ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪಿತಸ್ಥರ ವಿರುದ್ಧ ಕ್ರಮ– ಕಿಮ್ಮ ನೆ

ಹೆಚ್ಚುವರಿ ಶಿಕ್ಷಕರ ವರ್ಗಾವಣೆ
Last Updated 24 ಜುಲೈ 2014, 20:09 IST
ಅಕ್ಷರ ಗಾತ್ರ

ಬೆಂಗಳೂರು: ಹೆಚ್ಚುವರಿ ಶಿಕ್ಷಕರ ವರ್ಗಾವಣೆಯಲ್ಲಿ ಅಕ್ರಮ ಎಸಗುವ ಅಧಿಕಾರಿಗಳ ವಿರುದ್ಧ ನಿರ್ದಾ ಕ್ಷಿಣ್ಯ ಕ್ರಮ ಕೈಗೊಳ್ಳಲಾಗು­ವುದು ಎಂದು ಪ್ರಾಥ ಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಗುರುವಾರ ವಿಧಾನಪರಿಷತ್ತಿಗೆ ತಿಳಿಸಿದರು.

ಹೆಚ್ಚುವರಿ ಶಿಕ್ಷಕರನ್ನು ಬೇಕಾಬಿಟ್ಟಿ­ವರ್ಗಾವಣೆ ಮಾಡುವುದರಿಂದ ಆಗುತ್ತಿರುವ ಸಮಸ್ಯೆಗಳನ್ನು ನಿಯಮ 330ರ ಅಡಿಯಲ್ಲಿ ಜೆಡಿಎಸ್‌ನ ಬಸವ­ರಾಜ ಹೊರಟ್ಟಿ ಅವರು ಪ್ರಸ್ತಾಪಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ‘ಮೂರೂವರೆ ವರ್ಷಗಳಿಂದ ಶಿಕ್ಷಕರ ಮರು ನಿಯೋಜನೆ ಪ್ರಕ್ರಿಯೆ ನಡೆಸಿಲ್ಲ. ಇದರಿಂದ ತೊಂದರೆ­ಯಾಗು­ತ್ತಿದೆ. ಈ ವಿಚಾರದಲ್ಲಿ ಕಠಿಣ ನಿರ್ಧಾರ ಕೈಗೊಳ್ಳು­ವವರೆಗೆ ಇಲಾಖೆ ಸರಿಯಾಗಿ ಕಾರ್ಯ­ನಿರ್ವಹಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

‘2009ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಪ್ಪಿ ಕೊಂಡಿದ್ದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಈ ಬಗ್ಗೆ ನಾವೆಲ್ಲರೂ ಕುಳಿತು ಕೂಲ ಂಕಷ­ವಾಗಿ ಚರ್ಚಿಸಬೇಕಾಗಿದೆ’ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಅವರು, ಇದೊಂದು ಸಂಕೀರ್ಣ ವಿಷಯ­ವಾಗಿದ್ದು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪ್ರತ್ಯೇಕ ವೇದಿಕೆಯಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆಯಬೇಕು. ಅಧಿವೇಶನ ಮುಗಿದ ಕೂಡಲೇ ಈ ಬಗ್ಗೆ  ಪರಿಷತ್ತಿನ ಕೆಲವು ಸದಸ್ಯರ ಜೊತೆ ಮಾತುಕತೆ ನಡೆಸುವಂತೆ ಸಚಿವರಿಗೆ ಸೂಚಿಸಿದರು.

ಸಭಾಪತಿಗಳ ಸೂಚನೆಗೆ ಸಮ್ಮತಿಸಿದ ಕಿಮ್ಮನೆ ರತ್ನಾಕರ, ಆಗಸ್ಟ್‌ 1ರಂದು ಪರಿಷತ್ತಿನ ಕೆಲವು ಹಿರಿಯ ಸದಸ್ಯರು ಹಾಗೂ ಶಿಕ್ಷಕರ ಕ್ಷೇತ್ರಗಳಿಂದ ಆಯ್ಕೆ­ಯಾದ ಸದಸ್ಯರನ್ನು ಕರೆದು ಸಭೆ ನಡೆಸುವುದಾಗಿ ತಿಳಿಸಿದರು. ‘ಸದ್ಯ ನಿಯಮಗಳಿಗೆ ಅನುಸಾರವಾಗಿ ಹೆಚ್ಚುವರಿ ಶಿಕ್ಷಕರನ್ನು ವರ್ಗಾವಣೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆಯುತ್ತಿ ರುವುದನ್ನು ಯಾರಾದರೂ ನನ್ನ ಗಮನಕ್ಕೆ ತಂದರೆ, ಅಕ್ರಮದಲ್ಲಿ ತೊಡಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದರು.

ಇದಕ್ಕೂ ಮುನ್ನ ಈ ವಿಷಯವನ್ನು ಪ್ರಸ್ತಾಪಿಸಿದ ಬಸವರಾಜ ಹೊರಟ್ಟಿ, ‘ಶಿಕ್ಷಣ ಸಚಿವರ ಆದೇಶವನ್ನು ಅಧಿಕಾರಿ­ಗಳು ಪಾಲನೆ ಮಾಡುತ್ತಿಲ್ಲ. ತಮಗೆ ತೋಚಿದಂತೆ ಕೆಲಸ ಮಾಡುತ್ತಾರೆ. ಕನ್ನಡದ ಬಗ್ಗೆ ಅಭಿಮಾನವೇ ಇಲ್ಲ. ಕನ್ನಡ ಶಾಲೆಗಳನ್ನು ಮುಚ್ಚಿಸುವುದೇ ಅವರ ಗುರಿಯಾಗಿದೆ’ ಎಂದು ಆರೋಪಿ­ಸಿ­­ದರು.

ಇಲಾಖೆಯ ಕೆಲವು ಅಧಿಕಾರಿ­ಗಳು ತೋರುವ ದರ್ಪವನ್ನು ಉದಾಹರಣೆ ಸಹಿತ ವಿವರಿಸಿದ ಹೊರಟ್ಟಿ, ‘ಸಭೆ­ಯೊಂದ­ರಲ್ಲಿ ಹೆಚ್ಚುವರಿ ಶಿಕ್ಷಕರನ್ನು ಬೇಕಾಬಿಟ್ಟಿಯಾಗಿ ವರ್ಗಾವಣೆ ಮಾಡಬೇಡಿ ಎಂದು ಸಲಹೆ ನೀಡಿದ್ದಕ್ಕೆ ಇಲಾಖೆಯ ಹಿರಿಯ ಅಧಿಕಾರಿ­ಯೊಬ್ಬರು ರಾತ್ರಿ ಎಸ್‌ಎಂಎಸ್‌ ಮಾಡಿ, ಯಾಕೆ ನಿಮ್ಮ ಮೇಲೆ ದಲಿತರ ಮೇಲೆ ದೌರ್ಜನ್ಯ ನಡೆಸಿದ ಪ್ರಕರಣ ದಾಖಲಿಸಬಾರದು ಎಂದು ನನ್ನನ್ನು ಬೆದರಿಸಿದ್ದರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT