ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಯಾರಿಕಾ ವಲಯದ ಪ್ರಗತಿ ಇಳಿಕೆ

Last Updated 1 ಸೆಪ್ಟೆಂಬರ್ 2015, 19:35 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ ತಯಾರಿಕಾ ವಲಯದ ಪ್ರಗತಿ ಆಗಸ್ಟ್‌ನಲ್ಲಿ ಶೇ 0.5ರಷ್ಟು ತಗ್ಗಿದ್ದು, ಶೇ 52.3ಕ್ಕೆ ಇಳಿಕೆಯಾಗಿದೆ ಎಂದು ತಯಾರಿಕಾ ವಲಯದ ಪ್ರಗತಿಯನ್ನು ಸೂಚಿಸುವ ನಿಕೇಯ್‌ ಇಂಡಿಯಾ ಮ್ಯಾನ್ಯುಫ್ಯಾಕ್ಚ ರಿಂಗ್‌ ಪಿಎಂಐ ಸಮೀಕ್ಷಾ ವರದಿ ತಿಳಿಸಿದೆ.

ಜುಲೈ ತಿಂಗಳಿನಲ್ಲಿ ಶೇ52.7ರಷ್ಟು ಆರು ತಿಂಗಳ ಗರಿಷ್ಠ ಮಟ್ಟದ ಪ್ರಗತಿ ಸಾಧಿಸಿತ್ತು. ತಯಾರಿಕಾ ವಲಯದ ರಫ್ತು ವಹಿವಾಟು ಇಳಿಕೆ ಆಗಿರುವುದೇ ಪ್ರಗತಿ ಇಳಿಕೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ತಯಾರಿಕಾ ವಲಯ ಚೇತರಿಸಿಕೊಳ್ಳಲಿದ್ದು, ಪ್ರಗತಿ ಹಾದಿಗೆ ಮರಳುವ ವಿಶ್ವಸವಿದೆ ಎಂದು ಹೇಳಿದೆ.

ದೇಶದಲ್ಲಷ್ಟೇ ಅಲ್ಲದೆ ವಿದೇಶ  ದಲ್ಲಿಯೂ ತಯಾರಿಕಾ ವಲಯದ ಸರಕುಗಳಿಗೆ ಬೇಡಿಕೆ ತಗ್ಗಿದೆ. ಇದರಿಂದ ಪ್ರಗತಿ ಇಳಿಕೆಯಾಗಿದೆ. ಜಾಗತಿಕ ಮಟ್ಟದಲ್ಲಿ ಪದಾರ್ಥಗಳ ಬೆಲೆ ಇಳಿಕೆಯಾಗುತ್ತಿದೆ.  ಇದರಿಂದ ಒಟ್ಟು  ವೆಚ್ಚವೂ ತಗ್ಗಿದೆ. ಇದು ಕಂಪೆನಿಗಳಿಗೆ ದರ ಹೊಂದಾಣಿಕೆ ಮಾಡಿಕೊಳ್ಳಲು ನೆರವಾಗಿದೆ ಎಂದು ವರದಿ ವಿಶ್ಲೇಷಣೆ ಮಾಡಿದೆ.

ಜಿಡಿಪಿ ಶೇ 7.5ರಿಂದ ಶೇ 7ಕ್ಕೆ ಕುಸಿದಿದೆ. ಮೂಲಸೌಕರ್ಯ ವಲಯದ ಪ್ರಮುಖ 8 ಕೈಗಾರಿಕೆಗಳು ಜುಲೈನಲ್ಲಿ ಶೇ 1.1ರಷ್ಟು ಅಲ್ಪ ಪ್ರಗತಿ ಸಾಧಿಸಿದೆ. ಈ ಎಲ್ಲಾ ಅಂಶಗಳು ಬಡ್ಡಿದರ ತಗ್ಗಿಸುವಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮೇಲೆ ಒತ್ತಡ  ಸೃಷ್ಟಿಸಿವೆ ಎಂದು ಸಮೀಕ್ಷಾ ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT