

ಕಲುಷಿತ ನೀರು ಸೇವನೆ: ಕಲುಷಿತ ನೀರು ಸೇವನೆಯಿಂದ ರೋಗ ಹರಡುತ್ತಿದೆ. ಗ್ರಾಮ­ದೊಳಗಿನ ಊರ ಬಾವಿ ಹಾಗೂ ಸರ್ಕಾರಿ ಬಾವಿ ನೀರು ಕಲುಷಿತ­ಗೊಂಡಿವೆ. ಅದೆ ನೀರು ಸಾರ್ವಜನಿಕರು ಕುಡಿಯುತ್ತಿದ್ದಾರೆ. ಇದರಿಂದ ರೋಗ ಹರಡುತ್ತಿದೆ. ಈ ನೀರು ಬಿಟ್ಟು ಗ್ರಾಮ ದಲ್ಲಿ ಬೇರೆ ನೀರಿಲ್ಲ.

ಹೀಗಾಗಿ ಈ ನೀರು ಕುಡಿಯುವುದು ಅನಿವಾರ್ಯ ಆಗಿತ್ತು. ಎರಡು ದಿನಗಳಿಂದ ಖಾಸಗಿ ವ್ಯಕ್ತಿಯೊಬ್ಬರ ಕೊಳವೆಬಾವಿ ಮತ್ತು  ಊರ ಹೊರಗಿನ ಗೌಡರ ಬಾವಿಯಿಂದ ನೀರು ತಂದು ಕುಡಿಯುತ್ತಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದರು.

ಗ್ರಾಮ ಪಂಚಾಯಿತಿಯವರು ಡಂಗೂರ ಸಾರಿದ್ದಾರೆ. ಗ್ರಾಮದ ಕೆಲ ಕಡೆಿ ಬ್ಲಿಚಿಂಗ್‌ ಪೌಡರ್‌ ಸಿಂಪಡಿಸಿದ್ದಾರೆ. ಆದರೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿಲ್ಲ. ಜನ ಪ್ರತಿನಿಧಿಗಳು ಆರೋಗ್ಯ ಅಧಿಕಾರಿಗಳು ಕೇವಲ ಭೇಟಿ ನೀಡುತ್ತಿದ್ದಾರೆ ಹೊರತೆ ರೋಗ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ  ಎಂದು ಅವರು ತಿಳಿಸಿದರು.

***
ಮನೆ ಮನೆಗೆ ತೆರಳಿ ಮಾತ್ರೆ ಓಆರ್‌ಎಸ್‌ ಹಂಚಲಾಗಿದೆ ರೋಗಿಗಳ ಮನೆಯಿಂದ ನೀರಿನ ಮಾದರಿ ಸಂಗ್ರಹಿಸಿ ಕಳುಹಿಸಲಾಗಿದೆ. ಜನರಿಗೆ ಅರಿವು ಮೂಡಿಸಲಾಗುವುದು.
-ರೇಖಾ, ವೈದ್ಯಾಧಿಕಾರಿ


ಶುದ್ಧ ನೀರು ಪೂರೈಕೆ: ಜಿ.ಪಂ ಅಧ್ಯಕ್ಷೆ  ಸೂಚನೆ
ಕಲಬುರ್ಗಿ: ವಾಂತಿ–ಭೇದಿ ಪ್ರಕರಣ ವರದಿಯಾಗಿರುವ ತಾಲ್ಲೂಕಿನ ಡೊಂಗರಗಾವ ಗ್ರಾಮಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಾಲಾಜಿ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

ಶುಕ್ರವಾರದಿಂದ ಈವರೆಗೆ 39 ಪ್ರಕರಣಗಳು ವರದಿಯಾಗಿದ್ದು, ಅವರೆ ಲ್ಲರಿಗೂ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡ ಲಾಗಿದೆ. ಅವರಲ್ಲಿ 13 ಜನರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯಾಧಿಕಾರಿ ಡಾ.ರೇಖಾ ತಿಳಿಸಿದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರು ವವರ ಯೋಗಕ್ಷೇಮ ವಿಚಾರಿಸಿದ ಅವರು, ವೈದ್ಯರು ಹಾಗೂ ಸಿಬ್ಬಂದಿ ಕೇಂದ್ರಸ್ಥಾನದಲ್ಲಿದ್ದು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದರು.

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಮುಲ್ಲಾಮಾರಿ ನದಿ ಹತ್ತಿರದ ಬಾವಿ ಹಾಗೂ ಕಾಳಮಂದರಗಿಯಲ್ಲಿರುವ ಬೋರ್‌ವೆಲ್‌ನಿಂದ ಕುಡಿವ ನೀರನ್ನು ಪೈಪ್‌ಲೈನ್‌ ಮೂಲಕ ಗ್ರಾಮದಲ್ಲಿರುವ ಬಾವಿಗೆ ತಂದು ಅಲ್ಲಿಂದ ನೀರು ಪೂರೈಸಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ ಗೂಳೇದ ಹೇಳಿದರು.

ಹಳ್ಳದ ಪಕ್ಕದಲ್ಲಿರುವ ಬಾವಿ ಯಿಂದ ನೀರನ್ನು ತಂದು ಊರಲ್ಲಿ ರುವ ಬಾವಿಗೆ ಹಾಕಿರುವುದ ರಿಂದ ವಾಂತಿ–ಭೇದಿ ಪ್ರಕರಣಗಳು ಸಂಭವಿಸಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವರಾಜ ಸಜ್ಜನಶೆಟ್ಟಿ ತಿಳಿಸಿದರು.

ಮಳೆಗಾಲ ಪ್ರಾರಂಭವಾಗಿರುವು ದರಿಂದ ಸ್ವಚ್ಛತೆ ಕಾಪಾಡಬೇಕು. ಕರಳುಬೇನೆ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಬಾವಿಗಳ ನೀರು ಕಲುಷಿತವಾಗದಂತೆ ನೋಡಿಕೊಳ್ಳಬೇಕು ಎಂದು ಸುವರ್ಣಾ ಸಲಹೆ ನೀಡಿದರು.

ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಕಾಮಗಾರಿ ವೀಕ್ಷಿಸಿದ ಅವರು, ಆಸ್ಪತ್ರೆಯನ್ನು ಕೂಡಲೇ ಹೊಸ ಕಟ್ಟಡಕ್ಕೆ ಸ್ಥಳಾಂತರಿ ಸುವಂತೆ ಸೂಚಿಸಿದರು. ಡೊಂಗರ ಗಾವ ಗ್ರಾಮ ಪಂಚಾಯಿತಿ ಸದಸ್ಯ ರಾದ ಶಿವರಾಯ ಮೂಕಿ, ಜಗದೀಶ ಚಂದ್ರ ಪಾಟೀಲ, ರೇವಣಸಿದ್ದಯ್ಯ ಹಿರೇಮಠ, ಮಲ್ಲಿಕಾರ್ಜುನ ವಡ್ಡಣಕೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT