ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪೊಪ್ಪಿಕೊಂಡ ಉಗ್ರ

Last Updated 27 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಶ್ರೀಲಂಕಾ ತಮಿಳನಾಗಿ ಮಲೇಷ್ಯಾದಲ್ಲಿ ನೆಲೆಸಿದ್ದ ಐಎಸ್‌ಐ ಬೇಹು­ಗಾರ ಮೊಹಮ್ಮದ್‌ ಜಹೀರ್‌ ಹುಸೇನ್‌, ತನ್ನ ವಿರುದ್ಧದ ಭಯೋ­ತ್ಪಾ­ದನಾ ದಾಳಿಗೆ ಸಂಚು ನಡೆ­ಸಿದ ದೋಷಾ­ರೋಪಗಳೆ­ಲ್ಲವೂ ಸರಿ ಎಂದು ಇಲ್ಲಿನ ಎನ್‌ಐಎ ಕೋರ್ಟ್‌­ನಲ್ಲಿ ಗುರು­ವಾರ ತಪ್ಪೊಪ್ಪಿ­ಕೊಂಡಿದ್ದಾನೆ.

ಆದರೆ ಇತರ ಇಬ್ಬರು ಶಂಕಿತ­ರಾದ ಶ್ರೀಲಂಕಾ ಪ್ರಜೆ ಶಿವ ಬಾಲನ್‌ ಮತ್ತು ಮೊಹಮ್ಮದ್‌ ಸಲೀಂ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. 

ಕೊಲಂಬೊದಲ್ಲಿನ ಪಾಕಿಸ್ತಾನ ಹೈಕ­ಮಿ­ಷ­ನ್‌ ಅಧಿಕಾರಿಗಳ ಸೂಚನೆ ಮೇರೆಗೆ ಭಯೋತ್ಪಾದನಾ ದಾಳಿಗಳಿಗೆ ಸಂಚು ನಡೆಸಿ, ಭಾರ­ತದ ವಿರುದ್ಧ ಯುದ್ಧ ಸಾರಿ­ರುವುದು ಸೇರಿದಂತೆ ಹಲವು ದೋಷಾ­ರೋಪ­ಗಳನ್ನು ಈ ಮೂವರು ಉಗ್ರರ ಮೇಲೆ ಹೊರಿಸ­ಲಾಗಿದೆ. 

ನಿಯೋಜಿತ ಎನ್‌ಐಎ ಕೋರ್ಟ್‌ನ ನ್ಯಾಯಾಧೀಶ ಎಂ. ಮೋನಿ ಅವರ ಮುಂದೆ ಈ ಶಂಕಿತರನ್ನು ಹಾಜರು­ಪಡಿಸಿ, ಐಪಿಸಿ ಮತ್ತು ಕಾನೂನುಬಾಹಿರ ಚಟು­ವಟಿಕೆ­ಗಳ (ತಡೆ) ಕಾಯ್ದೆಗಳಡಿ ದೋಷಾ­­ರೋಪ ಹೊರಿಸ­ಲಾಯಿತು.

ಅಮೆರಿಕ ಮತ್ತು ಇಸ್ರೇಲ್‌ ಕಾನ್ಸ­ಲೇಟ್‌ಗಳು ಸೇರಿದಂತೆ ಹಲವು ಸ್ಥಳಗಳ ಮೇಲೆ ಭಯೋತ್ಪಾದನಾ ದಾಳಿಗಳನ್ನು ನಡೆಸಲು ಸಂಚು ಹೂಡಿದ್ದಲ್ಲದೆ, ಭಾರ­ತದ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ನಕಲಿ ನೋಟು­ಗಳನ್ನು ಪ್ರಸಾರ ಮಾಡಿದ ಆರೋಪವೂ ಉಗ್ರರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT