ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತತ್ವಪದ: ವಿವಾದಕ್ಕೆ ಆಸ್ಪದ ನೀಡದಿರಲಿ

Last Updated 18 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಕರ್ನಾಟಕ ಸರ್ಕಾರ ಹಮ್ಮಿಕೊಂಡಿರುವ ಸಮಗ್ರ ತತ್ವಪದ ಸಂಗ್ರಹ ಯೋಜನೆ ಸ್ವಾಗತಾ­ರ್ಹ­ವಾದುದು. ಆದರೆ ಈ ತತ್ವಪದ ಸಂಗ್ರಹ­ದಲ್ಲಿ ಅನೇಕ ತೊಡಕು­ಗಳಿವೆ. ಕಡಕೋಳ ಮಡಿ­ವಾಳಪ್ಪ  ಮತ್ತು ಶಿಶುನಾಳ ಶರೀಫರ ತತ್ವಪದ­ಗಳಲ್ಲಿ ಬಹಳಷ್ಟು ಸಾಮ್ಯತೆಗಳು ಕಂಡು­ಬಂದಿವೆ.

ಕನ್ನಡ ಸಾಹಿತ್ಯ ಪರಿಷತ್ತಿನ ಕಲಬುರ್ಗಿ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ವೀರಭದ್ರ ಸಿಂಪಿ ಅವರು ಶರೀಫರ ಹೆಸರಿನಲ್ಲಿ­ರುವ ಕೆಲವು ತತ್ವ­ಪದಗಳು ಮಡಿ­ವಾಳಪ್ಪನವರ ತತ್ವಪದಗಳಾಗಿವೆ ಎಂದು ಅಭಿಪ್ರಾಯ­ಪಟ್ಟಿ­ದ್ದಾರೆ. ಈ ಕುರಿತು ಚರ್ಚೆ ಕೂಡ ನಡೆದಿದೆ.

ಇಂತಹ ಸಂದರ್ಭದಲ್ಲಿ ತತ್ವಪದಗಳ ಸಂಗ್ರಹ ಕಾರ್ಯ ಬಹಳ ಎಚ್ಚರಿಕೆ­ಯಿಂದ ನಡೆ­ಯ­ಬೇಕಿದೆ. ಈ ಕೆಲಸ ಅಧ್ಯಯನ ಬೇಡುತ್ತದೆ. ತತ್ವಪದಕಾರರ ಕಾರ್ಯ­ಕ್ಷೇತ್ರ­ವಾಗಿದ್ದ ಪ್ರದೇಶ­ಗಳ ವಿದ್ವಾಂಸರು, ಸಂಶೋಧ­ಕರು, ಸಾಹಿತಿ­ಗಳು, ವಿಚಾರವಂತರೊಂದಿಗೆ ಈ ಯೋಜ­­ನೆಯ  ಸಂಪಾದಕ ಮಂಡಳಿ ಚರ್ಚಿಸಿ, ಚಿಂತನ ಮಂಥನ ನಡೆ­ಸ­ಬೇಕು. ಯಾವುದೇ ರೀತಿಯ ವಿವಾದ­ಗಳಿಗೆ ಆಸ್ಪದ ನೀಡದಂತೆ ಸಂಗ್ರಹ ಕಾರ್ಯ ನೆರವೇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT