ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪು ತಿಳಿವಳಿಕೆ

Last Updated 27 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

‘ನಾನು ಮತ್ತು ಪತ್ನಿ ಕಪ್ಪಿದ್ದರೂ ಮಗು ಹೇಗೆ ಬೆಳ್ಳಗೆ ಹುಟ್ಟಿತು?’ ಎಂದು ಪಲ್ಲವಿ ಎಂಬ ಪತ್ನಿಯ ಶೀಲ ಶಂಕಿಸಿ ಬಾಲಾಜಿ ಎಂಬ ಗಂಡ ಕೊಲೆ ಮಾಡಿದ್ದಲ್ಲದೆ, 11 ತಿಂಗಳ ಹೆಣ್ಣು ಮಗುವನ್ನೂ ನೀರಲ್ಲಿ ಅದ್ದಿ ಸಾಯಿಸಿರುವ ದಾರುಣ ವಾರ್ತೆ (ಪ್ರ.ವಾ., ಏ.6) ವರದಿಯಾಗಿದೆ.

ಇದಕ್ಕೆಲ್ಲ ಮುಖ್ಯ ಕಾರಣ  ತಪ್ಪು ತಿಳಿವಳಿಕೆ. ಹುಟ್ಟುವ ಮಕ್ಕಳು ಕಪ್ಪು, ಬಿಳುಪು ಅಥವಾ ಎತ್ತರ, ಕುಳ್ಳು ಆಗಿರುವುದಕ್ಕೆ ಆ ಕುಟುಂಬದ ತಲೆಮಾರುಗಳ ಹಿಂದಿನ ವ್ಯಕ್ತಿಗಳ ಗುಣ ಲಕ್ಷಣ ಕಾರಣವಾಗಿರ ಬಹುದು. ಶರೀರ ವಿಜ್ಞಾನದ ಪರಿಭಾಷೆಯಲ್ಲಿ ಹೀಗೆ ಹರಿದುಬರುವ ಗುಣ ಲಕ್ಷಣವನ್ನು ‘ಜೀನ್ಸ್‌’ ವರ್ಣ ತಂತುಗಳು ಎನ್ನಲಾಗಿದೆ. ಇದನ್ನು ವಿಜ್ಞಾನ ಸಾದರಪಡಿಸಿದೆ.

ಪಲ್ಲವಿ –ಬಾಲಾಜಿ ಮಗುವಿನ ಮೈಬಣ್ಣಕ್ಕೆ ಅವರ ಕುಟುಂಬದ ಹಿಂದಿನ ಯಾವುದೋ ವ್ಯಕ್ತಿ ಕಾರಣವಾಗಿರಬಹುದು. ಆದರೆ ತಿಳಿವಳಿಕೆ ಸಾಲದೆ ಇಂಥ ಅವಘಡಗಳು ಸಂಭವಿಸುತ್ತವೆ. ಮತ್ತು ಪುರುಷಾಧಿಕ್ಯ ಮೌಲ್ಯಗಳೂ ಕೆಲಸ ಮಾಡುತ್ತವೆ. ಪರಿಹಾರವೆಂದರೆ, ಪ್ರತೀ ಪ್ರಜೆಗೂ ವೈಜ್ಞಾನಿಕ ಶಿಕ್ಷಣ ನೀಡುವುದು. ಇದು ಸಮಾಜದ ಹಾಗೂ ಸರ್ಕಾರದ ಜವಾಬ್ದಾರಿ.
ಪ್ರೊ. ಶಿವರಾಮಯ್ಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT